ಹುನಗುಂದ: ತಾಲೂಕಿನ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು ಸರ್ಕಾರ ಪಟ್ಟಣದಲ್ಲಿ ಆರಂಭಿಸಿರುವ ಕೈಗಾರಿಕಾ ತರಬೇತಿ ಕೇಂದ್ರ ಇದ್ದೂ ಇಲ್ಲದಂತಾಗಿದೆ. ಹಳೆ ಟಿಸಿಎಚ್ ವಸತಿ ನಿಲಯದಲ್ಲಿ 2014ರಲ್ಲಿ ಸರ್ಕಾರಿ ಐಟಿಐ ಕಾಲೇಜು ಆರಂಭವಾಯಿತು. ಈ ಕಟ್ಟಡ ಶಿಥಿಲವಾಗಿದ್ದು, ವಿದ್ಯುತ್ ಸಂಪರ್ಕವೂ ಇರಲಿಲ್ಲ. ಹೀಗಾಗಿ ವಿದ್ಯಾರ್ಥಿಗಳು ಇಲ್ಲಿ ಕಲಿಕೆಗೆ ಹೆಚ್ಚಿಗೆ ಆಸಕ್ತಿ ತೋರಲಿಲ್ಲ.
Advertisement
ಸದ್ಯ ಪಟ್ಟಣದಿಂದ ನಾಲ್ಕು ಕಿಲೋ ಮೀಟರ್ ದೂರದ ರಾಷ್ಟ್ರೀಯ ಹೆದ್ದಾರಿ-50ರ ಹೊಂದಿಕೊಂಡ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಪ್ರಚಾರ ಮತ್ತು ವಿದ್ಯಾರ್ಥಿ ವರ್ಗಕ್ಕೆ ಸೂಕ್ತ ಮಾಹಿತಿ ಇರದೆ ಇರುವುದರಿಂದ ಕಡಿಮೆ ವಿದ್ಯಾರ್ಥಿಗಳು ಇಲ್ಲಿಓದುತ್ತಿದ್ದಾರೆ. ಆದರೆ ಆಸಕ್ತ ವಿದ್ಯಾರ್ಥಿಗಳಿಗೆ ಅದರ ಮಾಹಿತಿ ಸಿಗುತ್ತಿಲ್ಲ. ಕಟ್ಟಡ ಶಿಥಿಲಾವಸ್ಥೆಗೊಂಡಿದೆ.
Related Articles
Advertisement
40 ಫಿಟ್ಟರ್, 40 ಇಲೆಕ್ಟ್ರಿಕಲ್ ಸೇರಿ 80 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಇಲ್ಲಿ ಇಲೆಕ್ಟ್ರಿಕಲ್ ಹೆಚ್ಚಿನ ಬೇಡಿಕೆ ಇರುವುದರಿಂದ ಟ್ರೇಡ್ ಸಂಖ್ಯೆ ಹೆಚ್ಚಿಸಲು ಮೇಲಧಿಕಾರಿಗಳಲ್ಲಿ ಮನವಿ ಮಾಡಲಾಗಿದೆ.ಎಸ್.ಆರ್. ಮುಜಾವರ,
ಪ್ರಭಾರಿ ಪ್ರಾಚಾರ್ಯರು, ಸರ್ಕಾರಿ ಐಟಿಐ ಕಾಲೇಜು. ಜನಪ್ರತಿನಿಧಿಗಳ ಆಸಕ್ತಿಯಿಂದ ಮಂಜೂರಾದ ಈ ಸಂಸ್ಥೆ ಸದ್ಬಳಕೆಯಾಗಬೇಕು. ವಿದ್ಯಾರ್ಥಿಗಳು ವೃತ್ತಿಪರ ವ್ಯಾಸಂಗ ಮಾಡಿ ಬದುಕು ರೂಪಿಸಿಕೊಳ್ಳುವಲ್ಲಿ ಕಾಲೇಜು ಸಿಬ್ಬಂದಿ ಆಸಕ್ತಿ ತೋರಬೇಕು.
ಸಂಗಮೇಶ ಬಾವಿಕಟ್ಟಿ,
ವಿಕಲಚೇತನ ಸಂಘದ ಮುಖಂಡ *ವೀರೇಶ ಕುರ್ತಕೋಟಿ