ಬೀದರ್: ಗೂಡ್ಸ್ ವಾಹನದ ಪಂಕ್ಚರ್ ಟೈರ್ ಬದಲಿಸುವ ವೇಳೆ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದು ಮೂವರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಬುಧವಾರ ಬೆಳಗಿನ ಜಾವ ಹುಮನಾಬಾದ್ ನ ಮೀನಕೇರಾ ಕ್ರಾಸ್ ಬಳಿ ನಡೆದಿದೆ.
ಇಲ್ಲಿನ ಹುಮನಾಬಾದ ತಾಲೂಕಿನ ಮೀನಕೇರಾ ಕ್ರಾಸ್ ಬಳಿಯ ರಾಷ್ಟ್ರೀಯ ಹೆದ್ದಾರಿ ಪ್ಲೈ ಓವರ್ ಮೇಲೆ ಬುಧವಾರ ಮುಂಜಾನೆ ಈ ಘಟನೆ ನಡೆದಿದೆ.
ವಾಹನದಲ್ಲಿದ್ದ ಅನ್ಸರ್ ಬಸಂತಪೂರ್ ತಾಂಡಾ, ವಿಜಯ್ ಕುಮಾರ್ ಬಸಂತಪೂರ್, ಇಸ್ಮೈಲ್ ಚಾಂಗ್ಲೆರ ಮೃತಪಟ್ಟ ದುರ್ದೈವಿಗಳು.
ಮನ್ನಾಎಖ್ಖೆಳ್ಳಿ ಕಡೆಗೆ ಗೂಡ್ಸ್ ವಾಹನದಲ್ಲಿ ತೆರಳುವಾಗ ಹೆದ್ದಾರಿ ಮೇಲೆ ವಾಹನದ ಟಯರ್ ಪಂಕ್ಚರ್ ಆಗಿದೆ. ಕೆಳಗಿಳಿದು ಬದಲಿ ಟಯರ್ ಜೋಡಿಸುತ್ತಿವಾಗ ಅಪರಿಚಿತ ವಾಹನವೊಂದು ಇವರಿಗೆ ಡಿಕ್ಕಿ ಹೊಡೆದು ಹೋಗಿದೆ. ಪರಿಣಾಮ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಸ್ಥಳಕ್ಕೆ ಬಗ್ದಲ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.