Advertisement

Hunagunda:ಬಿಡಾಡಿ ದನಗಳ ಕಾಟಕ್ಕೆ ಬೇಸತ್ತ ಮಂದಿ

06:01 PM Oct 12, 2023 | Team Udayavani |

ಹುನಗುಂದ: ಪುರಸಭೆ ಅಧಿಕಾರಿ ಮತ್ತು ಸಿಬ್ಬಂದಿ ನಿರ್ಲಕ್ಷ್ಯದಿಂದ ಬಿಡಾಡಿ ದನಗಳ ಹಾವಳಿಗೆ ಸಾರ್ವಜನಿಕರು ಭಯಭೀತರಾಗಿ
ಸಂಚರಿಸುವ ಸ್ಥಿತಿ ನಿರ್ಮಾಣವಾಗಿದೆ. ಬೇಸಿಗೆ ಆರಂಭ ಹಂತದಲ್ಲಿ ಪಟ್ಟಣದ ಪ್ರತಿ ಗಲ್ಲಿಗಳಲ್ಲಿ ನೀರಿಗಾಗಿ ಮತ್ತು ಆಹಾರಕ್ಕಾಗಿ
ಬಿಡಾಡಿ ದನಗಳು ಅಲೆಯುವುದು ಹೆಚ್ಚಾಗುತ್ತವೆ. ದನಕರು ಕಟ್ಟಲು ಮತ್ತು ಹಿಡಿಯಲು ಬರದಂತೆ ಹೊರಬಿಡುವುದು
ಸರ್ವೆಸಾಮಾನ್ಯವಾಗಿದೆ.

Advertisement

ಈ ಬಿಡಾಡಿ ದನಗಳ ಕಾಟ ಹೆಚ್ಚಾಗಿ ಜನ ಬೇಸತ್ತು ಹೋಗಿದ್ದಾರೆ. ಇದರಿಂದ ಶಾಲಾ ಮಕ್ಕಳು, ವೃದ್ಧರು ಮತ್ತು ಮಹಿಳೆಯರು ಮನೆಯಿಂದ ಹೊರಬರಲು ಭಯಪಡುತ್ತಿದ್ದಾರೆ. ತರಕಾರಿ ಮಾರುಕಟ್ಟೆಯಲ್ಲಿ, ಮುಖ್ಯ ರಸ್ತೆಗಳಲ್ಲಿ ಆಹಾರ ಅರಸಿ ಬರುವ ಈ
ಬಿಡಾಡಿ ದನಕರುಗಳು ಇರಿಯುವುದು, ಒದೆಯುವುದರ ಜೊತೆಗೆ ಮನೆಗೆ ಒಯ್ಯುವ ಸಾಮಾನುಗಳ ಚೀಲವನ್ನು ಕಸಿಯುತ್ತಿವೆ.

ಎಷ್ಟೋ ಶಾಲಾ ಮಕ್ಕಳು, ವೃದ್ಧರು ಮಹಿಳೆಯರು ಗಾಯಗೊಂಡು ಆಸ್ಪತೆಗೆ ಸೇರಿರುವುದುಂಟು. ಪುರಸಭೆಯವರು ಮತ್ತು ಚುನಾಯಿತ ಜನಪ್ರತಿನಿಧಿಗಳು ಗಮನಿಸಿ ಕ್ರಮ ಕೈಗೊಳ್ಳುತ್ತಿಲ್ಲ. ಈ ದನಗಳನ್ನು ಒಳ ಹಾಕಿ ದಂಡ ಪಡೆದು ಸಂಬಂಧಪಟ್ಟವರಿಗೆ ಎಚ್ಚರಿಕೆ ನೀಡಬೇಕಾಗಿದೆ. ಬಿಡಾಡಿ ದನಗಳು ಮುಖ್ಯ ರಸ್ತೆಗೆ ಅಡ್ಡವಾಗುವುದರಿಂದ ವಾಹನ ಸಂಚಾರಕ್ಕೂ ತೊಂದರೆಯಾಗುತ್ತಿದೆ.

ಬಿಡಾಡಿ ದನಗಳಿಂದ ವಿದ್ಯಾರ್ಥಿನಿ ನೆಲಕ್ಕೆ ಬಿದ್ದು ತಲೆಗೆ ಪೆಟ್ಟು ಬಿದ್ದು, ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದು, ಇಂತಹ ಘಟನೆಗಳನ್ನು ತಡೆಗೆ ಪುರಸಭೆ ಕ್ರಮ ಕೈಗೊಳ್ಳಬೇಕು.
ಜಿ.ಬಿ. ಕಂಬಾಳಿಮಠ

*ವೀರೇಶ ಕುರ್ತಕೋಟಿ

Advertisement
Advertisement

Udayavani is now on Telegram. Click here to join our channel and stay updated with the latest news.

Next