Advertisement

ಹುಮನಾಬಾದ ಸರ್ಕಾರಿ ಆಸ್ಪತ್ರೆಯಲ್ಲಿ 50 ಬೆಡ್‌ ಭರ್ತಿ!

06:57 PM Apr 25, 2021 | Team Udayavani |

ಹುಮನಾಬಾದ: ಕೋವಿಡ್ ಮಹಾಮಾರಿ ಹುಮನಾಬಾದ ಹಾಗೂ ಚಿಟಗುಪ್ಪ ತಾಲೂಕಿನಲ್ಲಿ ಕೂಡ ಹೆಚ್ಚಿನ ಪ್ರಭಾವಬಿರುತ್ತಿದೆ. ಎರಡು ತಾಲೂಕಿನಲ್ಲಿ ಒಟ್ಟಾರೆ 178 ಜನ ಸೋಂಕಿತರು ಹೋಂ ಐಸೋಲೇಷನ್‌ನಲ್ಲಿ ಇದ್ದಾರೆ. ಹುಮನಾಬಾದ ಪಟ್ಟಣದಸರ್ಕಾರಿ ಆಸ್ಪತ್ರೆಯಲ್ಲಿನ 50 ಬೆಡ್‌ಗಳು ಭರ್ತಿಯಾಗಿವೆ.

Advertisement

ಪಟ್ಟಣದ ಆಸ್ಪತ್ರೆಯಲ್ಲಿ ಒಟ್ಟಾರೆ 100 ಬೆಡ್‌ಗಳಿದ್ದು, 50 ಬೆಡ್‌ಗಳು ಕೊವೀಡ್‌ ಕೇರ್‌ ಸೆಂಟರ್‌ಗೆ ಮೀಸಲಿರಿಸಲಾಗಿತ್ತು. ಶನಿವಾರಕ್ಕೆ ಎಲ್ಲಾ ಬೆಡ್‌ಗಳುಭರ್ತಿಯಾಗಿದ್ದು, ಇದೀಗ ಹಳ್ಳಿಖೇಡ(ಬಿ) ಪಟ್ಟಣದಲ್ಲಿನ ಆಸ್ಪತ್ರೆಯಲ್ಲಿ 15 ಬೆಡ್‌, ಮನ್ನಾಎಖೇಳ್ಳಿ ಆಸ್ಪತ್ರೆಯಲ್ಲಿ 15 ಬೆಡ್‌ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ, ಚಿಟಗುಪ್ಪ ಪಟ್ಟಣದಲ್ಲಿನ ಆಸ್ಪತ್ರೆಯಲ್ಲಿ 15 ಬೆಡ್‌ಗಳ ವ್ಯವಸ್ಥೆ ಇದ್ದು, ಇಬ್ಬರು ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಶನಿವಾರ ಒಂದೇ ದಿನ ಎರಡು ತಾಲೂಕಿನಲ್ಲಿ 51 ಪ್ರಕರಣಗಳು ಪತ್ತೆಯಾಗಿರುವ ಕುರಿತು ಆರೋಗ್ಯ ಇಲಾಖೆ ಖಚಿತ ಪಡಿಸಿದ್ದು, ಕೆಲ ದಿನಗಳಲ್ಲಿಯೇಎಲ್ಲಾ ಕಡೆಗಳಲ್ಲಿನ ಬೆಡ್‌ಗಳು ಭರ್ತಿಯಾಗಿ ಬೆಡ್‌ಗಳ ಅಭಾವ ಉಂಟಾಗುವ ಸಾಧ್ಯತೆ ಹೆಚ್ಚಿದೆ. ಸೋಂಕಿನ ಯಾವುದೇ ಲಕ್ಷಣಇಲ್ಲದ ಜನರನ್ನು ಮನೆಯಲ್ಲಿ ಆರೈಕೆಮಾಡಿಕೊಳ್ಳಲು ಅವಕಾಶ ನೀಡಿದ್ದು, ಅಲ್ಪಪ್ರಮಾಣದಲ್ಲಿ ಸೋಂಕಿನ ಲಕ್ಷಣಗಳುಕಂಡು ಬರುವ ಜನರನ್ನು ಇದೀಗ ಹೊಸ ಕೋವಿಡ್‌ ಕೇರ್‌ ಸೆಂಟರ್‌ನಲ್ಲಿ ಇರಿಸಲು ಆರೋಗ್ಯ ಇಲಾಖೆ ಸಜ್ಜಾಗಿದೆ.

ಯಾರಿಗೆ ಸೋಂಕಿನ ಲಕ್ಷಣಗಳು ಹೆಚ್ಚಾಗಿ ಆಕ್ಸಿಜನ್‌ ನೀಡಬೇಕಾದ ಅನಿವಾರ್ಯತೆ ಇರುತ್ತದೆಯೋ ಅವರನ್ನು ಆಕ್ಸಿಜನ್‌ ಇರುವ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆನೀಡಲಾಗುತ್ತದೆ. ಹುಮನಾಬಾದ ಪಟ್ಟಣದಹೊರವಲಯದಲ್ಲಿನ ರಾಜರಾಜೇಶ್ವರಿಕಾಲೇಜಿನಲ್ಲಿ 50 ಬೆಡ್‌ ಹಾಗೂ ಚಿಟಗುಪ್ಪಪಟ್ಟಣದ ಬಿಸಿಎಂ ವಸತಿ ನಿಲಯದಲ್ಲಿ36 ಬೆಡ್‌ಗಳ ವ್ಯವಸ್ಥೆ ಮಾಡಲಾಗಿದೆಎಂದು ತಾಲೂಕು ಆರೋಗ್ಯಾಧಿ ಕಾರಿ ಮಾಹಿತಿ ನೀಡಿದ್ದಾರೆ. ಆರಂಭಗೊಂಡಿಲ್ಲ

ವೆಂಟಿಲೇಟರ್‌: ಹುಮನಾಬಾದ ಸರ್ಕಾರಿ ಆಸ್ಪತ್ರೆಯಲ್ಲಿ ಕೋಟಿಗಳ ಲೆಕ್ಕದಲ್ಲಿ ಹಣಖರ್ಚು ಮಾಡಿ ವಿಶೇಷ ಐಸಿಯು ಘಟಕ ಹಾಗೂ 5 ವೆಂಟಿಲೇಟರ್‌ಗಳ ವ್ಯವಸ್ಥೆಮಾಡಲಾಗಿದೆ. ಆದರೆ, ನೂರಿತ ತಜ್ಞಸಿಬ್ಬಂದಿ ಇಲ್ಲದ ಕಾರಣ ವೆಂಟಿಲೇಟರ್‌ಗಳುಕಾರ್ಯ ನಿರ್ವಹಿಸುತ್ತಿಲ್ಲ. ಕೆಲ ದಿನಗಳಹಿಂದೆ ನೂರಿತ ಸಿಬ್ಬಂದಿ ನೇಮಕ ಮಾಡುವಬಗ್ಗೆ ಜಿಲ್ಲಾ ಆರೋಗ್ಯಾ ಧಿಕಾರಿಗಳು ಭರವಸೆನೀಡಿದ್ದರು. ಆದರೆ, ಈ ವರೆಗೂ ಸಿಬ್ಬಂದಿಗಳನೇಮಕವಾಗದ ಹಿನ್ನೆಲೆಯಲ್ಲಿ ಬಹುತೇಕಜನರು ಜಿಲ್ಲಾಸ್ಪತ್ರೆ, ಕಲಬುರಗಿ ಆಸ್ಪತ್ರೆ,ಹೈದ್ರಾಬಾದ ಖಾಸಗಿ ಆಸ್ಪತ್ರೆಗಳಲ್ಲಿ ದಾಖಲು ಮಾಡಿ ಚಿಕಿತ್ಸೆ ನೀಡುವ ಸ್ಥಿತಿ ಬಂದಿದೆ.

ಬೇರೆ ತಾಲೂಕಿನವರು ದಾಖಲು:ಹುಮನಾಬಾದ ಸರ್ಕಾರಿ ಆಸ್ಪತ್ರೆಯಲ್ಲಿಎಲ್ಲಾ ರೀತಿಯ ಮೂಲ ಸೌಕರ್ಯಇರುವ ಕುರಿತು ಮಾಹಿತಿ ಪಡೆದಜಿಲ್ಲೆಯ ಇತರೆ ತಾಲೂಕಿನ ಸೋಂಕಿತರಕುಟುಂಬದವರು ನೇರವಾಗಿ ಇಲ್ಲಿಗೆ ಬಂದುದಾಖಲಾಗುತ್ತಿದ್ದಾರೆ. 50 ಸೋಂಕಿತರಪೈಕಿ 10ಕ್ಕೂ ಹೆಚ್ಚಿನ ಸೋಂಕಿತರು ಬೇರೆ ತಾಲೂಕಿನವರು ಇದ್ದಾರೆ ಎಂದು ಆಸ್ಪತ್ರೆಯವೈದ್ಯಾಧಿಕಾರಿ ಡಾ| ನಾಗನಾಥ ಹುಲಸೂರೆ ಮಾಹಿತಿ ನೀಡಿದ್ದಾರೆ.

Advertisement

ಸದ್ಯ ಹುಮನಾಬಾದ ಸರ್ಕಾರಿ ಆಸ್ಪತ್ರೆಯಲ್ಲಿ ಎಲ್ಲಾ ಬೆಡ್‌ಗಳುಭರ್ತಿಯಾಗುತ್ತಿದ್ದು, ರಾಜ ರಾಜೇಶ್ವರಿ ಆರ್ಯುವೇದ ಕಾಲೇಜಿನಲ್ಲಿ50 ಬೇಡ್‌ ಕೋವಿಡ್‌ ಕೇರ್‌ ಸೆಂಟರ್‌ ತೆರೆದು ಮೂಲ ಸೌಕರ್ಯಒದಗಿಸಿದ್ದೇನೆ. ಸರ್ಕಾರಿ ಆಸ್ಪತ್ರೆಯಲ್ಲಿ ವೆಂಟಿಲೇಟರ್‌ಗಳುಲಭ್ಯವಿದೆ. ಆದರೆ, ನೂರಿತ ತಜ್ಞರು ಇಲ್ಲದ ಕಾರಣ ಅವುಗಳುಕಾರ್ಯ ನಿರ್ವಹಿಸುತ್ತಿಲ್ಲ. ಈ ಕುರಿತು ಜಿಲ್ಲಾ ಆರೋಗ್ಯಾ ಧಿಕಾರಿಹಾಗೂ ಜಿಲ್ಲಾಧಿಕಾರಿಗಳು ವಿಶೇಷ ಗಮನ ಹರಿಸಿ ಕೂಡಲೇ ನೂರಿತ ಸಿಬ್ಬಂದಿ ನೇಮಕ ಮಾಡುವಂತೆ ತಿಳಿಸಿದ್ದೇನೆ.  –ಡಾ| ಚಂದ್ರಶೇಖರ ಪಾಟೀಲ, ವಿಧಾನ ಪರಿಷತ್‌ ಸದಸ್ಯ

ಪ್ರತಿನಿತ್ಯ ಕೊವೀಡ್‌ ಹೊಸ ಪ್ರಕರಣಗಳು ಪತ್ತೆಯಾಗುತ್ತಿದ್ದು, ಸೋಂಕಿನ ಯಾವುದೇ ಲಕ್ಷಣ ಇಲ್ಲದ ವ್ಯಕ್ತಿಗಳನ್ನು ಮನೆಯಲ್ಲಿಯೇಆರೈಕೆಗೆ ಸೂಚಿಸಲಾಗುತ್ತಿದೆ. ಸಾಧಾರಣ ಲಕ್ಷಣ ಕಂಡು ಬರುವವ್ಯಕ್ತಿಗಳನ್ನು ಕೊವೀಡ್‌ ಕೇರ್‌ ಸೆಂಟರ್‌ನಲ್ಲಿ ಆರೈಕೆ ಮಾಡಲುಸೂಚಿಸಲಾಗಿದೆ. ಸೋಂಕಿನ ಲಕ್ಷಣಗಳು ಕಂಡು ಬಂದು ಆಕ್ಸಿಜನ್‌ನೀಡಬೇಕಾದ ಸ್ಥಿತಿಯಲ್ಲಿರುವ ರೋಗಿಗಳನ್ನು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುವುದು. – ಡಾ| ಶಿವಕುಮಾರ ಸಿದ್ದೇಶ್ವರ, ತಾಲೂಕು ಆರೋಗ್ಯಾಧಿಕಾರಿ

 

-ದುರ್ಯೋಧನ ಹೂಗಾರ

Advertisement

Udayavani is now on Telegram. Click here to join our channel and stay updated with the latest news.

Next