Advertisement

“777 ಚಾರ್ಲಿ’ಜೊತೆ ಹಂಬಲ್ ಪೊಲಿಟಿಷಿಯನ್!

07:56 AM Jul 02, 2020 | Lakshmi GovindaRaj |

ರಕ್ಷಿತ್ ಶೆಟ್ಟಿ ಅಭಿನಯದ ಬಹು ನಿರೀಕ್ಷಿತ  “777 ಚಾರ್ಲಿ’ ಸಾಹಸ ಪ್ರಧಾನ ಕಾಮಿಡಿ ಚಿತ್ರವನ್ನು ಕಿರಣ್ ರಾಜ್ ನಿರ್ದೇಶಿಸುತ್ತಿದ್ದು, ಇದರಲ್ಲಿ ಹಂಬಲ್ ಪೊಲಿಟಿಷಿಯನ್ ನೊಗರಾಜ್ ಖ್ಯಾತಿಯ ದಾನೀಶ್ ಸೇಠ್ ಕೂಡಾ ನಟಿಸಿದ್ದಾರೆ. ಹೌದು! “777 ಚಾರ್ಲಿ’ ಚಿತ್ರದಲ್ಲಿ ದಾನೀಶ್  ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ.

Advertisement

ಟಿವಿ ಆಂಕರ್ ಹಾಗೂ ಕಾಮಿಡಿಯನ್ ಆಗಿರುವ ದಾನೀಶ್ ಹುಟ್ಟುಹಬ್ಬದ ಪ್ರಯುಕ್ತ ಅವರ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ​ ಹಂಚಿಕೊಂಡಿರುವ ಚಿತ್ರದ ನಿರ್ಮಾಪಕ ಪುಷ್ಕರ್​ ಮಲ್ಲಿಕಾರ್ಜುನಯ್ಯ, ದಾನಿಷ್ ಅವರನ್ನು ಚಿತ್ರತಂಡಕ್ಕೆ ಸ್ವಾಗತಿಸಿದ್ದು, ಕರ್ಶನ್ ರಾಯ್ ಪಾತ್ರದಲ್ಲಿ ದಾನೀಶ್ ಕಾಣಿಸಿಕೊಂಡಿದ್ದಾರೆ. ಅಲ್ಲದೇ ದಾನೀಶ್ ಭಾಗದ ಚಿತ್ರೀಕರಣ ಮುಗಿದಿದ್ದು, ಚಿತ್ರದಲ್ಲಿ ವಿಭಿನ್ನ ರೀತಿಯಲ್ಲಿ ಪಾತ್ರವನ್ನು ನಿಭಾಯಿಸಿದ್ದಾರೆ.

ಇನ್ನು ಪುಷ್ಕರ್ ಫಿಲ್ಮ್ಸ್ ನಡಿ ತಯಾರಾಗುತ್ತಿರುವ ಈ ಚಿತ್ರಕ್ಕೆ ರಕ್ಷಿತ್ ಶೆಟ್ಟಿ ಮತ್ತು ಜಿಎಸ್ ಗುಪ್ತಾ ಕೂಡ ಬಂಡವಾಳ ಹಾಕಿದ್ದು, ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಚಿತ್ರವನ್ನು ಬಿಡುಗಡೆ ಮಾಡುವ ಯೋಜನೆಯಲ್ಲಿ ಚಿತ್ರತಂಡವಿದೆ. ಚಿತ್ರದಲ್ಲಿ ರಾಜ್ ಬಿ ಶೆಟ್ಟಿ, ಸಂಗೀತ ಶೃಂಗೇರಿ ನಟಿಸಿದ್ದು,  ನೊಬಿನ್ ಪೌಲ್ ಸಂಗೀತ, ಅರವಿಂದ್ ಕಶ್ಯಪ್ ಕ್ಯಾಮೆರಾ ಕೈಚಳಕವಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next