Advertisement

ಮಾಸ್ಕ್ ಧರಿಸದವರಿಗೆ ದಂಡ ವಿಧಿಸಿ: ರಾಜಶೇಖರ

05:48 PM Jun 13, 2020 | Naveen |

ಹುಮನಾಬಾದ: ಪಟ್ಟಣದ ಜನರಲ್ಲಿ ಕೋವಿಡ್ ಭೀತಿ ಕಂಡುಬರುತ್ತಿಲ್ಲ. ವ್ಯಾಪರಸ್ಥರು, ಗ್ರಾಹಕರು ಮಾಸ್ಕ್ ಧರಿಸದಿರುವುದು ಕಂಡುಬರುತ್ತಿದೆ. ಪುರಸಭೆ ಮುಖ್ಯಾಧಿಕಾರಿಗಳು ಪೊಲೀಸರ ಸಹಕಾರ ಪಡೆದು ಅಂಥವರಿಗೆ ದಂಡ ವಿಧಿಸುವ ಜತೆಗೆ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದು ಶಾಸಕ ರಾಜಶೇಖರ ಪಾಟೀಲ ಹೇಳಿದರು.

Advertisement

ಪಟ್ಟಣದಲ್ಲಿ ನಡೆದ ರಸ್ತೆ ಕಾಮಗಾರಿಗೆ ಚಾಲನೆ ನಂತರ ಮಾತನಾಡಿದ ಅವರು, ಎಲ್ಲೆಡೆ ಕೋವಿಡ್ ಹಾವಳಿ ಹೆಚ್ಚಿದೆ. ಒಬ್ಬರಿಂದ ಇನ್ನೊಬ್ಬರಿಗೆ ಹರಡುವ ರೋಗ ಇದಾಗಿದೆ. ಮುಂಜಾಗ್ರತೆ ವಹಿಸಿದರೆ ಸೋಂಕು ಹರಡುವಿಕೆ ತಡೆಯಬಹುದು. ಕಾರಣ ಜನರಿಗೆ ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ, ಸಾಮಾಜಿಕ ಅಂತರ ಪಾಲಿಸುವಂತೆ ತಿಳಿವಳಿಕೆ ಮೂಡಿಸುವ ಕೆಲಸವಾಗಬೇಕು. ದಂಡ ವಿಧಿಸಲಾರಂಭಿಸಿದರೆ ಜನರು ನಿಯಮ ಪಾಲಿಸುತ್ತಾರೆ. ಈ ಕುರಿತು ಕ್ರಮ ವಹಿಸಬೇಕು. ಸಾರ್ವಜನಿಕರು, ವ್ಯಾಪಾರಸ್ಥರು ಕೂಡ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಸಾಮಾಜಿಕ ಅಂತರ ಪಾಲಿಸಬೇಕು. ಪ್ರತಿಯೊಬ್ಬರು ಮನೆಯಿಂದ ಹೊರಬಂದರೆ ಮಾಸ್ಕ್  ಧರಿಸಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next