ಹುಣಸೂರು : ಹುಣಸೂರು ಉಪಅಧೀಕ್ಷಕರ ಕಛೇರಿ ಆವರಣದಲ್ಲಿ ಉಪವಿಭಾಗ ಮಟ್ಟದ ರೌಡಿ ಪರೇಡ್ ನಡೆಸಲಾಯಿತು.
ಉಪವಿಭಾಗದ ಎಚ್.ಡಿ.ಕೋಟೆ, ಪಿರಿಯಾಪಟ್ಟಣ, ಸರಗೂರು, ಹುಣಸೂರು ವ್ಯಾಪ್ತಿಯ 9 ಠಾಣಾ ವ್ಯಾಪ್ತಿಯ ಸುಮಾರು 250 ಕ್ಕೂ ಹೆಚ್ಚು ರೌಡಿಶೀಟರ್ ಪಟ್ಟಿಯಲ್ಲಿರುವವರು ಭಾಗವಹಿಸಿದ್ದರು.
ಅಡಿಷನಲ್ ಎಸ್.ಪಿ.ಶಿವಕುಮಾರ್ ಆಯಾ ಠಾಣಾ ವ್ಯಾಪ್ತಿಯ ರೌಡಿಶೀಟರ್‌ಗಳ ಸಮಗ್ರ ಮಾಹಿತಿಯನ್ನು ಠಾಣಾ ಇನ್ಸ್ ಪೆಕ್ಟರ್‌ಗಳಿಂದ ಪಡೆದರು.
ನಂತರ ಮಾತನಾಡಿದ ಅಡಿಷನಲ್ ಎಸ್.ಪಿ.ಶಿವಕುಮಾರ್ ಒಮ್ಮೆ ರೌಡಿಶೀಟರ್ ಪಟ್ಟಿ ದಾಖಲಾದರೆ, ನಿಮ್ಮ ಮೇಲೆ ಪೊಲೀಸರು ಸದಾ ಕಣ್ಗಾವಲಾಗಿರುತ್ತಾರೆ, ಅಕ್ರಮ ಚಟುವಟಿಕೆ, ರೌಡಿ ಚಟುವಟಿಕೆ, ಇತರ ಚಟುವಟಿಕೆಗಳಲ್ಲಿ ಭಾಗವಹಿಸದೆ ಒಳ್ಳೆಯ ನಡೆತೆ, ಸಮಾಜದಲ್ಲಿ ಉತ್ತಮ ಒಡನಾಟ ರೂಢಿಸಿಕೊಂಡು ಸಮಾಜಮುಖಿ ಕೆಲಸದಲ್ಲಿ ತೊಡಗಿಸಿಕೊಳ್ಳಿ. ಪದೇಪದೇ ನಿಮ್ಮ ವಿರುದ್ದ ಕೇಸ್ ದಾಖಲಾದಲ್ಲಿ ನಿಮ್ಮ ಭವಿಷ್ಯ ಹಾಳಾಗುವ ಜೊತೆಗೆ ಕುಟುಂಬಗಳು ತೊಂದರೆಗೆ ಸಿಲುಕಲಿವೆ ಎಂದು ಎಚ್ಚರಿಸಿದರು.
ಈ ವೇಳೆ ಡಿವೈ.ಎಸ್.ಪಿ.ರವಿಪ್ರಸಾದ್, ಹುಣಸೂರು ಗ್ರಾಮಾಂತರ ಠಾಣೆ ನಿರೀಕ್ಷಕ ಸಿ.ವಿ.ರವಿ, ನಗರ ಠಾಣೆಯ ಶ್ರೀನಿವಾಸ್, ಇನ್ಸ್ಪೆಕ್ಟರ್‌ಗಳಾದ ಜಗದೀಶ್,ಆನಂದ್, ಬಸವರಾಜು, ಎಸ್.ಐ.ಗಳಾದ ಜಯಪ್ರಕಾಶ್, ಜಮೀರ್ ಅಹಮದ್, ಎ ಎಸ್ ಐ ರಂಗಸ್ವಾಮಿ ಸೇರಿದಂತೆ ಉಪವಿಭಾಗದ ಪೋಲೀಸ್ ಅಧಿಕಾರಿಗಳು ಹಾಜರಿದ್ದರು.