Advertisement
ನಾಗರಹೊಳೆ ಉದ್ಯಾನವನದಂಚಿನ ಸುತ್ತಮುತ್ತಲ ಗ್ರಾಮಗಳಲ್ಲಿ ಕಳೆದ ಒಂದು ವರ್ಷದಿಂದ ಕಾಡಂಚಿನ ಜಮೀನುಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಹುಲಿಯು ನೇರಳಕುಪ್ಪೆ ಗ್ರಾಮದ ಸುತ್ತೆಲ್ಲಾ ಓಡಾಡಿದ್ದು, ಸೋಮವಾರ ರಾತ್ರಿ ಮುದ್ದೆಗೌಡರ ಮನೆ ಅಂಗಳದಲ್ಲಿ ಹೆಜ್ಜೆ ಗುರುತು ಕಂಡು ಬಂದಿದೆ. ಇದರಿಂದ ಮನೆ ಮಂದಿ ಹಾಗೂ ಅಕ್ಕಪಕ್ಕದ ಮನೆಯವರಲ್ಲಿ ಭಯ ಆವರಿಸಿದ್ದು, ಗ್ರಾಮಸ್ಥರು ನೀಡಿದ ಮಾಹಿತಿ ಮೇರೆಗೆ ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಹುಲಿಯು ಹನಗೋಡು ಹಾಗೂ ಸುತ್ತ ಮುತ್ತಲ ಗ್ರಾಮಗಳಲ್ಲಿ ಕಳೆದ ಒಂದು ವರ್ಷದಿಂದ ಕಾಣಿಸಿಕೊಳ್ಳುತ್ತಿದ್ದು, ಹತ್ತಾರು ಆಡು, ಕುರಿ, ಹಸುಗಳನ್ನು ಬಲಿ ಪಡೆದಿದೆ. ಸಮಾರು ಹತ್ತು ಕಿ.ಮೀ. ವ್ಯಾಪ್ತಿಯಲ್ಲಿ ಓಡಾಡುತ್ತಿರುವ ಈ ಹುಲಿಯನ್ನು ಸೆರೆ ಹಿಡಿಯಬೇಕೆಂದು ರೈತರು ಒತ್ತಾಯಿಸಿದ್ದಾರೆ. ಇಲ್ಲದಿದ್ದಲ್ಲಿ ಅರಣ್ಯ ಇಲಾಖೆ ವಿರುದ್ದ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದಾರೆ. ಎಚ್ಚರ ವಹಿಸಲು ಮನವಿ: ಅನಾವಶ್ಯಕವಾಗಿ ಒಬ್ಬರೇ ಓಡಾಡುವುದನ್ನು ಕಡಿಮೆ ಮಾಡುವಂತೆ ಹಾಗೂ ಸಾಕು ಪ್ರಾಣಿ, ರಾಸುಗಳನ್ನು ಮನೆಯ ಹೊರಗಡೆ ಕಟ್ಟದಂತೆ ಅರಣ್ಯಾಧಿಕಾರಿಗಳು ಮನವಿ ಮಾಡಿದ್ದು, ಸಾಕು ಪ್ರಾಣಿಗಳ ಕೂಗಾಡಿದ ವೇಳೆ ಒಮ್ಮೆಲೆ ಮನೆಯಿಂದ ಹೊರಬರದೆ ಕಿಟಕಿ ಮೂಲಕ ವೀಕ್ಷಿಸಿದ ನಂತರವಷ್ಟೆ ಹೊರಬರಲು ಹಾಗೂ ಹೆಜ್ಜೆ ಗುರುತು ಪತ್ತೆಯಾದ ತಕ್ಷಣವೇ ಸಿಬ್ಬಂದಿಗಳಿಗೆ ಮಾಹಿತಿ ನೀಡುವಂತೆ ಮನವಿ ಮಾಡಿದ್ದಾರೆ.
Related Articles
Advertisement