Advertisement

ಮಾನವೀಯತೆ ಕೇಂದ್ರೀಕೃತ ತಂತಜ್ಞಾನ ಸೃಷ್ಟಿಯಾಗಲಿ

03:13 PM Mar 04, 2017 | Team Udayavani |

ಹುಬ್ಬಳ್ಳಿ: ಯಾವುದೇ ತಂತ್ರಜ್ಞಾನ ಸೃಷ್ಟಿಗೆ ಮುಂದಾದರೂ ಅದು ಮಾನವೀಯತೆಯ ಕೇಂದ್ರಿಕೃತವಾಗಿ ಸೃಷ್ಟಿಯಾಗುವಂತಾಗಬೇಕು. ಅದು ಜನರ ನೈಜ ಸಮಸ್ಯೆಗಳಿಗೆ ಪರಿಹಾರ ರೂಪವಾಗಿ ಬಳಕೆಯಾಗುವಂತಿರಬೇಕು ಎಂದು ನಾವೀನ್ಯತೆ ಮತ್ತು ವಿನ್ಯಾಸ ಚಿಂತನೆ ತಜ್ಞ ಸವೀನ್‌ ಹೆಗ್ಡೆ ಅಭಿಪ್ರಾಯಪಟ್ಟರು.

Advertisement

ಕೆಎಲ್‌ಇ ತಾಂತ್ರಿಕ ವಿಶ್ವವಿದ್ಯಾಲಯದ ಸಿಟಿಐಇ ಆಯೋಜಿಸಿದ್ದ ಉದ್ಯಮಶೀಲತೆ ಸಮ್ಮೇಳನದಲ್ಲಿ ಪ್ರಧಾನ ಭಾಷಣ ಮಾಡಿದ ಅವರು, ಉದ್ಯಮದ ಹಸಿವಿದ್ದಾಗ ಮಾತ್ರ ಉದ್ಯಮದ ಸಾಧನೆ ಸಾಧ್ಯವಾಗಲಿದೆ. ಏಕಾಂಗಿ ಸಾಧನೆಗಿಂತ ಉದ್ಯಮದಲ್ಲಿ ತಂಡ ಸಾಧನೆಗೆ ಒತ್ತು ನೀಡಿದಾಗ ಯಶಸ್ಸು ಹಿಮ್ಮಡಿಗೊಳ್ಳಲಿದೆ ಎಂದರು. 

ಪ್ರತಿಯೊಬ್ಬರಲ್ಲೂ ಅವರದ್ದೇಯಾದ ಸಾಮರ್ಥ್ಯ-ಶಕ್ತಿ ಇರುತ್ತದೆ. ಅದರ ಬಳಕೆಗೆ ಸಮರ್ಪಕ ಹಾಗೂ ಸರಿಯಾದ ಯತ್ನ ಕೈಗೊಳ್ಳಬೇಕಾಗಿದೆ. ಉದ್ಯಮದ ಒತ್ತಡವಿದ್ದಾಗ ಸಾಧನೆ ವೇಗವೂ ಹೆಚ್ಚುತ್ತದೆ. ನಮ್ಮ ಸಾಮರ್ಥ್ಯದ ಬಗ್ಗೆ ನಾವೇ ಕಡಿಮೆ ಅಂದಾಜು ಮಾಡಿಕೊಂಡು ಅಷ್ಟೇಕ್ಕೆ ಸೀಮಿತವಾದರೆ ಸಾಧನೆಯಿಂದ ವಂಚಿತರಾಗಬೇಕಾಗುತ್ತದೆ ಎಂದರು. 

ಸೊಳ್ಳೆ ಸೆರೆ ಸಾಧನಕ್ಕಿಲ್ಲ ಮನ್ನಣೆ: ಮಝಿಕ್ವೆ„ಟ್‌ ಅನ್ವೇಷಕ ಇಗ್ನೇಷಿಯಸ್‌ ಓರ್ವಿನ್‌ ನೊರೊನ್ಹಾ ಮಾತನಾಡಿ, ತಾವು ಸೊಳೆಗಳನ್ನು ಸೆರೆ ಹಿಡಿಯುವ ಸಾಧನ ಅಭಿವೃದ್ಧಿ ಪಡಿಸಿದ್ದರೂ ಅದಕ್ಕೆ ರಾಜ್ಯ ಸರಕಾರ ಮನ್ನಣೆ ನೀಡುತ್ತಿಲ್ಲ ಎಂದು ಆರೋಪಿಸಿದರು. ವಿಶೇಷವಾಗಿ ಜಾನುವಾರುಗಳಿಗೆ ಹೆಚ್ಚಿನ ಪ್ರಯೋಜನಕಾರಿಯಾಗಬಲ್ಲ ಸಾಧನ ಇದಾಗಿದೆ. 

ಸಾಧನದ ಬೌದ್ಧಿಕ ಆಸ್ತಿ ಹಕ್ಕು ಪಡೆದಿದ್ದು, ರಾಜ್ಯ ಪಶುಸಂಗೋಪನಾ ಇಲಾಖೆ ಸಚಿವರಿಗೆ ಇದರ ಮಾಹಿತಿ ನೀಡಿದೆ. ಅವರು ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಸೂಚಿಸಿದ್ದರು. ಅವರು ಇದರ ಪ್ರಾಯೋಗಿಕ ಹಾಗೂ ಪರಿಣಾಮಗಳ ಕುರಿತಾಗಿ ಬೀದರನಲ್ಲಿನ ಪಶು ಸಂಗೋಪನಾ ವಿಶ್ವವಿದ್ಯಾಲಯಕ್ಕೆ ಸೂಚಿಸಿದ್ದರು. 

Advertisement

ವಿವಿಯವರು ಸುಮಾರು ಆರು ತಿಂಗಳ ಪರೀಕ್ಷೆಯಲ್ಲಿ ಸೊಳ್ಳೆ ಸೆರೆ ಸಾಧನ ಬಳಕೆ ಅನಂತರದಲ್ಲಿ ಆಕಳುಗಳು ಹಾಲು ನೀಡಿಕೆ ಪ್ರಮಾಣ ಹೆಚ್ಚಿದ್ದು, ಆಕಳುಗಳ ತೂಕದಲ್ಲೂ ಹೆಚ್ಚಳವಾಗಿದೆ ಎಂದು ವರದಿ ನೀಡಿದೆ. ಈ ಹಿಂದೆ ಆರೋಗ್ಯ ಸಚಿವರಾಗಿದ್ದ ಯು.ಟಿ. ಖಾದರ್‌ ಅವರು ತಮ್ಮ ಮನೆಯಲ್ಲಿ ಇದನ್ನು ಬಳಕೆ ಮಾಡಿದರೂ ಯಾವುದೇ ಸಹಾಯ ಮಾಡಲಿಲ್ಲ.

ರಾಜ್ಯ ಸರಕಾರ ಅದನ್ನು ಕೇಂದ್ರ ಸರಕಾರದ ರಾಷ್ಟ್ರೀಯ ಕೃಷಿ ಯೋಜನೆ ವಿಭಾಗಕ್ಕೆ ನೀಡುವಂತೆ ಹೇಳಿದೆ. ಅಷ್ಟೇ ಅಲ್ಲ ರೈತರಿಂದ ಬೇಡಿಕೆ ಬಂದಿದ್ದರೂ ಅದರ ಮಾರಾಟಕ್ಕೆ ಅನುಮತಿ ನೀಡಿಲ್ಲ ಎಂದರು. ನನ್ನ ಸಾಧನ ರಾಷ್ಟ್ರಪತಿ ಭವನದಲ್ಲೂ ಪ್ರಯೋಗವಾಗಿದೆ.ಲಿಮ್ಕಾ ದಾಖಲೆಗೆ ಬಿಡುಗಡೆಯಾಗಿದೆ. ಇತ್ತೀಚೆಗೆ ಜಾರ್ಖಂಡ್‌ನ‌ ರಾಂಚಿಯಲ್ಲಿ ಕಾರ್ಯಕ್ರಮವೊಂದಕ್ಕೆ ಹೋಗಿದ್ದಾಗ.

ಅಲ್ಲಿನ ಮುಖ್ಯಮಂತ್ರಿಯವರ ಕಾರ್ಯದರ್ಶಿಯವರಿಗೆ ಸೊಳ್ಳೆ ಸೆರೆ ಸಾಧನದ ಮಾಹಿತಿ ನೀಡಿದಾಗ, ನಮ್ಮಲ್ಲಿ ಉತ್ಪಾದನಾ ಘಟಕ ಸ್ಥಾಪನೆಗೆ ಏನೆಲ್ಲಾ ಸಹಾಯ ಬೇಕು ಹೇಳಿ ಅದಕ್ಕೆ ನಾವು ಸಿದ್ದರಿದ್ದೇವೆ ಎಂದಿದ್ದಾರೆ. ಕರ್ನಾಟಕ ತನ್ನ ಅವಕಾಶವೊಂದನ್ನು ಕಳೆದುಕೊಳ್ಳುತ್ತಿದೆ ಎಂದರು. 

ಸೊಳ್ಳೆ ಸೆರೆ ಸಾಧನ ಬಳಕೆ ಅನಂತರದಲ್ಲಿ ಕಂಡು ಬಂದ ಕೆಲ ತಾಂತ್ರಿಕ ಲೋಪ ಸರಿಪಡಿಸಲಾಗಿದೆ. ಈ ಹಿಂದೆ ಇದರ ನಿರ್ವಹಣೆ ವೆಚ್ಚ 200 ರೂ. ಬರುತ್ತಿತ್ತು. ಇದೀಗ ಅದನ್ನು ದಿನಕ್ಕೆ ಕೇವಲ 5 ಪೈಸೆಗೆ ಕುಗ್ಗಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿಯವರ ಮುಂದೆ ಇದರ ಪ್ರದರ್ಶನಕ್ಕೆ ಅವಕಾಶ ಸಿಕ್ಕಿದ್ದು, ಅವರಾದರೂ ಸೊಳ್ಳೆ ಮುಕ್ತ ಭಾರತ ಅಭಿಯಾನ ನಿಟ್ಟಿನಲ್ಲಿ ನೆರವು ನೀಡುವ ನಿರೀಕ್ಷೆ ಇದೆ ಎಂದರು.

ಅನಂತರ ವಿವಿಧ ತಾಂತ್ರಿಕಗೋಷ್ಠಿಗಳು ನಡೆದವು.ಕೆಎಲ್‌ಇ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಡಾ| ಅಶೋಕ ಶೆಟ್ಟರ, ಪಿಕ್ಯು ಕನ್ಸಲ್ಟಂಟನ್ಸ್‌ ಸಿಇಒ ಸುರಭಿ ಹೊಡಿಗೇರಿ, ನಂದಿತಾ ನಾಗನಗೌಡರ ಇನ್ನಿತರರು ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next