Advertisement
ಶಾಲಾ ಆವರಣದಲ್ಲಿ ನಡೆದ ವಿಜ್ಞಾನ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಲಾಮುಖ್ಯ ಶಿಕ್ಷಕ ಕುಮಾರಸ್ವಾಮಿ, ಇಂದು ಜಗತ್ತಿಗೆ ವಿಜ್ಞಾನ ಅನಿವಾರ್ಯವಾಗಿದ್ದು, ಅತೀ ವೇಗದಲ್ಲಿ ಬಲಾಢ್ಯವಾಗಿ ಬೆಳೆಯುತ್ತಿದೆ. ಪ್ರತಿಯೊಬ್ಬ ವ್ಯಕ್ತಿಯ ನಿತ್ಯದ ಜೀವನದಲ್ಲಿ ವಿಜ್ಞಾನಕ್ಕೆ ಜೋತು ಬಿದ್ದಿರುವುದರಿಂದಾಗಿ ವಿಜ್ಞಾನ ಅತೀ ವೇಗವಾಗಿ ಬೆಳೆಯುತ್ತಿದೆ ಎಂದು ತಿಳಿಸಿದರು.
ಶಾಲೆಯ ವಿಜ್ಞಾನ ಶಿಕ್ಷಕಿಯರಾದ ಉಮಾಕುಮಾರಿ ಹಾಗೂ ಪ್ರೀತಿ ಯವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ರಂಗೋಲಿಯಲ್ಲಿ ಜೀವಶಾಸ್ತ್ರ, ರಸಾಯನ ಶಾಸ್ತ್ರ ಹಾಗೂ ಭೌತಶಾಸ್ತ್ರಕ್ಕೆ ಸಂಬಂಧಿಸಿದ ಚಿತ್ರಗಳನ್ನು ಶಾಲೆಯ ಕಾರಿಡಾರ್‌ನಲ್ಲಿ ಬಿಡಿಸಿ, ಅದಕ್ಕೆ ಬಣ್ಣ ತುಂಬಿ ಪ್ರತಿಯೊಂದು ರಂಗೋಲಿಯ ಚಿತ್ತಾರಕ್ಕೂ ವಿಜ್ಞಾನದ ವಿವರಣೆಗಳನ್ನು ನೀಡಿದರು. ರಂಗೋಲಿಯಲ್ಲಿ ಹೃದಯ, ಮೆದುಳು, ಅಮಿಬಾ, ಜೀರ್ಣಾಂಗ ವ್ಯೂಹ, ವಿಸರ್ಜನಾಂಗ ವ್ಯೂಹ, ಹೆಣ್ಣು ಭ್ರೂಣ ಹತ್ಯೆ, ಶ್ವಾಸಕೋಶ, ಮೀನು, ತಾಪದಿಂದ ಘನವಸ್ತುಗಳ ಹಿಗ್ಗುವಿಕೆ, ದ್ರವ್ಯದ ಮೂರು ಸ್ಥಿತಿಗಳು ಹಾಗೂ ಟಾರ್ಚ್, ಸೌರಮಂಡಲ, ಬಲ್ಬು, ಬೆಳಕು ಸರಳರೇಖೆಯಲ್ಲಿ ಚಲಿಸುವಿಕೆಯ ಬಗ್ಗೆ ಮಾದರಿಗಳನ್ನು ತಯಾರಿಸಿ ಪ್ರದರ್ಶಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ಶಾಲೆಯ ಶಿಕ್ಷಕರಾದ ಸಿದ್ದೇಶ್, ಲಕ್ಷಣ್, ಉಮೇಶ್ ಸೇರಿದಂತೆ ಇತರರು ಇದ್ದರು.
Related Articles
Advertisement