Advertisement
ಬೆಂಗಳೂರು: ಆಡಳಿತದಲ್ಲಿ ಕನ್ನಡ ಅನುಷ್ಠಾನ ನಿಟ್ಟಿನಲ್ಲಿ “ಕರ್ನಾಟಕ ರಾಜಭಾಷಾ ಅಧಿನಿಯಮ’ ರೂಪಿಸಿ ಐವತ್ತೆಂಟು ವರ್ಷ ಕಳೆದರೂ ಪೂರ್ಣ ಪ್ರಮಾಣದಲ್ಲಿ ಆಡಳಿತದಲ್ಲಿ ಕನ್ನಡ ಜಾರಿ ಇನ್ನೂ ಮರೀಚಿಕೆಯಾಗಿಯೇ ಉಳಿದಿದೆ.
Advertisement
ನೆರೆಯ ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಗೋವಾ ರಾಜ್ಯಗಳಿಗೆ ಹೋಲಿ ಸಿದರೆ ಕರ್ನಾಟಕದಲ್ಲಿ ಆಡಳಿತ ದಲ್ಲಿ ಕನ್ನಡ ಶೇ.75ರಷ್ಟು ಜಾರಿ ಯಲ್ಲಿದೆ ಎಂಬುದು ನೆಮ್ಮದಿಯ ಸಂಗತಿಯಾದರೂ ಶೇ.100ರಷ್ಟು ಜಾರಿಗೆ ಇಚ್ಛಾಶಕ್ತಿಯ ಕೊರತೆ ಎದ್ದು ಕಾಣುತ್ತಿದೆ.
ಕೇಂದ್ರ ಸರಕಾರದ ಜತೆಗಿನ ಪತ್ರ ವ್ಯವಹಾರ ಹೊರತು ಪಡಿಸಿ ಉಳಿದೆಲ್ಲೂ ಕನ್ನಡದಲ್ಲೇ ಇರಬೇಕು ಎಂಬುದು ಸೇರಿ ಆಡಳಿತದಲ್ಲಿ ಕನ್ನಡ ಅನುಷ್ಠಾನ ಸಂಬಂಧ ಇದುವರೆ ಗೂ 250 ಆದೇಶಗಳು ಹೊರಡಿಸಲಾಗಿದ್ದರೂ ಸರಕಾರವೇ ಪಾಲನೆ ಮಾಡುತ್ತಿಲ್ಲ.
ಪಾಟೀಲ ಪುಟ್ಟಪ್ಪ ಶ್ರಮ1963ರಲ್ಲೇ ಆಡಳಿತದಲ್ಲಿ ಕನ್ನಡ ಜಾರಿ ಸಂಬಂಧ “ಕರ್ನಾಟಕ ರಾಜಭಾಷಾ ಅಧಿ ನಿಯಮ’ ಜಾರಿಯಾದರೂ ರಾಜ್ಯದಲ್ಲಿ ಆಡಳಿತದಲ್ಲಿ ಕನ್ನಡ ಅನುಷ್ಠಾನಕ್ಕೆ ಹೆಚ್ಚು ಒತ್ತು ಸಿಕ್ಕಿದ್ದು ರಾಮಕೃಷ್ಣ ಹೆಗಡೆ ಅವರು ಮುಖ್ಯಮಂತ್ರಿಯಾಗಿದ್ದಾಗ. ಆಗ, ಕನ್ನಡ ಕಾವಲು ಸಮಿತಿ ಅಧ್ಯಕ್ಷ ರಾಗಿದ್ದವರು ಈಗಿನ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು. ಅಲ್ಲಿಂದ ಆಡಳಿತದಲ್ಲಿ ಕನ್ನಡ ಜಾರಿ ವಿಚಾರದಲ್ಲಿ ವೇಗ ದೊರೆಯಿತು. ಇದನ್ನೂ ಓದಿ:ರಾಜಧಾನಿಯಲ್ಲಿ ಎವೈ 4.2 ರೂಪಾಂತರಿ ಪ್ರಕರಣ ವರದಿ ಅನಂತರ ಕನ್ನಡ ಕಾವಲು ಸಮಿತಿಯ ಅಧ್ಯಕ್ಷರಾಗಿದ್ದ ಪಾಟೀಲ ಪುಟ್ಟಪ್ಪ ಅವರು ಗ್ರಾಮ ಲೆಕ್ಕಿಗನಿಂದ ರಾಜ್ಯಪಾಲರವರೆಗೆ ಆಡಳಿತದಲ್ಲಿ ಕನ್ನಡ ಜಾರಿಯಾಗಬೇಕು ಎಂದು ಪಟ್ಟು ಹಿಡಿದು ಆ ನಿಟ್ಟಿನಲ್ಲಿ ಶ್ರಮವಹಿಸಿದ ಕಾರಣ ಆಡಳಿತದಲ್ಲಿ ಕನ್ನಡ ಅನುಷ್ಠಾನ ಸಂಬಂಧ ಸಾಕಷ್ಟು ಆದೇಶಗಳು ಹೊರಬಿದ್ದವು. ಅದರಿಂದಾಗಿ ಇಂದು ಆಡಳಿತದಲ್ಲಿ ಕನ್ನಡ ಬಹುತೇಕ ಕಡೆ ಪಾಲನೆಯಾಗುವಂತಾಗಿದೆ. ಆಡಳಿತದಲ್ಲಿ ಕನ್ನಡ ಆದೇಶಗಳು
1963:ಕರ್ನಾಟಕ ರಾಜಭಾಷಾ ಅಧಿನಿಯಮ ಜಾರಿ
1968:ತಾಲೂಕು ಆಡಳಿತದಲ್ಲಿ ಕನ್ನಡ ಆದೇಶ
1970:ಉಪ ವಿಭಾಗದ ಮಟ್ಟದ ಆಡಳಿತದಲ್ಲಿ ಕನ್ನಡ ಆದೇಶ
1972:ಜಿಲ್ಲಾ ಆಡಳಿತದಲ್ಲಿ ಕನ್ನಡ ಆದೇಶ
1974:ಮ್ಯಾಜಿಸ್ಟ್ರೇಟ್ ನ್ಯಾಯಾಲಯಗಳಲ್ಲಿ ಕನ್ನಡ ಅನುಷ್ಠಾನ ಆದೇಶ
1976:ವಿಶ್ವವಿದ್ಯಾನಿಲಯ, ನಿಗಮ- ಮಂಡಳಿಗಳ ಆಡಳಿತದಲ್ಲಿ ಕನ್ನಡ ಜಾರಿ ಆದೇಶ
1979:ಸಚಿವಾಲಯದ ಆಡಳಿತದಲ್ಲಿ ಕನ್ನಡ ಜಾರಿಗೆ ಆದೇಶ ಆಡಳಿತದಲ್ಲಿ ಕನ್ನಡ ಕುರಿತು 1963ರಲ್ಲಿ “ಕರ್ನಾಟಕ ರಾಜಭಾಷಾ ಅಧಿನಿಯಮ’ ಜಾರಿಯಾದರೂ ಅದು ಅನುಷ್ಠಾನಕ್ಕೆ ಐದು ವರ್ಷಗಳು ಬೇಕಾದವು. 1979ರ ವರೆಗೂ ಆಡಳಿತದಲ್ಲಿ ಕನ್ನಡ ಜಾರಿ ಕುರಿತು ಹೊರಡಿಸಿದ ಆದೇಶಗಳು ಇಂಗ್ಲಿಷ್‌ನಲ್ಲೇ ಇರುತ್ತಿತ್ತು. ಆಡಳಿತದಲ್ಲಿ ಕನ್ನಡ ಬಳಸಲು ಏನೇನು ಸೌಕರ್ಯ ಬೇಕೋ ಅವೆಲ್ಲವೂ ಇವೆ. ಆಡಳಿತ ಪೂರಕ ಕನ್ನಡ ಪದಕೋಶ, ಕಾನೂನು ಪದಕೋಶವೂ ಇದೆ. ವಿಧಾನಸೌಧ-ಸಚಿವಾಲಯ ಮಟ್ಟದ ಆಡಳಿತದಲ್ಲಿ ಕನ್ನಡ ಜಾರಿಯಾದರೆ ಸಹಜವಾಗಿ ತಾಲೂಕು ಮಟ್ಟದಲ್ಲಿ ಜಾರಿಯಾಗುತ್ತದೆ. ಐಎಎಸ್- ಐಪಿಎಸ್ ಅಧಿಕಾರಿಗಳು ಈ ವಿಚಾರದಲ್ಲಿ ಇಚ್ಛಾಶಕ್ತಿ ಪ್ರದರ್ಶಿಸಬೇಕು.
-ಕೆ.ರಾಜಕುಮಾರ್, ನಿಕಟಪೂರ್ವ ಗೌರವ ಕಾರ್ಯದರ್ಶಿ ಕ.ಸಾ.ಪ. ರಾಜ್ಯದ ಆಡಳಿತದಲ್ಲಿ ಕನ್ನಡ ಅನುಷ್ಠಾನ ಸಂಬಂಧ ಸುಮಾರು 250 ಆದೇಶಗಳು ಹೊರ ಬಿದ್ದಿವೆ. ಆದರೆ, ಅವುಗಳಲ್ಲಿ ಬಹುತೇಕ ಕಡತದಿಂದ ಹೊರಬಂದಿಲ್ಲ. ನಾರಾಯಣಸ್ವಾಮಿ ವರದಿ, ಮಾಸ್ತಿ ವೆಂಕಟೇಶ ಅಯ್ಯಂಗಾರ್ ಸಮಿತಿ ವರದಿಯಲ್ಲಿ ತಾಲೂಕು ಮಟ್ಟದಿಂದ ಆಡಳಿತದಲ್ಲಿ ಕನ್ನಡ ಹೇಗೆ ಜಾರಿಯಾಗಬೇಕು ಎಂಬ ಶಿಫಾರಸು ಮಾಡಲಾಗಿತ್ತು. ಮಹಿಷಿ ವರದಿಯಲ್ಲೂ ಸಾಕಷ್ಟು ಶಿಫಾರಸು ಮಾಡಲಾಗಿತ್ತು. ಮುಖ್ಯಮಂತ್ರಿಯವರ ಕಚೇರಿಯಲ್ಲೂ ಸಂಪೂರ್ಣ ಕನ್ನಡ ಬಳಕೆಯಾ ಗುತ್ತಿಲ್ಲ. ಪ್ರಮುಖವಾಗಿ ಇಲಾಖೆಗಳಲ್ಲಿ ಕನ್ನಡ ಬಳಕೆ ಬಗ್ಗೆ ಸರಕಾರ ಗಂಭೀರವಾಗಿ ಪರಿಗಣಿಸಬೇಕು.
-ರಾ.ನಂ. ಚಂದ್ರಶೇಖರ್ ಸಂಚಾಲಕ, ಕನ್ನಡ ಗೆಳೆಯರ ಬಳಗ