Advertisement

ಬದುಕಿಗೆ ಜ್ಞಾನದಷ್ಟೇ ಮಾನವೀಯತೆ ಮುಖ್ಯ

12:01 PM Jan 28, 2019 | Team Udayavani |

ಸುರಪುರ: ಶಿಕ್ಷಣ ಸಂಸ್ಥೆಗಳು ಕೇವಲ ಅಕ್ಷರ ಜ್ಞಾನಕ್ಕೆ ಸೀಮಿತವಾಗಬಾರದು. ಪಠ್ಯಶಿಕ್ಷಣದೊಂದಿಗೆ ಉತ್ತಮ ನಾಗರಕರನ್ನಾಗಿ ಮಾಡುವ ಮೂಲಕ ಅವರಲ್ಲಿ ವ್ಯಕ್ತಿತ್ವ ರೂಪಿಸುವ ಶ್ರದ್ಧಾ ಕೇಂದ್ರಗಳಾಗಬೇಕು ಎಂದು ಗೋಗಿ ಸಜ್ಜಾದ್‌ ಎ ನೀಸೀನ್‌ ಸೈಯ್ಯದ್‌ ಶಾ ಮಹ್ಮದ್‌ ಉಲ್‌ ಹುಸೇನಿ ಹೇಳಿದರು.

Advertisement

ರಂಗಂಪೇಟೆ ಸುದೀಪ ಶಾಲೆಯಲ್ಲಿ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಪ್ರಶಸ್ತಿ ಪದವಿ ಪಡೆದ ನಾವೆಲ್ಲ ವಿದ್ಯಾವಂತರು. ಆದರೆ ಬುದ್ದಿವಂತರಲ್ಲ. ಅಕ್ಷರಸ್ಥರಾಗಿದ್ದೇವೆ ವಿನಃ ವಿಚಾರವಂತ್ತರಾಗುತ್ತಿಲ್ಲ. ಬದುಕಿಗೆ ಜ್ಞಾನ ಎಷ್ಟು ಮುಖ್ಯವೋ ಮಾನವೀಯತೆಯೂ ಅಷ್ಟೆ ಮುಖ್ಯವಾಗಿದೆ. ಹೀಗಾಗಿ ಶಿಕ್ಷಕರು ಶಿಕ್ಷಣದ ಜತೆಗೆ ಮಕ್ಕಳಲ್ಲಿ ನೈತಿಕ ಮೌಲ್ಯ ಕಲಿಸಿಕೊಡಬೇಕು. ಇದರಿಂದ ಅವರ ಭವಿಷ್ಯ ಉಜ್ವಲವಾಗುತ್ತದೆ ಎಂದು ಸಲಹೆ ನೀಡಿದರು.

ಮಕ್ಕಳಿಗೆ ಸಂಸ್ಕಾರ ಮುಖ್ಯ. ಸಂಸ್ಕಾರಯುತ ಮಕ್ಕಳು ಮಾತ್ರ ಉತ್ತಮ ನಾಗರಿಕರಾಗಬಲ್ಲರು. ಇದಕ್ಕೆ ಸಾಕಷ್ಟು ಉದಾಹರಣೆ ನಮ್ಮ ಕಣ್ಮುಂದೆ ಇವೆ. ಸಂಸ್ಕಾರ ಇಲ್ಲದ ಕಾರಣ ಎಷ್ಟೋ ಮಕ್ಕಳು ಹಾದಿ ತಪ್ಪುತ್ತಿದ್ದಾರೆ. ಕೊಲೆಗಡುಕರು, ಕಳ್ಳರು, ವಿದ್ವಂಸಕರು, ಅಪರಾಧಿಗಳಾಗುತ್ತಿದ್ದಾರೆ. ಕಾರಣ ಶಿಕ್ಷಣ ಸಂಸ್ಥೆಗಳು ಶಿಕ್ಷಣದ ಜತೆಗೆ ಸಂಸ್ಕಾರ ನೀಡಿ ಮೌಲ್ಯಗಳನ್ನು ಕಲಿಸಿಕೊಡುವುದು ಅಗತ್ಯವಾಗಿದೆ ಎಂದು ಹೇಳಿದರು. ಹೋರಟಗಾರ ವೆಂಕೋಬ ದೊರೆ ಮಾತನಾಡಿ, ಪ್ರಾಥಮಿಕ ಶಿಕ್ಷಣ ಬದುಕಿನ ಅಮೂಲ್ಯ ಘಟ್ಟ ಪ್ರಾಥಮಿಕ ಶಿಕ್ಷಣದೊಂದಿಗೆ ಅನೇಕ ಕಾರ್ಯಕ್ರಮ ಏರ್ಪಡಿಸಿ ಮಕ್ಕಳಲ್ಲಿ ನೈತಿಕ ಮೌಲ್ಯ ಬೆಳೆಸುತ್ತಿರುವ ಸಂಸ್ಥೆ ಕಾರ್ಯ ಶ್ಲಾಘನೀಯವಾಗಿದೆ ಎಂದು ಸ್ಮರಿಸಿದರು.

ಇದೇ ವೇಳೆ ರಾಜ್ಯ, ಜಿಲ್ಲಾಹಾಗೂ ತಾಲೂಕು ಮಟ್ಟದ ವಿವಿಧ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಪಡೆದ ಶಾಲೆ 8ನೇ ತರಗತಿ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ನಂತರ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಕಾಂಗ್ರೆಸ್‌ ಪಕ್ಷದ ಯುವ ಮುಖಂಡ ರಾಜಾ ಸಂತೋಷ ನಾಯಕ ಉದ್ಘಾಟಿಸಿದರು. ಸಂಸ್ಥೆ ಅಧ್ಯಕ್ಷ ಸಾಯಿಬಣ್ಣ ಪುರ್ಲೆ ಅಧ್ಯಕ್ಷತೆ ವಹಿಸಿದ್ದರು. ವೆಂಕಟೇಶ ಭಕ್ರಿ, ಶಮಾ ಅಂಜುಮ್‌, ಜ್ಯೋತಿ, ವಿಜಯಲಕ್ಷ್ಮಿ, ಪದ್ಮಾಕ್ಷಿ ಶಹಾಪುರಕರ್‌,ಮಹ್ಮದ್‌ ಸರಫರಾಜ, ಅರಶಿಯಾ ಇದ್ದರು. ಗೋಣೇಸ ನಂಬಾ ಸ್ವಾಗತಿಸಿದರು. ಎಂ.ಕೆ. ಬಾಬೂ ನಿರೂಪಿಸಿದರು. ಜೋಹರಾ ರುಬಿನ ವಂದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next