Advertisement
ಹುಣಸೂರಿನ ವಕೀಲರಾದ ಉಂಡವಾಡಿಯ ಸಿ.ದಿನೇಶ್(46) ಹಾಗೂ ಗಿರೀಶ್(44), ಸಾವನ್ನಪ್ಪಿದವರು, ಅಶೋಕ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ದಿನೇಶರಿಗೆ ಪತ್ನಿ, 3 ವರ್ಷದ ಒಂದು ಗಂಡು ಮಗುವಿದೆ. ಗಿರೀಶರಿಗೆ ಪತ್ನಿ, ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಕಟ್ಟೆಮಳಲವಾಡಿಯ ಅಶೋಕ್ ಬದುಕುಳಿದಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಪ್ರಕರಣವೊಂದರ ಸಂಬಂಧ ಎಚ್.ಡಿ.ಕೋಟೆಗೆ ತೆರಳಿದ್ದ ಮೂವರು ವಕೀಲರು ಊಟ ಮಾಡಲು ಕಬಿನಿ ಡ್ಯಾಂಬಳಿಯ ಬಿದರಹಳ್ಳಿ ಸರ್ಕಲ್‌ನ ಹೋಟೆಲ್‌ಗೆ ತೆರಳಿದ್ದರು, ವಾಪಸ್ ಬರುತ್ತಿದ್ದ ವೇಳೆ ನಿಯಂತ್ರಣ ತಪ್ಪಿದ ಕಾರು ಸಾಗರೆ ಬಳಿಯ ಬೆಟ್ಟಯ್ಯನ ಸೇತುವೆಗೆ ಅಳವಡಿಸಿದ್ದ ತಡೆಗೋಡೆಗೆ ಗುದ್ದಿ ಕಬಿನಿ ಬಲದಂಡೆ ನಾಲೆಗೆ ಬಿದ್ದಿದೆ.
Related Articles
Advertisement
ಸಿ.ಡಿ.ದಿನೇಶ್ ಹಾಗೂ ಗಿರೀಶ್ ಶವಕ್ಕಾಗಿ ಸ್ಥಳೀಯ ಈಜುಗಾರರು, ಅಗ್ನಿಶಾಮಕ ದಳದ ಸಿಬ್ಬಂದಿಗಳು ಧಾವಿಸಿ ಹುಡುಕಾಟ ನಡೆಸಿದರೂ ಪತ್ತೆಯಾಗಿಲ್ಲ. ಈ ಸಂಬಂಧ ಸರಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಾಲೆಯಲ್ಲಿ ನೀರು ಕಡಿಮೆ ಮಾಡಲು ಕಬಿನಿ ಜಲಾಶಯದ ಅಧಿಕಾರಿಗಳಿಗೆ ಸೂಚಿಸಲಾಗಿದ್ದು, ರಾತ್ರಿಯಾಗಿದ್ದರಿಂದಾಗಿ ಬೆಳಗ್ಗೆ ಶವವನ್ನು ಹುಡುಕಲಾಗುವುದೆಂದು ಡಿವೈ ಎಸ್‌ಪಿ ರವಿಪ್ರಸಾದ್ ತಿಳಿಸಿದ್ದಾರೆ.