Advertisement

ಹುಣಸೂರು ನಗರಸಭೆ: ಕಾಂಗ್ರೆಸ್ ಪಾಲಿಗೆ ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನ

02:32 PM Oct 31, 2020 | keerthan |

ಹುಣಸೂರು:  ನಗರಸಭೆಯ ವರಿಷ್ಠ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ನ ಅನುಷಾ ಅಧ್ಯಕ್ಷರಾಗಿ ಹಾಗೂ ಉಪಾಧ್ಯಕ್ಷರಾಗಿ ದೇವನಾಯ್ಕ ಚುನಾಯಿತರಾದರು.

Advertisement

ಕಾಂಗ್ರೆಸ್ ನ ಅನುಷಾ ಮತ್ತು ದೇವನಾಯ್ಕ ತಲಾ 20 ಮತ ಪಡೆದು ಜಯ ಸಾಧಿಸಿದರು. ಜೆಡಿಎಸ್ ನಿಂದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಶಹೀನಾಬಾನು ಹಾಗೂ ಉಪಾಧ್ಯಕ್ಷ ಸ್ಥಾನದ ಪಕ್ಷೇತರ ಸದಸ್ಯೆ ಆಶಾರಾಣಿ ತಲಾ 11 ಮತ ಪಡೆದು ಸೋಲು ಅನುಭವಿಸಿದರು.

ಇದನ್ನೂ ಓದಿ:ತೊನಸಿಹಾಳ-ಮೆಣಸಗೇರಿ ಆದರ್ಶ ಗ್ರಾಮಕ್ಕೆ ಆಯ್ಕೆ

ಶಾಸಕ ಮಂಜುನಾಥ್ ಚುನಾವಣೆಯಲ್ಲಿ ಭಾಗವಹಿಸಿದ್ದರೆ, ಸಂಸದ ಪ್ರತಾಪ ಸಿಂಹ, ಎಂ.ಎಲ್.ಸಿ. ವಿಶ್ವನಾಥ್ ಹಾಗೂ ಬಿಜೆಪಿ ಸದಸ್ಯ ವಿವೇಕ್ ಗೈರಾಗಿದ್ದರು. ಉಪ ವಿಭಾಗಾಧಿಕಾರಿ ವೀಣಾ ಚುನಾವಣಾಧಿಕಾರಿಯಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next