Advertisement

“ಅನ್ಯಾಯ ತಡೆಗಟ್ಟುವ ಮನಃಸ್ಥಿತಿ ಮೂಡಲಿ’

10:27 AM Mar 31, 2017 | |

ಪುತ್ತೂರು: ಸಮಾಜದಲ್ಲಿ ಶೋಷಣೆ, ಅನ್ಯಾಯವಾ ದಾಗ ಅದರ ವಿರುದ್ಧ ಪ್ರಜಾಪ್ರಭುತ್ವದ ಮಾದರಿಯಲ್ಲಿ ಹೋರಾಟ ನಡೆಸಿ ನ್ಯಾಯ ದೊರಕಿಸಿಕೊಳ್ಳುವ ಮನೋಭಾವ ನಮ್ಮಲ್ಲಿ  ಮೂಡ ಬೇಕು ಎಂದು ಶಾಸಕಿ ಶಕುಂತಳಾ ಟಿ. ಶೆಟ್ಟಿ ಹೇಳಿದರು.

Advertisement

ಸಮಾಜ ಕಲ್ಯಾಣ ಇಲಾಖೆ, ಸಮ್ಮೇಳನ ಆಯೋಜನಾ ಸಮಿತಿ, ಸ.ಪ್ರ.ದರ್ಜೆ ಮಹಿಳಾ ಕಾಲೇಜು ಇದರ ಆಶ್ರಯದಲ್ಲಿ ಬಾಬಾ ಸಾಹೇಬ್‌ ಡಾ| ಬಿ.ಆರ್‌. ಅಂಬೇಡ್ಕರ್‌ ಅವರ 125ನೇ ಜಯಂತಿ ವರ್ಷಾಚರಣೆಯ ಅಂತಾರಾಷ್ಟ್ರೀಯ ಸಮ್ಮೇಳನದ ಅಂಗವಾಗಿ ಅಂಬೇಡ್ಕರ್‌ ಜ್ಞಾನದರ್ಶನ ಅಭಿಯಾನ ಕುರಿತಂತೆ ತಾ.ಪಂ. ಸಭಾಂಗಣದಲ್ಲಿ ನಡೆದ ವಿಶೇಷ ಉಪನ್ಯಾಸ ಮತ್ತು ಸಂವಾದ ಉದ್ಘಾಟಿಸಿ ಅವರು ಮಾತನಾಡಿದರು.

ಸಾಹಿತ್ಯ ಕೃತಿಗಳನ್ನು, ಉತ್ತಮ ಲೇಖನಗಳನ್ನು ಓದುವ ಹವ್ಯಾಸ ಬೆಳೆಸಿಕೊಂಡರೆ, ಪರಿಪೂರ್ಣ ವ್ಯಕ್ತಿತ್ವ  ನಿರ್ಮಾಣಕ್ಕೆ ಸಹಕಾರಿ. ಯುವ ಸಮುದಾಯ ಸಾಮಾಜಿಕ ಜಾಲ ತಾಣಗಳಲ್ಲಿ ಕಾಲ ಕಳೆಯುವುದು ಆರೋಗ್ಯಕರ ಲಕ್ಷಣಧಿವಲ್ಲ. ನಕರಾತ್ಮಕ ಚಿಂತನೆ ಬಿಟ್ಟು ಸಕರಾತ್ಮಕ ಚಿಂತನೆ ರೂಡಿಸಿಧಿಕೊಳ್ಳು ವುದು ಆವಶ್ಯ ಎಂದರು.

ಅಸಮಾನತೆ ದೂರವಾಗಿಲ್ಲ 
ಸುರತ್ಕಲ್‌ ಗೋವಿಂದದಾಸ್‌ ಕಾಲೇಜಿನ ಉಪನ್ಯಾಸಕ ಡಾ| ಆಶಾಲತಾ ಪಿ. ಮಾತನಾಡಿ, ಸ್ವಾತಂತ್ರÂ, ಸಮಾನತೆ, ಸೌಹಾರ್ದ ಅತ್ಯಂತ ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳಬೇಕೆಂದು ಡಾ| ಅಂಬೇಡ್ಕರ್‌ ಬಯಸಿದ್ದರು. ಆದರೆ ದೇಶದಲ್ಲಿ ಆರ್ಥಿಕ, ಜಾತಿ, ಆರೋಗ್ಯ, ಶಿಕ್ಷಣದಲ್ಲಿ ಅಸಮಾನತೆಗಳು ಇಂದಿಗೂ ದೂರವಾಗಿಲ್ಲ ಎಂದು ಅವರು ಅಭಿಪ್ರಾಯಿಸಿದರು.

ರಾಜ್ಯದಲ್ಲಿ ಸಮಾನ ಶಿಕ್ಷಣ, ಆರ್ಥಿಕ ವ್ಯವಸ್ಥೆ ಜಾರಿ ಆಗಬೇಕು. ಶಿಕ್ಷಣ, ಆರ್ಥಿಕ, ಆರೋಗ್ಯ ಮೊದಲಾದವುಗಳು ಕೇವಲ ಒಂದಿಬ್ಬರ ಸ್ವತ್ತು ಆಗದೇ, ಸರ್ವರಿಗೂ ಸಮಾನವಾಗಿ ಲಭ್ಯ ವಾಗಬೇಕು. ಸಾಮಾಜಿಕ ಸಮನ್ವತೆಯಿಂದ ಪ್ರಜಾಪ್ರಭುತ್ವದ ಮೌಲ್ಯಗಳು ಉಳಿಯಲು ಸಾಧ್ಯ ಎಂದ ಅವರು, ಸಾಮುದಾಯಿಕ ಪಾಲ್ಗೊಳ್ಳುವಿಕೆಯ ಆವಶ್ಯಕತೆ ಇಂದಿದೆ ಎಂದರು.

Advertisement

ಅರಿವು ಮೂಡಿಸಲು ಉಪನ್ಯಾಸ
ಬೊಕ್ಕಪಟ್ಣ ಸ.ಪ.ಪೂ. ಕಾಲೇಜಿನ ಉಪನ್ಯಾಸಕ ಡಾ| ವಾಸುದೇವ ಬೆಳ್ಳೆ ಮಾತನಾಡಿ, ಜಾತಿ ವಿನಾಶ, ಪ್ರಭುತ್ವ ಮತ್ತು ಅಲ್ಪಸಂಖ್ಯಾ ಕರು, ಹಿಂದು ಕೋಡ್‌ ಬಿಲ್‌ ಮತ್ತು ಪ್ರಾಚೀನ ಭಾರತದಲ್ಲಿ ಕ್ರಾಂತಿ-ಪ್ರತಿಕ್ರಾಂತಿ ಎಂಬ ಅಂಬೇಡ್ಕರ್‌ ಅವರ ನಾಲ್ಕು ಕೃತಿಗಳ ಬಗ್ಗೆ ವಿದ್ಯಾರ್ಥಿ ಸಮುದಾಯಲ್ಲಿ ಅರಿವು ಮೂಡಲು ಇಂತಹ ಉಪನ್ಯಾಸ ಮತ್ತು ಸಂವಾದ ಹಮ್ಮಿಕೊಳ್ಳಲಾಗಿದೆ ಎಂದರು.

ಅಂಬೇಡ್ಕರ್‌ ಅವರು ರೂಪಿಸಿದ ಹಿಂದೂ ಕೋಡ್‌ ಬಿಲ್‌ ಮಹಿಳೆಯರಿಗೆ ಸಾಕಷ್ಟು ಶಕ್ತಿ ತುಂಬಿದೆ. ಈ ಹಿಂದೆ ಮಹಿಳೆಯರ ಮೇಲಿನ ಧಮನ ನೀತಿ ತಡೆಗಟ್ಟಲು ಈ ಕಾನೂನು ಸಾಕಷ್ಟು ನೆರವು ನೀಡಿದೆ ಎಂದರು.

ಪುತ್ತೂರು ಸ. ಪ್ರ. ದರ್ಜೆ ಮಹಿಳಾ ಕಾಲೇಜಿನ ಪ್ರಾಂಶುಪಾಲ ಪ್ರೊ| ಕ್ಸೇವಿಯರ್‌ ಡಿ’ಸೋಜಾ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ತಾ.ಪಂ ಇ.ಒ., ಪ್ರಭಾರ ಸಮಾಜ ಕಲ್ಯಾಣಧಿಕಾರಿ ಜಗದೀಶ್‌ ಎಸ್‌. ಮೊದಲಾದವರು ಉಪಸ್ಥಿತರಿದ್ದರು.

ಅಂಬೇಡ್ಕರ್‌  ಜ್ಞಾನ ದರ್ಶನ ಅಭಿಯಾನ ಸಂಯೋಜಕ ಪದ್ಮಾ ವೇಣೂರು ಸ್ವಾಗತಿಸಿದರು. ವಿದ್ಯಾ ರ್ಥಿನಿ ಮಮತಾ ಅವರು ಕಾರ್ಯ ಕ್ರಮ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next