Advertisement
ಹೌದು ಮೈಸೂರು-ಬಂಟ್ವಾಳ ರಾಷ್ಟ್ರೀಯ ಹೆದ್ದಾರಿ 275 ಪಕ್ಕದಲ್ಲೇ ಇದ್ದ ಬಿಳಿಕೆರೆ ಕೆರೆ ಕೆರೆ ಬದಿದಾಗಿದ್ದರಿಂದ ಬಿಳಿಕೆರೆ ಸೇರಿದಂತೆ ಸುತ್ತಮುತ್ತಲಿನವರು ಕಸ ಸುರಿಯುತ್ತಿದ್ದರು.
ಮಳೆಗಾಲದಲ್ಲಿ ಅಪ್ಲ ಪ್ರಮಾಣದ ನೀರು ಕೆರೆ ಸೇರುತ್ತಿದ್ದಾದರೂ ಕೆಲವೇ ದಿನದಲ್ಲಿ ಅದೂಸಹ ಬರಿದಾಗುತ್ತಿತ್ತು. ಇದನ್ನು ಮನಗಂಡ ಶಾಸಕ ಎಚ್.ಪಿ.ಮಂಜುನಾಥ್ ಕೆರೆಗೆ ನೀರು ತುಂಬಿಸಿ .ಈ ಭಾಗದ ಜನರ ಬದುಕು ಹಸನಾಗಿಸಲು ಟೊಂಕ ಕಟ್ಟಿ ನೀರಾವರಿ ಇಲಾಖೆ ಮೂಲಕ ಕ್ರಿಯಾಯೋಜನೆ ರೂಪಿಸಿ.ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವ ಶಿವರಾಜ ತಂಗಡಗಿನವರ ಗಮನಕ್ಕೆ ತಂದು 10 ಕೋಟಿ ರೂ ವೆಚ್ಚದಲ್ಲಿ ಲಕ್ಷ್ಮಣತೀರ್ಥ ನದಿಯಿಂದ ಏತ ನೀರಾವರಿ ಯೋಜನೆ ಮೂಲಕ ಬಿಳಿಕೆರೆ ಕೆರೆ ಮಾತ್ರವಲ್ಲದೆ ಮಲ್ಲಿನಾಥಪುರ. ಜೀನಹಳ್ಳಿ ಹಾಗೂ ಹಳೇ ಬೀಡು ಕೆರೆಗೆ ನೀರು ತುಂಬಿಸುವ ಯೋಜನೆ 2017 ರಲ್ಲಿ ಸಾಕಾರ ಗೊಂಡು ಕೆರೆ ತುಂಬಿಸಲಾಯಿತು. ಕೆಲವರು ಅಯ್ಯೋ ಈ ಕೆರೆ ತುಂಬುತ್ತದೆಯೇ . ಕೆರೆ ತುಂಬಿದರೂ ನೀರು ನಿಲ್ಲುತ್ತಾ. ಬರೀ ಹಣ ಖರ್ಚಾಗುತ್ತದೆಂದು ಭಾವಿಸಿದ್ದರು. ಆದರೆ ಕೆರೆ ತುಂಬಿನ ನಂತರ ಸುತ್ತಮುತ್ತಲಿನ ಸುಮಾರು 8 ಕಿ.ಮೀ ವ್ಯಾಪ್ತಿಯ ಗ್ರಾಮಗಳ್ಲಿ ಹತ್ತಾರು ವರ್ಷಗಳಿಂದ ಬರಿದಾಗಿದ್ದ ಬೋರ್ ವೆಲ್ ಗಳಲ್ಲಿ ಅತರ್ಜಲ ವೃದ್ದಿಸ ತೊಡಗಿತು. ಕೆಲವು ಬೋರ್ ವೆಲ್ ಗಳಲ್ಲಿ ಹಗಲು ರಾತ್ರಿ ಎನ್ನದೆ ನೀರು ಉಕ್ಕಿ ಇಂದಿಗೂ ಹರಿಯುತ್ತಲೇ ಇದೆ.
Related Articles
Advertisement
ಈ ಭಾಗದ ಜನರ ಪಾಲಿಗೆ ಶಾಸಕ ಎಚ್.ಪಿ.ಮಂಜುನಾಥ್ ಆಧುನಿಕ ಭಗೀರಥ ರೆನಿಸಿದ್ದಾರೆ.