Advertisement

ಹುಣಸೂರು ನಗರಸಭೆ ಅತಂತ್ರ: ಕೈಗೆ 14, ದಳ 7, ಮೊದಲ ಬಾರಿಗೆ ಖಾತೆ ತೆರೆದ ಬಿಜೆಪಿ

09:57 AM Feb 12, 2020 | keerthan |

ಮೈಸೂರು: ಹುಣಸೂರು ನಗರಸಭೆಗೆ ನಡೆದ ಚುನಾವಣೆಯ ಫಲಿತಾಂಶ ಪ್ರಕಟವಾಗಿದೆ. 31 ವಾರ್ಡ್ ನ ನಗರಸಭೆಯಲ್ಲಿ ಯಾವ ಪಕ್ಷಕ್ಕೂ ಬಹುಮತ ಲಭಿಸದೆ ನಗರಸಭೆ ಅತಂತ್ರವಾಗಿದೆ.

Advertisement

ಕಾಂಗ್ರೆಸ್ 14 ಕ್ಷೇತ್ರಗಳಲ್ಲಿ ಜಯ ಸಾಧಿಸಿದ್ದರೆ, ಜೆಡಿಎಸ್ ಏಳು ಕ್ಷೇತ್ರಗಳಲ್ಲಿ ಗೆಲುವು ಕಂಡಿದೆ. ಭಾರತೀಯ ಜನತಾ ಪಕ್ಷ ಇದೇ ಮೊದಲ ಬಾರಿಗೆ ಹುಣಸೂರು ನಗರಸಭೆಯಲ್ಲಿ ಖಾತೆ ತೆರೆದಿದ್ದು, ಮೂರು ಕ್ಷೇತ್ರಗಳಲ್ಲಿ ಜಯ ಸಾಧಿಸಿದೆ.

ಉಳಿದಂತೆ ಎಸ್ ಡಿಪಿಐ ಎರಡು ಕ್ಷೇತ್ರಗಳನ್ನು ತನ್ನದಾಗಿಸಿದರೆ, ಪಕ್ಷೇತರರು ಒಟ್ಟು ಐದು ಕ್ಷೇತ್ರಗಳಲ್ಲಿ ಗೆಲುವಿನ ನಗು ಮೂಡಿಸಿದ್ದಾರೆ.

ಬಿಜೆಪಿಗೆ ವಿಶ್ವನಾಥ್ ಬಲ

ಜೆಡಿಎಸ್ ತೊರೆದು ಬಿಜೆಪಿ ಸೇರಿರುವ ವಿಶ್ವನಾಥ್ ಪ್ರಭಾವ ಈ ಚುನಾವಣೆಯಲ್ಲಿ ಕಾಣಿಸಿದೆ. ಈ ಹಿಂದೆ ಪುರಸಭೆ ಇದ್ದಾಗ ಇಲ್ಲಿ ಬಿಜೆಪಿ ಖಾತೆ ತೆರೆದಿರಲಿಲ್ಲ. ಆದರೆ ಈ ಭಾರಿ ಮೂರು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ.

Advertisement

ಹುಣಸೂರು ನಗರಸಭೆ ಚುನಾವಣೆ ಫಲಿತಾಂಶ
1ನೇ ವಾರ್ಡ್-ದೇವರಾಜ್- ಜೆಡಿಎಸ್.

2ನೇ ವಾರ್ಡ್- ಆಶಾರಾಣಿ -ಪಕ್ಷೇತರ.

3ನೇ ವಾರ್ಡ್- ಅನುಷಾ – ಕಾಂಗ್ರೆಸ್.

4ನೇ ವಾರ್ಡ್-ಭವ್ಯ- ಕಾಂಗ್ರೆಸ್.

5ನೇ ವಾರ್ಡ್- ಸ್ವಾಮಿಗೌಡ- ಕಾಂಗ್ರೆಸ್.

6ನೇ‌ವಾರ್ಡ್- ದೇವನಾಯ್ಕ -ಕಾಂಗ್ರೆಸ್.

7ನೇ ವಾರ್ಡ್- ಶರವಣ -ಜೆಡಿಎಸ್.

8ನೇ ವಾರ್ಡ್- ಸತೀಶ್- ಪಕ್ಷೇತರ.

9ನೇ ವಾರ್ಡ್- ಸಮೀನಾ ಪರ್ವೇಜ್- ಕಾಂಗ್ರೆಸ್.
10ನೇ ವಾರ್ಡ್- ರಮೇಶ -ಪಕ್ಷೇತರ.

11ನೇ ವಾರ್ಡ್- ಹರೀಶ್ ಕುಮಾರ್ -ಬಿಜೆಪಿ.

12ನೇ ವಾರ್ಡ್- ವಿವೇಕ್ -ಬಿಜೆಪಿ.

13ನೇ ವಾರ್ಡ್- ಮಾಲಕ್ ಪಾಷಾ- ಪಕ್ಷೇತರ.

14ನೇ ವಾರ್ಡ್- ಸಾಯಿಂತಾಜ್ -ಜೆಡಿಎಸ್.

15ನೇ ವಾರ್ಡ್- ಸೌರಭ ಸಿದ್ದರಾಜು -ಕಾಂಗ್ರೆಸ್.

16ನೇ ವಾರ್ಡ್- ಕೃಷ್ಣರಾಜ ಗುಪ್ತ -ಜೆಡಿಎಸ್.

17ನೇ ವಾರ್ಡ- ಮನು -ಕಾಂಗ್ರೆಸ್.

18ನೇ ವಾರ್ಡ್- ಹೆಚ್.ಎನ್.ರಮೇಶ್ – ಕಾಂಗ್ರೆಸ್

19ನೇ ವಾರ್ಡ್- ಶ್ರೀನಾಥ್ -ಜೆಡಿಎಸ್.

20ನೇ ವಾರ್ಡ್- ಫರ್ವಿನ್ ತಾಜ್ -ಪಕ್ಷೇತರ‌.

21ನೇ ವಾರ್ಡ್- ರಾಣಿ ಪೆರುಮಾಳ್ -ಜೆಡಿಎಸ್.

22ನೇ ವಾರ್ಡ್- ಜೆಬಿವುಲ್ಲಾ ಖಾನ್ -ಕಾಂಗ್ರೆಸ್.

23ನೇ ವಾರ್ಡ್- ರಂಜಿತಾ -ಕಾಂಗ್ರೆಸ್.

24ನೇ ವಾರ್ಡ್- ಗೀತಾ -ಕಾಂಗ್ರೆಸ್.

25ನೇ ವಾರ್ಡ್- ಮಂಜು -ಕಾಂಗ್ರೆಸ್.

26ನೇ ವಾರ್ಡ್- ಗಣೇಶ ಕುಮಾರಸ್ವಾಮಿ -ಬಿಜೆಪಿ.

27ನೇ ವಾರ್ಡ್- ರಾಧಾ- ಜೆಡಿಎಸ್.

28 ನೇ ವಾರ್ಡ್- ಶ್ವೇತ ಮಂಜು -ಕಾಂಗ್ರೆಸ್.

29ನೇ ವಾರ್ಡ್- ಪ್ರಿಯಾಂಕ ಥಾಮಸ್ -ಕಾಂಗ್ರೆಸ್.

30ನೇ ವಾರ್ಡ್- ಸಮೀನಾಭಾನು -ಎಸ್‌ಡಿಪಿಐ

31ನೇವಾರ್ಡ್- ಸೈಯದ್ ಯೂನಸ್- ಎಸ್‌ಡಿಪಿಐ

Advertisement

Udayavani is now on Telegram. Click here to join our channel and stay updated with the latest news.

Next