ಮೈಸೂರು: “ಹೇ ಭಗವಂತ ! ಮಿತಿ ಮೀರಿದ ಸಾಲದಿಂದ ಜೀವನದಲ್ಲಿ ಬಹಳ ಕಷ್ಟ ಅನುಭವಿಸಿದ್ದೇನೆ. ಸಣ್ಣ ಪುಟ್ಟ ವಿಷ ಯಕ್ಕೂ ಗಂಡ ಜಗಳವಾಡುತ್ತಾರೆ. ನನಗೆ ಬದುಕಲು ಸಾಧ್ಯವಾಗುತ್ತಿಲ್ಲ. ಶನಿದೇವ ನನ್ನ ಸಾವಿಗೆ ಯಾರೂ ಕಾರಣರಲ್ಲ…’ ಇಂಥದೊಂದು ಪತ್ರದ ಒಕ್ಕಣೆ ಸಿಕ್ಕಿದ್ದು, ನಂಜನಗೂಡು ಶ್ರೀಕಂಠೇಶ್ವರ ದೇಗುಲದ ಹುಂಡಿ ಎಣಿಕೆ ಸಂದರ್ಭ.
ದೇವಾಲಯದಲ್ಲಿ ಮಂಗಳವಾರ ಹುಂಡಿ ಒಡೆದಾಗ ಸಿಕ್ಕ ಹತ್ತಾರು ಪತ್ರಗಳ ಪೈಕಿ, ಒಂದು ಪತ್ರದಲ್ಲಿ ಮಹಿಳೆಯೋರ್ವರು ತನ್ನೆಲ್ಲಾ ಕಷ್ಟವನ್ನು ಉಲ್ಲೇಖೀಸಿ ನಾನು ಸಾವಿಗೆ ಶರಣಾಗುತ್ತಿದ್ದೇನೆ ಎಂದು ದೇವರಿಗೆ ಬರೆದ ಪತ್ರವಿದು.
ವಿಪರೀತ ಸಾಲ, ಬಡ್ಡಿ, ಬ್ಯಾಂಕಿನ ಸಾಲ ಕಟ್ಟಲಾಗುತ್ತಿಲ್ಲ. ಸಾಲದ್ದಕ್ಕೆ ನನ್ನೆಲ್ಲಾ ಒಡವೆಯನ್ನು ಗಿರವಿ ಇಟ್ಟಿರುವೆ. ನನ್ನ ಬಳಿ ಹಣ ಇಲ್ಲದ್ದಕ್ಕೆ ಗಂಡ ಸಣ್ಣ ವಿಚಾರಕ್ಕೂ ಜಗಳವಾಡುತ್ತಾರೆ. ಸಾಲಕ್ಕಾಗಿ ಬ್ಯಾಂಕಿಗೆ ಅರ್ಜಿ ಸಲ್ಲಿಸಿದ್ದೆ, ಅದೂ ಆಗಲಿಲ್ಲ. ನಿತ್ಯವೂ ನೋವು ಅನುಭವಿಸುತ್ತಿ ರುವೆ. ನಿತ್ಯವೂ ಸಣ್ಣ ವಿಚಾರಕ್ಕೂ ಜಗಳ ನಡೆಯುತ್ತೆ. ನನಗೆ ಈ ಜೀವನ ಬೇಡ ಎಂದು ತೀರ್ಮಾನಿಸಿದ್ದೇನೆ. ನಾನು ಸತ್ತ ಮೇಲೆ ಗಂಡ, ಮಗ, ತಾಯಿ-ತಂದೆ ನನ್ನ ಚಿಂತೆ ಬಿಟ್ಟು ನೆಮ್ಮದಿಯಿಂದ ಬದುಕಲಿ ಎಂಬ ಮಹಿಳೆಯ ಸಂಕಟ ದೇವರನ್ನು ತಲುಪಿತೋ ಇಲ್ಲವೋ. ಆದರೆ, ದೇವಾಲಯದಲ್ಲಿನ ಹುಂಡಿ ಎಣಿಕೆ ಸಂದರ್ಭ ಈ ಆತ್ಮಹತ್ಯೆ ಪತ್ರ ಎಲ್ಲರನ್ನೂ ಬೇಸರ ಗೊಳಿಸಿದ್ದಂತೂ ಸುಳ್ಳಲ್ಲ.
ಹುಂಡಿ ಎಣಿಕೆ ಕಾರ್ಯದಲ್ಲಿ ಪರೀಕ್ಷೆ ಯಲ್ಲಿ ಪಾಸು ಮಾಡು, ಸಕಲ ಸಂಪತ್ತು ನೀಡು, ಮಕ್ಕಳನ್ನು ಕರುಣಿಸು, ಆಸ್ತಿ ಕೊಡು ಎಂಬಿತ್ಯಾದಿ ಪತ್ರಗಳು ದೊರಕುವುದು ಸಾಮಾನ್ಯ. ಆದರೆ, ಮಹಿಳೆ ಆತ್ಮ ಹತ್ಯೆ ಮಾಡಿಕೊಳ್ಳುವುದಕ್ಕೂ ಮುನ್ನಾ ಕಾರಣ ಬರೆದು, ಅದನ್ನು ದೇಗುಲದ ಹುಂಡಿಗೆ ಹಾಕಿರುವುದು ವಿಚಿತ್ರ.
ಮಗುವಿನ ದೋಷ ನಿವಾರಣೆ ಮಾಡು: ಮತ್ತೋರ್ವ ಮಹಿಳೆ ಮಗುವಿನ ಜಾತಕದಲ್ಲಿರುವ ದೋಷದಿಂದ ಚಿಂತೆಗೀಡಾಗಿದ್ದೇನೆ. ನನಗೆ ಇದರಿಂದ ಮುಕ್ತಿ ಕೊಡು. ಒಳ್ಳೆಯ ಶಾಲೆಯಲ್ಲಿ ಸೀಟು ಸಿಗುವಂತೆ ಮಾಡು ಎಂದು ಪತ್ರ ಬರೆದಿರುವ ಭಕ್ತೆ ಅದನ್ನು ಹುಂಡಿಗೆ ಹಾಕಿದ್ದಾರೆ.
ಬೈಕು, ಕಾರು ಸಂತ ದುಡ್ವಲ್ಡಿಕೊಳ್ಳುವ ಶಕ್ತಿ ನೀಡು: ಮತ್ತೋರ್ವ ಭಕ್ತ ಮಹಾಶಯೆ, ದೇವರಿಗೆ ಬರದಿರುವ ಪತ್ರದಲ್ಲಿ ನನಗೆ ಸ್ವಂತ ಸ್ಕೂಟ ರ್, ಕಾರು ಬೇಕು. ಏನೆಲ್ಲ ಬೇಕೋ ಅದೆಲ್ಲವನ್ನು ಸ್ವಂತ ದುಡ್ಡಿನಲ್ಲೇ ತೆಗೆದುಕೊಳ್ಳ ಬೇಕು. ಅದಕ್ಕೆ ಬಿಸಿಎ ಮುಗಿಸಿ ದಾಕ್ಷಣ ಕೆಲಸ ಸಿಗುವಂತೆ ಮಾಡು. 2 ಚಿನ್ನದ ಬಳೆ, 5 ಓಲೆ, 7 ಚಿನ್ನದ ಸರ ಬೇಕು. ಇದಕ್ಕೆ ದುಡಿಯುವ ಶಕ್ತಿ, ಕೆಲಸ ಕೊಡು ಎಂದು ವಿನಂತಿಸಿಕೊಂಡಿದ್ದಾರೆ.