ಹುಣಸೂರು: ಹುಣಸೂರು ನಗರ ಪೊಲೀಸ್ ಠಾಣೆ ವ್ಯಾಪ್ತಿಯ ರೌಡಿ ಶೀಟರ್ ಪಟ್ಟಿಯಲ್ಲಿರುವವರ ಪೆರೆಡ್ ನಡೆಸಿದರು.
ನಗರ ಪೊಲೀಸ್ ಠಾಣೆ ಸಭಾಂಗಣದಲ್ಲಿ ರೌಡಿಶೀಟರ್ ಪೆರೆಡ್ ನಡೆಸಿದ ಇನ್ಸ್ಪೆಕ್ಟರ್ ದೇವೇಂದ್ರ ಮೇ.೧೦ರಂದು ವಿಧಾನಸಭೆ ಸಾರ್ವತ್ರಿಕ ಚುನಾವಣೆ ನಡೆಯಲಿದ್ದು, ಗೊತ್ತಿದ್ದೋ ಗೊತ್ತಿಲ್ಲದೆಯೋ ರೌಡಿ ಹಣೆಪಟ್ಟಿ ಕಟ್ಟಿಕೊಂಡಿದ್ದೀರಾ, ಇದರಿಂದ ಹೊರಬರಲು ಎಚ್ಚರವಹಿಸಬೇಕಿದೆ.
ರೌಡಿ ಶೀಟರ್ ಪಟ್ಟಿಗೆ ಸೇರಿರುವವರು ನಗರ ವ್ಯಾಪ್ತಿಯಲ್ಲಿ ಅನಾವಶ್ಯಕವಾಗಿ ರಾತ್ರಿವೇಳೆ ಓಡಾಡುವುದು ತರವಲ್ಲ, ಯಾವುದೇ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗದಂತೆ ಮತ್ತು ಸಾರ್ವಜನಿಕರ ನೆಮ್ಮದಿಗೆ ಭಂಗ ಉಂಟಾಗದಂತೆ ಸನ್ನಡತೆಯಿಂದ ನಡೆದುಕೊಳ್ಳಬೇಕು. ತಪ್ಪಿದಲ್ಲಿ ಸೂಕ್ತ ಕಾನೂನು ಕ್ರಮ ಜರುಗಿಸುವ ಜೊತೆಗೆ ಗಡಿಪಾರು ಮಾಡಲು ಶಿಪಾರಸ್ಸು ಮಾಡಲಾಗುವುದೆಂದು ಎಚ್ಚರಿಸಿದರು.
ಈ ವೇಳೆ ಪಿ.ಎಸ್.ಐ. ಶ್ರೀಧರ್ ಮತ್ತು ಸಿಬ್ಬಂದಿಗಳು ಹಾಜರಿದ್ದರು.
ಇದನ್ನೂ ಓದಿ: ಗೆದ್ದಲು ತಿನ್ನುತ್ತಿರುವ 2000 ಮನೆ ನಿವೇಶನದ ಅರ್ಜಿಗಳನ್ನು ಮತ್ತೆ ಓಪನ್ ಮಾಡ್ತಿನಿ: ಸೊರಕೆ