ಮಡಿಕೇರಿ: ಎಲ್ಲ ಧರ್ಮಗಳಿಗಿಂತ ಮಾನವೀಯ ಧರ್ಮ ದೊಡ್ಡದು, ಯಾರೇ ಸಂಕಷ್ಟಕ್ಕೆ ಸಿಲುಕಿದರೂ ನೋವಿಗೆ ಸ್ಪಂದಿಸುವ ಗುಣವನ್ನು ಪ್ರತಿಯೊಬ್ಬರು ಮೈಗೂಡಿಸಿಕೊಳ್ಳಬೇಕೆಂದು ಜಾಮಿಯತ್ ಉಲಮಾ ಎ ಯ ರಾಜ್ಯಾಧ್ಯಕ್ಷ ಮೌಲಾನ ಮುಫ್ತಿ ಇಫ¤ಖಾರ್ ಅಹಮದ್ ಕರೆ ನೀಡಿದರು.
ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ಜಾಮಿಯತ್ ಉಲಾಮ-ಎ-ಬೆಂಗಳೂರು ಮತ್ತು ಮಡಿಕೇರಿ ಘಟಕದ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರೀಯ ಭಾವೈಕ್ಯತೆ ಸಮಾವೇಶ ಮತ್ತು ಸಂತ್ರಸ್ತರಿಗೆ ಆರ್ಥಿಕ ನೆರವಿನ ಚೆಕ್ ವಿತರಿಸುವ ಕಾರ್ಯಕ್ರಮ ನಡೆಯಿತು.
ಸಂತ್ರಸ್ತರಿಗೆ ಚೆಕ್ ವಿತರಿಸಿ ಮಾತನಾಡಿದ ಅವರು ಹಿಂದು, ಮುಸ್ಲಿಂ ಕ್ರೆçಸ್ತ ಅಥವಾ ಬೇರೆ ಯಾವುದೇ, ಜಾತಿ, ಧರ್ಮಗಳಿಗಿಂತ ಪ್ರಸ್ತುತ ದಿನಗಳಲ್ಲಿ ಮಾನವೀಯ ಧರ್ಮವೇ ಶ್ರೇಷ್ಠವೆನಿಸಿದೆ ಎಂದರು.
ರಾಜ್ಯ ಪ್ರಧಾನ ಕಾರ್ಯದರ್ಶಿ ಹಜರತ್ ಮೌಲಾನ ಮುಪ್ತಿ ಸಂಶುದ್ದೀನ್, ಉಪಾಧ್ಯಕ್ಷ ಜೈನುಲ್ಲಾ ಆಭಿದಿನ್ ರಶಾದಿ ಮುಜಹಿರಿ, ನಗರಸಭಾ ಸದಸ್ಯ ಅಮೀನ್ ಮೊಹಿಸಿನ್, ನಗರಸಭಾ ಅಧ್ಯಕ್ಷರಾದ ಕಾವೇರಮ್ಮ ಸೋಮಣ್ಣ ಮಾತನಾಡಿದರು. ಕಾರ್ಯಕ್ರಮದಲ್ಲಿ 180 ಸಂತ್ರಸ್ತರಿಗೆ ಚೆಕ್ ರೂಪದಲ್ಲಿ ಪರಿಹಾರ ಧನವನ್ನು ವಿತರಿಸಲಾಯಿತು. ಎಲ್ಲಾ ಜಾತಿ, ಜನಾಂಗದ ಸಂತ್ರಸ್ತರಿಗೂ ಧನ ಸಹಾಯ ಮಾಡಲಾಯಿತು. ಮುಂದಿನ ದಿನಗಳಲ್ಲಿ ಮತ್ತಷ್ಟು ಸಂತ್ರಸ್ತರ ಪಟ್ಟಿಯನ್ನು ತಯಾರಿಸಿ ಆರ್ಥಿಕ ನೆರವು ನೀಡಲಾಗುವುದು ಎಂದು ಆಯೋಜಕರು ತಿಳಿಸಿದರು.
ಜಾಮಿಯತ್ ಉಲಮಾ ಸಂಸ್ಥೆಯ ರಾಷ್ಟ್ರೀಯ ಸಮಿತಿ ಸದಸ್ಯ ನಸುರುಲ್ಲಾ ಷರೀಫ್, ಪ್ರಮುಖರಾದ ಎಂ.ಐ.ಅಕºರ್ ಪಾಷ, ಹಫೀಜ್ ರಿಯಾಜ್ ಅಹ್ಮದ್, ಮೌಲಾನ ಅಬ್ದುಲ್ ಹಕೀಂ, ಎಂ.ಕೆ.ಮನ್ಸೂರ್, ಹಾಫಿಜ್ ಇಸಾಕ್ ಅಹ್ಮದ್ ಮತ್ತಿತರರು ಹಾಜರಿದ್ದರು.
ಬೆಳಕು ನೀಡಬೇಕು ದೇವರು ಪ್ರತಿಯೊಬ್ಬರಲ್ಲು ಮಾನವೀಯತೆ ಎಂಬ ಬೀಜವನ್ನು ಬಿತ್ತಿದ್ದಾನೆ, ಇದನ್ನು ಹೆಮ್ಮರವಾಗಿ ಬೆಳೆಸಿಕೊಂಡು ಸಂಕಷ್ಟದಲ್ಲಿರುವವರಿಗೆ ಬೆಳಕು ನೀಡುವ ಕಾರ್ಯವನ್ನು ಮಾಡಬೇಕಿದೆ. ಪ್ರಾಣಿಗಳಿಗೂ ಮಾನವೀಯತೆಯ ಅಂಶಗಳನ್ನು ನೀಡಲಾಗಿದೆ, ಆದರೆ ಅವುಗಳಿಗೆ ಜವಬ್ದಾರಿಗಳಿಲ್ಲ. ಮಾನವರಿಗೆ ತಮ್ಮದೇ ಆದ ಸಾಮಾಜಿಕ ಹೊಣೆಗಾರಿಕೆ ಇದ್ದು, ಒಗ್ಗಟ್ಟನ್ನು ಪ್ರತಿಪಾದಿಸುವ ಮಾರ್ಗದಲ್ಲಿ ಸಾಗಬೇಕೆ ಹೊರತು ಕೋಮು, ಗಲಭೆಗಳನ್ನು ಸೃಷ್ಟಿಸಬಾರದು ಎಂದು ಮೌಲಾನ ಮುಫ್ತಿ ಇಫ¤ಖಾರ್ ಅಹಮದ್ ಅವರು ಕಿವಿಮಾತು ಹೇಳಿದರು.