Advertisement

ಲಲಿತಮಹಲ್‌ ಅರಮನೆಗೆ ಭರ್ತಿನೂರು ವರ್ಷ

02:03 PM Nov 19, 2021 | Team Udayavani |

ಮೈಸೂರು: ಮೈಸೂರಿನ ಲಲಿತ ಮಹಲ್‌ ಅರಮನೆಗೆ ಭರ್ತಿ ನೂರು ವರ್ಷ ತುಂಬಿದೆ. ನೂರು ವರ್ಷಗಳ ಹಿಂದೆ ಅಂದರೆ 1821ರ ನವೆಂಬರ್‌ 18ರಂದು ಲಲಿತಮಹಲ್‌ ಅರಮನೆ ನಿರ್ಮಿಸಲಾಯಿತು.

Advertisement

ಲಲಿತ ಮಹಲ್‌ ಅರಮನೆಗೆ ನೂರು ವರ್ಷ ತುಂಬಿರುವ ಹಿನ್ನೆಲೆಯಲ್ಲಿ ಸರ್ಕಾರ ಗುರುವಾರ ಶತಮಾನೋತ್ಸವ ಸಮಾರಂಭ ನಡೆಸಲು ನಿರ್ಧರಿಸಿತ್ತು. ಆದರೆ, ವಿಧಾನಪರಿಷತ್ತಿಗೆ ಚುನಾವಣೆ ಘೋಷಣೆಯಾಗಿ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ಸಮಾರಂಭವನ್ನು ಮುಂದಿನ ವರ್ಷ ಮಾರ್ಚ್ ನಲ್ಲಿ ನಡೆಸಲು ಜಂಗಲ್‌ ಲಾಡ್ಜಸ್‌ ನಿರ್ಧರಿಸಿದೆ. ಲಲತಮಹಲ್‌ ಅರಮನೆಗೆ ಇಂದಿಗೆ ನೂರು ವರ್ಷ ತುಂಬಿತು.

ಇದು ವಿಶಾಲವಾದ 52 ಎಕರೆ ಜಾಗವನ್ನು ಹೊಂದಿದೆ. ಇದನ್ನು ನಿರ್ಮಿಸಿದ ಮೈಸೂರನ್ನು ಆಳಿದ ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರ ಪ್ರತಿಮೆಯನ್ನು ಲಲತಮಹಲ್‌ ಅರಮನೆ ಮುಂಭಾಗ ಪ್ರತಿಷ್ಠಾಪಿಸಲು ನಿರ್ಧರಿಸಲಾಗಿದೆ. ಚುನಾವಣಾ ನೀತಿ ಸಂಹಿತೆ ಕಾರಣ ಪ್ರತಿಮೆ ಪ್ರತಿಷ್ಠಾಪನೆ ಹಾಗೂ ಶತಮಾನೋತ್ಸವ ಕಾರ್ಯಕ್ರಮವನ್ನು ಮುಂದಿನ ವರ್ಷ ಮಾರ್ಚ್‌ನಲ್ಲಿ ನಡೆಸುತ್ತೇವೆ.

ಪ್ರತಿಮೆ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. ಲಲತಮಹಲ್‌ ಅರಮನೆ ಮುಂಭಾಗ ಅಳವಡಿಸಬೇಕಿದೆ ಎಂದು ರಾಜ್ಯ ಜಂಗಲ್‌ ಲಾಡ್ಜಸ್‌ ಮತ್ತು ರೆಸಾರ್ಟ್ಸ್ ಅಧ್ಯಕ್ಷ ಅಪ್ಪಣ್ಣ ನಾಯಕ ಗುರುವಾರ ಉದಯವಾಣಿಗೆ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next