Advertisement

ಹಣದಾಸೆಗೆ ನೆಮ್ಮದಿ ಮಾಯ: ಮುರುಘಾ ಶ್ರಿ

04:33 PM Jan 07, 2022 | Team Udayavani |

 ಚಿತ್ರದುರ್ಗ: ಮಾನವ ಇಂದು ಹಣದ ಆಸೆಗೆ ಒಳಗಾಗಿ ಜೀವನದಲ್ಲಿ ನೆಮ್ಮದಿ, ಅದರೊಟ್ಟಿಗೆ ವೃತ್ತಿ ಧರ್ಮವನ್ನೂ ಕಳೆದುಕೊಳ್ಳುತ್ತಿದ್ದಾನೆ ಎಂದು ಡಾ| ಶಿವಮೂರ್ತಿ ಮುರುಘಾ ಶರಣರು ಹೇಳಿದರು.

Advertisement

ಮುರುಘಾ ಮಠದಲ್ಲಿ ಬುಧವಾರ ಸಂಜೆ ಎಸ್‌. ಜೆ.ಎಂ ದಂತ ಮಹಾವಿದ್ಯಾಲಯ ಹಾಗೂ ಆಸ್ಪತ್ರೆ ಸಹಯೋಗದಲ್ಲಿ ನಡೆದ “ಶರಣ ಸಂಗಮ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮಾನವ ಧರ್ಮವೇ ಜೀವನ ಧರ್ಮ. ಜೀವನದ ಜೊತೆಯಲ್ಲಿ ಧರ್ಮ ಇದೆ. ಮನೋಧರ್ಮದ ಜೊತೆಯಲ್ಲಿ ಸಾಗುತ್ತ ಮತ್ತೂಂದು ಧರ್ಮ ಜೊತೆಯಾಗುವುದೇ ವೃತ್ತಿಧರ್ಮ. ವೃತ್ತಿ ಧರ್ಮ ಮತ್ತು ಜೀವನ ಧರ್ಮದಾಚೆಗೆ ಮತ ಧರ್ಮ ಇದೆ. ತತ್ವ ನಮ್ಮಲ್ಲಿ ಕಳೆದುಹೋಗಬಾರದು. ತತ್ವಾದರ್ಶಗಳನ್ನು ಆಚರಣೆ ಮಾಡುವಾಗ ಮಾನವನಿಗೆ ಕೆಲವೊಮ್ಮೆ ಜಾಣ ಮರೆವು ಬರುತ್ತದೆ ಎಂದರು.

ದಾವಣಗೆರೆಯ ಲೇಖಕ ಎನ್‌.ಜೆ. ಶಿವಕುಮಾರ್‌ ಮಾತನಾಡಿ, ಸತ್ಸಂಗ ಮಾಡಿದರೆ ತಪ್ಪುಗಳು ಕಡಿಮೆಯಾಗುತ್ತವೆ. ಆಗ ಮಾತ್ರ ಸಾರ್ಥಕ ಬದುಕು ಬಾಳಲು ಸಹಾಯಕವಾಗುತ್ತದೆ. ನಮ್ಮ ಜೀವನದಲ್ಲಿ ದೈನಂದಿನ ತತ್ವಾಚರಣೆ ಆಗಬೇಕು. ಆಗ ಮಾತ್ರ ಪರಿವರ್ತನೆ ಸಾಧ್ಯ. ಹೆಣ್ಣಿಗೆ ಮೊದಲು ಗೌರವವನ್ನು ಕೊಡಬೇಕು ಎಂದು ತಿಳಿಸಿದರು. ಲೇಖಕ ಶಶಿಧರ ಉಬ್ಬಳಗುಂಡಿ ಮಾತನಾಡಿ, ಮಾನವ ಜನ್ಮ ಸಾರ್ಥಕವಾಗಬೇಕಾದರೆ ಉತ್ತಮ ಚಿಂತನೆಗಳು ನಮ್ಮೊಳಗಿರಬೇಕು. ಉತ್ತಮ ಸಂಸ್ಕಾರ, ಸಂಸ್ಕೃತಿ ನಮ್ಮದಾಗಬೇಕು ಎಂದರು. ಇದೇ ವೇಳೆ ಮುರುಘಾ ಶರಣರು ಶಶಿಧರ ಉಬ್ಬಳಗುಂಡಿ ರಚಿಸಿರುವ “ಹೃನ್ಮಂದಿರ’ ಕೃತಿ ಬಿಡುಗಡೆ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next