Advertisement

ಹುಮನಾಬಾದ್: ಪಟ್ಟಣದಲ್ಲಿ ಇನ್ನೂ ರಾರಾಜಿಸುತ್ತಿವೆ ರಾಷ್ಟ್ರಧ್ವಜ, ಜಾಗೃತಿ ಮೂಡಿಸುವಲ್ಲಿ ವಿಫಲ

10:30 AM Aug 16, 2022 | Team Udayavani |

ಹುಮನಾಬಾದ್ : ಅಮೃತ ಮಹೋತ್ಸವ ನಿಮಿತ್ತ ಪ್ರತಿಯೊಂದು ಮನೆ ಹಾಗೂ ಅಂಗಡಿಗಳ ಮೇಲೆ ರಾಷ್ಟ್ರಧ್ವಜ ಹಾರಿಸುವಂತೆ ಜಾಗೃತಿ ಮೂಡಿಸಿದ ಅಧಿಕಾರಿಗಳು ರಾಷ್ಟ್ರಧ್ವಜ ಇಳಿಸುವ ಕುರಿತು ಜಾಗೃತಿ ಮೂಡಿಸುವಲ್ಲಿ ವಿಫಲವಾಗಿದೆ.

Advertisement

ಆ.13 ರಂದು ಪಟ್ಟಣದ ಮನೆಗಳು ಹಾಗೂ ಅಂಗಡಿಗಳ ಮೇಲೆ ರಾಷ್ಟ್ರ ಧ್ವಜ ಹಾರಿಸಲಾಗಿತ್ತು. ನಿಯಮ ಅನುಸಾರ ಆಗಷ್ಟ್ 15ರ ಸಂಜೆಗೆ ಗೌರವದಿಂದ ರಾಷ್ಟ್ರಧ್ವಜ ತಿಳಿಸಬೇಕಿತ್ತು. ಆದರೆ ಮನೆಗಳ ಮೇಲೆ ಹಾಗೂ ಅಂಗಡಿಗಳ ಮೇಲೆ ಹಾರಿಸಿದ ಧ್ವಜಗಳು ಆಗಸ್ಟ್ 16ರಂದು ಮುಂಜಾನೆ ಕೂಡ ಕಂಡುಬಂದವು. ಈ ಕುರಿತು ಕೆಲವರನ್ನು ವಿಚಾರಿಸಿದಾಗ, ರಾಷ್ಟ್ರಧ್ವಜ ಹಾರಿಸುವಂತೆ ಅಧಿಕಾರಿಗಳು ಖುದ್ದು ಅಂಗಡಿಗಳಿಗೆ ಬಂದು ಧ್ವಜ ಮಾರಾಟ ಮಾಡಿದ್ದಾರೆ. ಆದರೆ, ಆಗಷ್ಟ್ 15ರಂದೆ ಧ್ವಜ ಇಳಿಸಬೇಕು ಎಂದು ಹೇಳಿಲ್ಲ. ಮೊದಲ ಬಾರಿಗೆ ಧ್ವಜ ಹಾರಿಸಿದ್ದು, ಇದರ ಕುರಿತು ಕೂಡ ಅಧಿಕಾರಿಗಳು ಜಾಗೃತಿ ಮೂಡಿಸಬೇಕಿತ್ತು ತಾಲೂಕು ಆಡಳಿತ ಕಾಳಜಿ ವಹಿಸಬೇಕಿತ್ತು ಎಂಬ ಹೆಸರು ಹೇಳದ ಅಂಗಡಿಗಳ ಮಾಲೀಕರು ಅಭಿಪ್ರಾಯ ತಿಳಿಸಿದ್ದಾರೆ.

ಆಗಷ್ಟ್ 16ರ ಬೆಳಿಗ್ಗೆ ಕೂಡ ಪಟ್ಟಣದ ಬಹುತೇಕ ಕಡೆಗಳಲ್ಲಿ ರಾಷ್ಟ್ರ ಧ್ವಜ ಕಾಣಿಸುತ್ತಿರುವ ಕಾರಣಕ್ಕೆ ಜಿಲ್ಲಾಧಿಕಾತಿಗಳ ಗಮನಕ್ಕೆ ತರಲಾಗಿದ್ದು, ಜಿಲ್ಲಾಧಿಕಾರಿಗಳ ಆದೇಶ ಹಿನ್ನೆಲೆಯಲ್ಲಿ ತಾಲೂಕು ಆಡಳಿತ ಅಧಿಕಾರಿಗಳು ಬೆಳಿಗ್ಗೆ 10 ಗಂಟೆಯ ನಂತರ ಪಟ್ಟಣದಲ್ಲಿ ಧ್ವನಿವರ್ಧಕ ಮೂಲಕ ಧ್ವಜ ಇಳಿಸುವಂತೆ ಜಾಗೃತಿ ಮೂಡಿಸಲು ಮುಂದಾಗಿದ್ದಾರೆ.

ಇದನ್ನೂ ಓದಿ : ವಿಜಯಪುರದಲ್ಲೊಂದು ಅಪರೂಪದ ಧ್ವಜಾರೋಹಣ

Advertisement

Udayavani is now on Telegram. Click here to join our channel and stay updated with the latest news.

Next