ಹುಣಸೂರು : ವಿವಿಧ ಇಲಾಖೆಗಳಲ್ಲಿ ತಾಲೂಕಿನದ್ಯಾಂತ 9 ಕೋಟಿ. ರೂ ಅಭಿವೃದ್ದಿ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದು ಶಾಸಕ ಹೆಚ್.ಪಿ.ಮಂಜುನಾಥ್ ತಿಳಿಸಿದರು.
ತಾಲೂಕಿನ ಉದ್ದೂರ್‌ಕಾವಲ್ ಗಾಮ ಪಂಚಾಯತಿಯ ಹೋನ್ನಿಕುಪ್ಪೆ ಗ್ರಾಮದಲ್ಲಿ ಹಾರಂಗಿ ಇಲಾಖೆವತಿಯಿಂದ 20 ಲಕ್ಷ.ರೂ ನ ಸಿ.ಸಿ.ರಸ್ತೆ ಮತ್ತು ಚರಂಡಿಗೆ ಚಾಲನೆ ನೀಡಿ ಮಾತನಾಡಿದ ಅವರು, ಅಧಿಕಾರಿಗಳು ಗುಣಮಟ್ಟದ ಕಾಮಗಾರಿ ನಡೆಯುವಂತೆ ನೋಡಿಕೋಳ್ಳಬೇಕು. ಸಾರ್ವಜನಿಕರು ಅಧಿಕಾರಿಗಳ ಜೊತೆ ಸಹಕರಿಸಿ ಒತ್ತುವರಿಯನ್ನು ತೆರವುಗೋಳಿಸಿ ಸಹಕಾರ ನೀಡಬೇಕೆಂದು ಮನವಿ ಮಾಡಿದರು.
ಕಳೆದೊಂದು ವರ್ಷದಿಂದ ದಿನ ನಿತ್ಯದ ಪದಾರ್ಥ, ಪೆಟ್ರೋಲ್, ಡೀಸೆಲ್, ರಸಗೊಬ್ಬರದ ಬೆಲೆ ಭಾರೀ ಏರಿಕೆಯಾಗಿದ್ದು, ರೈತರು ಮತ್ತು ಗ್ರಾಹಕರು ಕಂಗಾಲಾಗಿದ್ದಾರೆ. ಕಳೆದ ಎರಡು ವರ್ಷಗಳ ಲಾಕ್‌ಡೌನ್‌ನಿಂದ ಆರ್ಥಿಕ ನಷ್ಟಕ್ಕೆ ಒಳಗಾಗಿರುವ ಜನರಿಗೆ ಹಾಗೂ ರೈತರಿಗೆ ಇದೀಗ ಬೆಲೆ ಏರಿಕೆ ಹೊರೆಯಾಗಿ ಪರಿಣಮಿಸಿದೆ ಎಂದರು.
ನನ್ನ ತಾಲೂಕಿನ ಎಲ್ಲಾ ಪ್ರತಿ ಗ್ರಾಮಗಳಿಗೂ ನನ್ನದೆ ಆದ ಕೊಡುಗೆ ನೀಡಿದ್ದೇನೆ.. ಸಿದ್ದರಾಮಯ್ಯರ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ತಾಲ್ಲೂಕಿಗೆ ಸಾಕಷ್ಟು ಅನುದಾನ ನೀಡಿದ್ದರು. ಬಹುತೇಕ ಗ್ರಾಮಗಳಲ್ಲಿ ಸಿ.ಸಿ.ರಸ್ತೆಗಳು ಮುಕ್ತಾಯವಾಗಿವೆ ಕೆಲವು ಗ್ರಾಮಗಳಲ್ಲಿ ಒಂದು, ಎರಡು ರಸ್ತೆ ಮಾತ್ರ ಬಾಕಿ ಇದೆ. ಸರ್ಕಾರದ ಅನುದಾನ ತಾರತಮ್ಯದಿಂದಾಗಿ ಅಭಿವೃದ್ಧಿ ಕುಂಠಿತವಾಗಿದೆ. ನನ್ನ ವಯಕ್ತಿಕ ಹಣದಲ್ಲಿ ಸಾಕಷ್ಟು ದೇವಾಲಯ, ರೋಗಿಗಳು, ಅಶಕ್ತರಿಗೆ ನೆರವಾಗಿದ್ದು, ಗ್ರಾಮದ ಜನರ ಆಶಯದಂತೆ ತಾಲ್ಲೂಕಿನಲ್ಲಿ ಅಭಿವೃದ್ದಿ ಕೆಲಸಗಳನ್ನೂ ನಡೆಸಲಾಗುತ್ತಿದೆ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಗ್ರಾ.ಪಂ.ಅಧ್ಯಕ್ಷ ನಂದೀಶ್, ಸದಸ್ಯರಾದ ರಾಮಬೋವಿ, ಮೀನಾದೇವರಾಜು, ಮುನುಕುಮಾರ್, ಶಾಂತಿ, ಉದ್ಯಮಿ ರಾಜುಶಿವರಾಜೇಗೌಡ, ತಾ.ಪಂ.ಮಾಜಿಸದಸ್ಯ ಪ್ರೇಮೆಗೌಡ, ಗ್ರಾ.ಪಂ ಮಾಜಿ ಸದಸ್ಯ ಚಂದ್ರಶೇಖರ್, ಮುಖಂಡರಾದ ವಿಠಲ್, ವಿಜಯ್, ಎ.ಇ.ಇ ಸುರೇಶ್, ಎ.ಇ. ಮೋಹನ್, ಗುತ್ತಿಗೆದಾರ ಗಣೇಶ್, ಯುವ ಕಾಂಗ್ರೇಸ್ ಅಧ್ಯಕ್ಷ ಕುಮಾರ್‌ಸ್ವಾಮಿ, ಪಿ.ಡಿ.ಒ, ನವೀನ್ ಹಾಜರಿದ್ದರು.