ಹುಣಸೂರು : ರೈತ ಹಾಗೂ ವಿವಿಧ ಪ್ರಗತಿಪರ ಸಂಘಟನೆಗಳು ಕೇಂದ್ರದ ಕೃಷಿ ಕಾಯ್ದೆ, ಖಾಸಗಿಕರಣ ವಿರೋಧಿಸಿ ಸೆ.27 ಭಾರತ್ ಬಂದ್‌ನ್ನು ಹುಣಸೂರಿನಲ್ಲಿ ಯಶಸ್ವಿಯಾಗಿಸಲು ಗುರುವಾರ ನಡೆದ ತಾಲೂಕಿನ ವಿವಿಧ ಸಂಘಟನೆಗಳು ತೀರ್ಮಾನಿಸಿದವು.
ನಗರದ ಪ್ರವಾಸಿ ಮಂದಿರದಲ್ಲಿ ನಡೆದ ರೈತ ಸಂಘ ಹಾಗೂ ವಿವಿಧ ಪ್ರಗತಿಪರ ಸಂಘಟನೆಗಳ ಪ್ರಮುಖರ ಸಭೆಯಲ್ಲಿ ಚರ್ಚೆ ನಡೆದು, ತಾಲೂಕು ಹಾಗೂ ಹೋಬಳಿ ಕೇಂದ್ರದಲ್ಲಿನ ಆಟೋ, ವಾಹನ ಚಾಲಕರ ಸಂಘ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳವರು ಬಂದ್‌ಗೆ ಸಹಕರಿಸುವಂತೆ ಕೋರಿ ವಿಶ್ವಾಸಕ್ಕೆ ಪಡೆದು ಬಂದ್ ಯಶಸ್ವಿಯಾಗಿಸಲು ತೀರ್ಮಾನಿಸಲಾಯಿತೆಂದು ರೈತ ಸಂಘದ ಜಿಲ್ಲಾಧ್ಯಕ್ಷ ಹೊಸೂರುಕುಮಾರ್ ತಿಳಿಸಿದರು.
ಇದೇ ವೇಳೆ ಮುಖಂಡರು ಭಾರತ್ ಬಂದ್‌ನ ಪೋಸ್ಟರ್ ಬಿಡುಗಡೆಗೊಳಿಸಿ, ತಾಲೂಕಿನ ಜನತೆ ಬಂದ್‌ಗೆ ಬೆಂಬಲಿಸುವಂತೆ ಮನವಿ ಮಾಡಿದರು.
ಸಭೆಯಲ್ಲಿ ರೈತಸಂಘದ ಮುಖಂಡರಾದ ಬೆಂಕಿಪುರಚಿಕ್ಕಣ್ಣ, ಮಂಜುನಾಥ್, ರಾಮೇಗೌಡ, ಕಮ್ಯುನಿಸ್ಟ್ ಪಕ್ಷದ ಬಸವರಾಜು, ಶಿವಣ್ಣ, ದಸಂಸದ ಜೆ.ಮಹದೇವ್, ರತ್ನಪುರಿ ಪುಟ್ಟಸ್ವಾಮಿ,ಅತ್ತಿಕುಪ್ಪೆರಾಮಕೃಷ್ಣ, ರಾಜು,ಕಿರಿಜಾಜಿ ಗಜೇಂದ್ರ ಸೇರಿದಂತೆ ಅನೇಕ ಮುಖಂಡರುಗಳು ಇದ್ದರು.
ಇದನ್ನೂ ಓದಿ :ಬಾಸ್ಕೆಟ್‌ಬಾಲ್ ಪಟು ಸತ್ನಾಮ್ ವೃತ್ತಿಪರ ಕುಸ್ತಿಗೆ ಹಾಜರ್!