Advertisement

Hunagunda: ಅನ್ಯಾಯ-ತುಳಿತಕ್ಕೊಳಗಾದವರಿಗೆ ನೆರವಾಗಿ

05:38 PM Nov 20, 2023 | Team Udayavani |

ಹುನಗುಂದ: ಕುಟುಂಬಗಳಲ್ಲಿ ಶಿಕ್ಷಣಕ್ಕೆ ಮೊದಲ ಸ್ಥಾನ ನೀಡಬೇಕು. ಸಮಾಜದ ಉಳ್ಳವರು ಶಿಕ್ಷಣ ವಂಚಿತರಿಗೆ ಹಣಕಾಸಿನ ಸಹಕಾರ ಒದಗಿಸಿ. ಒಗ್ಗಟ್ಟಿನಿಂದ ನ್ಯಾಯಬದ್ಧ ಹಕ್ಕು ಪಡೆದು ಸಮುದಾಯ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಅಥಣಿ ಶಾಸಕ ಲಕ್ಷ್ಮಣ ಸವದಿ ಹೇಳಿದರು.

Advertisement

ಪಟ್ಟಣದಲ್ಲಿ ಗಾಣಿಗ ಸಮಾಜದ ನೂತನ ಸಮುದಾಯ ಭವನ ಉದ್ಘಾಟಿಸಿ ಮಾತನಾಡಿದ ಆವರು, ರಾಜ್ಯಾದ್ಯಂತ ಗಾಣಿಗ
ಸಮುದಾಯದಲ್ಲಿ ಒಗ್ಗಟ್ಟಿದೆ. ಮತ್ತೂಂದು ಸಮಾಜವನ್ನು ಟೀಕಿಸದೆ ಅವರು ಮೆಚ್ಚುವಂತೆ ಆದರ್ಶರಾಗಬೇಕು. ಅನ್ಯಾಯ ಮತ್ತು ತುಳಿತಕ್ಕೊಳಗಾದವರಿಗೆ ಸಹಾಯ ಸಹಕಾರ ನೀಡಿ ಅವರ ಏಳ್ಗೆಗೆ ಪ್ರಯತ್ನಿಸಬೇಕು. ಇಂದಿನ ಯುವಕರು ನಾಳಿನ ನಾಯಕರು.

ಬಡ ವಿದ್ಯಾರ್ಥಿಗಳನ್ನು ಗುರುತಿಸಿ ಶಿಕ್ಷಣ ಒದಗಿಸಿ ಅವರಿಗೆ ಬೆನ್ನೆಲುಬಾಗಿ ನಿಲ್ಲಬೇಕು ಎಂದರು. ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ ನಮ್ಮ ಸಮಾಜದ ಮೇಲೆ ಅಪಾರವಾದ ಪ್ರೀತಿ ವಿಶ್ವಾಸವನ್ನಿಟ್ಟು ಗಾಣಿಗ ಸಮುದಾಯ ಭವನ ನಿರ್ಮಿಸಿದ್ದಾರೆ. ಈ ಕಟ್ಟಡದ ಮೇಲ್ಮಹಡಿಗೆ ಶಾಸಕರ ಅಭಿವೃದ್ಧಿ ಪ್ರದೇಶದಲ್ಲಿ 25 ಲಕ್ಷ ಅನುದಾನ ನೀಡಿದ್ದಾರೆ. ಇನ್ನು ಸಾಕಷ್ಟು ಅಭಿವೃದ್ಧಿ ಪಡಿಸುವ ಕನಸು ಕಾಣುತ್ತಿದ್ದಾರೆ. ಈ ಮೇಲ್ಮಹಡಿ ಕಟ್ಟಡಕ್ಕೆ 10ಲಕ್ಷ ರೂ. ನೀಡುವ ಭರವಸೆ ನೀಡಿದರು.

ಶಾಸಕ ವಿಜಯಾನಂದ ಕಾಶಪ್ಪನವರ
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, 2013ರಲ್ಲಿ ನಾನು ಶಾಸಕನಾಗಿ ಅನುದಾನ ಒದಗಿಸಿ ಸಮಾಜದ ಹಿರಿಯರ ಸಂಕಲ್ಪದಂತೆ ಒದಗಿಸಿದ ಅನುದಾನದಲ್ಲಿ ಈ ಸಮಾಜಕ್ಕೆ ಸಮುದಾಯ ಭವನ ನಿರ್ಮಾಣಗೊಂಡಿದೆ. ಸವದಿಯವರು ನನಗೆ ಸಲಹೆ ಮತ್ತು ಮಾರ್ಗದರ್ಶನ ನೀಡಿದ್ದಾರೆ. ಜಾತ್ಯತೀತ ಮನೋಭಾವನೆ ಬಿತ್ತಿ ಸಂಘಟನೆ ಶಕ್ತಿ ಹೆಚ್ಚಿಸಿದ್ದಾರೆ. ಉತ್ತರ ಕರ್ನಾಟಕದ
ಸಂಘಟನೆ ಮತ್ತು ಅಭಿವೃದ್ಧಿ ಹೋರಾಟಗಾರರು
ಎಂದು ಹೇಳಿದರು.

ಅವರ ಸಲಹೆಯಂತೆ ಮತ್ತು ನನ್ನ ಕ್ಷೇತ್ರದ ಗಾಣಿಗೆ ಸಮುದಾಯ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುವುದಾಗಿ ತಿಳಿಸಿದರು.
ವಿಜಯಪುರದ ಗಾಣಿಗ ಗುರುಪೀಠದ ಪೀಠಾಧಿಪತಿ ಡಾ| ಜಯಬಸವ ಕುಮಾರಸ್ವಾಮಿ, ಕೋಲ್ಹಾರದ ಜಗದ್ಗುರು ದಿಗಂಬರೇಶ್ವರ
ಸಂಸ್ಥಾನಮಠದ ಕಲ್ಲಿನಾಥ ದೇವರು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

Advertisement

ತಹಶೀಲ್ದಾರ್‌ ನಿಂಗಪ್ಪ ಬಿರಾದಾರ ಅಧ್ಯಕ್ಷತೆ ವಹಿಸಿದ್ದರು. ಸಮಾಜದ ಜಿಲ್ಲಾಧ್ಯಕ್ಷ ಅಶೋಕ ಲಾಗಲೋಟಿ ಮಾತನಾಡಿದರು.
ಬಸವಂತಪ್ಪ ಕುಂಟೋಜಿ, ಚಂದ್ರಶೇಖರಪ್ಪ ಸೂಡಿ, ಡಾ| ಬಸವರಾಜ ಕಡಿವಾಲ, ಶ್ರೀಶೈಲ ಗೋಲಗುಂಡ, ಮಹಾಂತೇಶ ಅಮೀನಪ್ಪ ಸಂದಿಗವಾಡ, ಮಹಾಂತೇಶ ಗೋಲಪ್ಪನವರ, ಬಸವರಾಜ ಇಸ್ಲಾಂಪುರ, ವಲಯ ಅರಣ್ಯಾ ಧಿಕಾರಿ ಎಸ್‌.ಡಿ. ಬಬಲಾದಿ, ಗುಡೂರ ಪ್ರಾಚಾರ್ಯ ಪ್ರಕಾಶ ಜತ್ತಿ ವೇದಿಕೆಯಲ್ಲಿದ್ದರು.  ಸಮಾಜದ ಹಿರಿಯ ಹನಮಗೌಡ ಹೊಸಮನಿ
ಸ್ವಾಗತಿಸಿದರು. ಬಸಮ್ಮ ತಮ್ಮಣ್ಣವರ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next