Advertisement
ಹುಣಸೂರಿನ ಜೆ.ಬಿ.ಒಬೆದುಲ್ಲಾರವರು ಕಳೆದ ವರ್ಷದ ಫೆಬ್ರವರಿ, ಮಾರ್ಚ್ನಲ್ಲಿ ಹತ್ತು ಮಂದಿಯ ಖಾತೆದಾರರಿಗೆ ಸಂಬಂಧಿಸಿದ ನಮೂನೆ- 3ರಡಿ 2014-17 ರವರೆಗೆ ಶುಲ್ಕ ಪಾವತಿಸಿರುವ ಬಗ್ಗೆ ರಸೀದಿಗಳ ನಕಲು ಕೋರಿದ್ದರು. ದಾಖಲೆ ನೀಡಲು ವಿಫಲವಾಗಿದ್ದರ ವಿರುದ್ದ ಕರ್ನಾಟಕ ಮಾಹಿತಿ ಆಯೋಗಕ್ಕೆ ಮೇಲ್ಮನವಿ ಸಲ್ಲಿಸಿದ್ದರು. ವಿಚಾರಣೆ ವೇಳೆ ಹಾಜರಾದ ಕಂದಾಯಾಧಿಕಾರಿ ಸಿದ್ದರಾಜ್ ತಾವು ಹೊಸಬರಾಗಿದ್ದು, ಮಾಹಿತಿ ನೀಡಲು 15 ದಿನಗಳ ಕಾಲ ಕಾಲಾವಕಾಶ ಕೋರಿದ್ದರು, ಆದರೆ ಕಂದಾಯಾಧಿಕಾರಿ ಮಾಹಿತಿಯನ್ನು ನೀಡದೆ, ಆಯೋಗದ ವಿಚಾರಣೆಗೂ ಹಾಜರಾಗದ್ದನ್ನು ಗಂಭೀರವಾಗಿ ಪರಿಗಣಿಸಿ, ಪ್ರಕರಣಕ್ಕೆ ತಲಾ 10 ಸಾವಿರದಂತೆ 20 ಸಾವಿರ ರೂ ದಂಡ ವಿಧಿಸಿ, ದಂಡದ ಹಣವನ್ನು ಜೂನ್ ಮತ್ತು ಜುಲೈ ಮಾಹೆಯ ಸಂಬಳದಲ್ಲಿ ರೂ 10 ಸಾವಿರದಂತೆ ಕಡಿತಗೊಳಿಸಿ ಸರಕಾರಕ್ಕೆ ಜಮಾ ಮಾಡುವಂತೆ ರಾಜ್ಯ ಮಾಹಿತಿ ಆಯುಕ್ತ ಡಾ.ಕೆ.ಇ.ಕುಮಾರಸ್ವಾಮಿಯವರು ಆದೇಶಿಸಿದ್ದು, ಜಮಾ ಮಾಡಿದ ರಸೀದಿಯೊಂದಿಗೆ ಅದರ ಅನುಪಾಲನ ವರದಿಯನ್ನು ಆಯೋಗಕ್ಕೆ ಸಲ್ಲಿಸುವಂತೆ ಪೌರಾಯುಕ್ತರಿಗೆ ನಿರ್ದೇಶಿಸಿದ್ದಾರೆ.
Advertisement
ಪ್ರತ್ಯೇಕ ಪ್ರಕರಣ : ಹುಣಸೂರು ನಗರಸಭೆಯ ಅಧಿಕಾರಿಗಳಿಗೆ 20 ಸಾವಿರ ದಂಡ
11:20 PM Jun 12, 2022 | Team Udayavani |
Advertisement
Udayavani is now on Telegram. Click here to join our channel and stay updated with the latest news.