ಮೈಸೂರು: ಹುಣಸೂರು ಸಾರ್ವಜನಿಕ ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗ ಹೊರತಾಗಿ ಉಳಿದ ಎಲ್ಲಾ ವಿಭಾಗವನ್ನು ತಾತ್ಕಾಲಿಕವಾಗಿ ಸೀಲ್ ಡೌನ್ ಮಾಡಲಾಗಿದೆ.
ತಾಲೂಕಿನ ಆಜಾದ್ ನಗರದ ಕೋವಿಡ್ ಸೊಂಕಿತ ಮಹಿಳೆ ಹೆರಿಗೆಗಾಗಿ ಸಾರ್ವಜನಿಕ ಆಸ್ಪತ್ರೆಯಲ್ಲಿ 3 ದಿನಗಲ ಕಾಲ ದಾಖಲಾಗಿದ್ದರು. ಹೆರಿಗೆಯ ನಂತರ ಮನೆಗೆ ತೆರಳಿದ್ದರು, ಈವೇಳೆ ಮಹಿಳೆಗೆ ಕೊವಿಡ್19 ತಪಾಸಣೆ ನಡೆಸಲಾಗಿತ್ತು.
ಬೆಳಗ್ಗೆ ಕೊವಿಡ್ ವರದಿಯಲ್ಲಿ ಮಹಿಳೆಗೆ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ತಹಶೀಲ್ಧಾರ್ ಬಸವರಾಜ್ ನೇತೃತ್ವದಲ್ಲಿ ತಾ.ಪಂ. ಇ.ಓ ಗಿರೀಶ್ ಟಿ.ಎಚ್.ಓ.ಡಾ ಕೀರ್ತಿಕುಮಾರ್ ಹಾಗೂ ಆರೋಗ್ಯ ಸಿಬ್ಬಂದಿಗಳು ಗ್ರಾಮಕ್ಕೆ ತೆರಳಿ ಬಾಣಂತಿ ಮಹಿಳೆ ಹಾಗೂ ಹಸುಗೂಸನ್ನು ಆಂಬ್ಯುಲೆನ್ಸ್ ಮೂಲಕ ಮೈಸೂರಿನ ಕೊವಿಡ್ ಆಸ್ಪತ್ರೆಗೆ ಸಾಗಿಸಿದ್ದಾರೆ.
ಬಾಣಂತಿಯ ಕುಟುಂಬದವರು ಆಸ್ಪತ್ರೆಯಲ್ಲಿ ಓಡಾಡಿರುವ ಕಡೆ. ವೈದ್ಯರ ಕೊಠಡಿ ಹಾಗೂ ಪ್ರಸೂತಿ ವಿಭಾಗವನ್ನು ತಾತ್ಕಾಲಿಕವಾಗಿ ಬಂದ್ ಮಾಡಲು ತಹಸೀಲ್ದಾರ್ ಆದೇಶಿದ್ದು.
ಸ್ಯಾನಿಟೈಸ್ ಮಾಡಲು ನಗರಸಭೆಗೆ ಸೂಚಿಸಲಾಗಿದ್ದು ತಾತ್ಕಾಲಿಕವಾಗಿ ಆಸ್ಪತ್ರೆಗೆ ಸಾರ್ವಜನಿಕರ ಪ್ರವೇಶ ನಿಭಂಧಿಸಲಾಗಿದೆ ಎಂದು ತಹಸೀಲ್ದಾರ್ ತಿಳಿಸಿದ್ದಾರೆ.