Advertisement
ಕಂಪ್ಯೂಟರ್ ಇಂದು ಮನುಷ್ಯ ಜೀವನದ ಅವಿಭಾಜ್ಯ ಅಂಗವಾಗಿದೆ. ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಶಿಕ್ಷಣ ನೀಡುವ ನಿಟ್ಟಿನಲ್ಲಿ 15 ವರ್ಷಗಳಿಂದ ವಿವಿಧ ಯೋಜನೆಗಳ ಅಡಿಯಲ್ಲಿ ತಾಲೂಕಿನ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಕಂಪ್ಯೂಟರ್ ಪೂರೈಕೆ ಮಾಡಲಾಗಿದ್ದು, ಇಂದಿಗೂ ಕೂಡ ಮಕ್ಕಳಿಗೆ ಕಂಪ್ಯೂಟರ್ ಶಿಕ್ಷಣ ದೊರೆಯುತ್ತಿಲ್ಲ. ಹಣ ಖರ್ಚು ಮಾಡಿ ಖರೀದಿಸಿದ ಕಂಪ್ಯೂಟರ್‌ಗಳು ಬಂದು ಧೂಳು ತಿನ್ನುತ್ತಿದ್ದು, ಇವುಗಳ ಉಪಯೋಗ ಮಾಡಿಕೊಳ್ಳಲು ಶಾಲೆಗಳು ಮುಂದಾಗುತ್ತಿಲ್ಲ.
ಸರ್ಕಾರಿ ಶಾಲೆಗಳಿಗೆ ಬರುವುದು ಬಹುತೇಕ ಕಡು ಬಡವರ ಮಕ್ಕಳು ಎಂಬುದು ಎಲ್ಲರಿಗೂ ಗೊತ್ತು. ಆ ಮಕ್ಕಳ ಕಲಿಕೆ ಹಂತದಲ್ಲಿ ಕಂಪ್ಯೂಟರ್ ಜ್ಞಾನ ಸಿಗದಿದ್ದರೆ ಮಕ್ಕಳ ಮುಂದಿನ ಭವಿಷ್ಯ ಶೂನ್ಯ ಆಗಬಹುದು. ಇಲ್ಲಿನ ಸಮಸ್ಯೆ ಬಗ್ಗೆ ಮೇಲಧಿಕಾರಿಗಳಿಗೂ ಗೊತ್ತಿದ್ದರೂ ಜಾಣಕುರುಡರಂತೆ ವರ್ತಿಸುತ್ತಿದ್ದಾರೆ. ಶಿಕ್ಷಕರು ಇಲ್ಲದ ಕಾರಣ ಕಂಪ್ಯೂಟರ್‌ಗಳು ಬಳಕೆಯಾಗದೇ ದುಸ್ಥಿತಿಗೆ ತಲುಪುತ್ತಿವೆ ಎಂದು ಪಾಲಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕಂಪ್ಯೂಟರ್ ಕಂಡು ವಿದ್ಯಾರ್ಥಿಗಳು ಕೂಡ ಶಿಕ್ಷಣ ಇಲಾಖೆಗೆ ಹಿಡಿ ಶಾಪಾ ಹಾಕುತ್ತಿದ್ದಾರೆ.
Related Articles
ಕಂಪ್ಯೂಟರ್‌ಗಳು ಇರುವ ಕಡೆಗಳಲ್ಲಿ ಕಂಪ್ಯೂಟರ್ ಕಲಿಸಲು ಪ್ರತ್ಯೇಕ ಶಿಕ್ಷಕರು ಇಲ್ಲದ ಕಾರಣ ಮಕ್ಕಳಿಗೆ ಶಿಕ್ಷಣ ನೀಡಲಾಗುತ್ತಿಲ್ಲ. ಕೆಲ ಶಿಕ್ಷಕರು ಈ ಹಿಂದೇ ತರಬೇತಿ ಪಡೆದುಕೊಂಡಿದ್ದು, ಇದೀಗ ಅವರು ವರ್ಗಾವಣೆಯಾಗಿ ಬೇರೆಕಡೆ ಹೋಗಿದ್ದಾರೆ. ಇದಕ್ಕಾಗಿ ಪ್ರತ್ಯೇಕ ಶಿಕ್ಷಕರ ನೇಮಕವಾದರೆ ಮಾತ್ರ ಮಕ್ಕಳಿಗೂ ಸೂಕ್ತ ತರಬೇತಿ ನೀಡಲು ಸಾಧ್ಯ ಎನ್ನುತ್ತಾರೆ ವಿವಿಧ ಶಾಲೆಗಳ ಮುಖ್ಯಸ್ಥರು. ಕಂಪ್ಯೂಟರ್ ಇರುವ ಬಹಳಷ್ಟು ಶಾಲೆಗಳಲ್ಲಿ ಕಲಿಸುವ ಶಿಕ್ಷಕರಿಲ್ಲ. ಯಾವ ಶಿಕ್ಷಕರಿಗೆ ಕಂಪ್ಯೂಟರ್ ಕಲಿಸುವ ಅರ್ಹತೆ ಇದೆಯೋ ಆ ಶಾಲೆಗಳಲ್ಲಿ ಕಂಪ್ಯೂಟರ್ ಸರ್ಕಾರವು ವಿದ್ಯಾರ್ಥಿ ವೇತನದಿಂದ ಹಿಡಿದು ನೌಕರರಿಗೆ ಅರ್ಜಿ ಹಾಕುವವರೆಗೂ ಎಲ್ಲದಕ್ಕೆ ಆನ್‌ಲೈನ್ ವ್ಯವಸ್ಥೆ ಮಾಡಿದೆ. ಆದರೆ, ಶಾಲಾ ಮಕ್ಕಳಿಗೆ ಕಂಪ್ಯೂಟರ್ ಶಿಕ್ಷಣ ನೀಡುವಲ್ಲಿ ಮಾತ್ರ ಹಿಂದುಳಿದಿದೆ.
Advertisement
ಎಲ್ಲೆಲ್ಲಿವೆ ಕಂಪ್ಯೂಟರ್ನಿರ್ಣಾ ಬಾಲಕಿಯರ ಶಾಲೆಯಲ್ಲಿ, ಮನ್ನಾಏಖೇಳ್ಳಿ ಎಂಪಿಎಸ್, ದುಬಲಗುಂಡಿ ಬಾಲಕಿಯರ ಶಾಲೆ, ಹಳ್ಳಿಖೇಡ(ಬಿ) ಬಾಲಕಿಯರ ಶಾಲೆ, ಹಂದಿಕೇರಾ ಎಚ್‌ಪಿಎಸ್, ಹುಡ್ಗಿ ಉರ್ದು ಶಾಲೆ, ಬೇಮಳಖೇಡಾ ಎಂಪಿಎಸ್, ಚಿಟಗುಪ್ಪ ಎಚ್‌ಪಿಎಸ್, ಜಲಸಂಗಿ ಎಲ್‌ಪಿಎಸ್, ಗಡವಂತಿ ಎಚ್‌ಪಿಎಸ್, ವಾಂಜರಿ ಎಚ್‌ಪಿಎಸ್, ಹಳ್ಳಿಖೇಡ(ಬಿ) ಎಚ್‌ಪಿಎಸ್, ಸಿತಾಳಗೇರಾ ಎಚ್‌ಪಿಎಸ್, ಚಾಂಗಲೇರಾ ಎಂಪಿಎಸ್, ಚಿಟಗುಪ್ಪ ಬಾಲಕಿರ ಎಂಪಿಎಸ್, ಬೇಳಕೇರಾ ಎಸ್‌ಪಿಎಸ್, ಮೀನಕೇರಾ ಎಚ್‌ಪಿಎಸ್, ಕೊಡಂಬಲ್ ಎಂಪಿಎಸ್, ಮದರಗಾಂವ ಎಚ್‌ಪಿಎಸ್, ಉಡಮನಳ್ಳಿ ಎಮ್‌ಪಿಎಸ್, ಘಾಟಬೋರಳ ಎಚ್‌ಪಿಎಸ್, ಕನಕಟ್ಟಾ ಎಚ್‌ಪಿಎಸ್, ಮಂಗಲಗಿ ಎಚ್‌ಪಿಎಸ್, ತಾಳಮಡಗಿ ಎಚ್ ಪಿಎಸ್, ಇಟಗಾ ಎಚ್‌ಪಿಎಸ್ ಹಾಗೂ ವಿವಿಧ ಇತರೆ ಶಾಲೆಗಳಲ್ಲಿ ಕೂಡ ಕಂಪ್ಯೂಟರ್‌ಗಳು ಇವೆ ಎಂದು ಶಿಕ್ಷಣ ಇಲಾಖೆ ಮಾಹಿತಿ ನೀಡಿದೆ. ತಾಲೂಕಿನ 27 ಪ್ರೌಢಶಾಲೆ ಹಾಗೂ ಮೇಲ್ದರ್ಜೆಗೆ ಏರಿದ ಶಾಲೆಗಳಲ್ಲಿ ಕಂಪ್ಯೂಟರ್‌ಗಳ ವ್ಯವಸ್ಥೆ ಇದ್ದು, ಪ್ರೌಢಶಾಲೆಗಳಲ್ಲಿನ ಕಂಪ್ಯೂಟರ್‌ಗಳನ್ನು ಬಳಸಿಕೊಂಡು ವಿಷಯವಾರು ಪಾಠ ಮಾಡುವಂತೆ ಸೂಚಿಸಲಾಗಿದೆ. ಅಲ್ಲದೆ, ಆಯಾ ಶಾಲೆಗಳಲ್ಲಿನ ಒಬ್ಬ ಶಿಕ್ಷಕರಿಗೆ ತರಬೇತಿ ನೀಡಲಾಗಿದೆ. ಅವರು ಅಲ್ಲಿನ ವಿದ್ಯಾರ್ಥಿಗಳಿಗೆ ತರಬೇತಿ ನೀಡಬೇಕು. ಈ ಕುರಿತು ಪರಿಶೀಲನೆ ನಡೆಸಿ ಮಾಹಿತಿ ಪಡೆಯುತ್ತೇನೆ.
ಶಿವಗೊಂಡಪ್ಪ ಸಿದ್ಧನಗೋಳ,
ಕ್ಷೇತ್ರ ಶಿಕ್ಷಣಾಧಿಕಾರಿ ಮಕ್ಕಳಿಗೆ ಕಂಪ್ಯೂಟರ್ ಜ್ಞಾನ ನೀಡಬೇಕು ಎಂಬ ನಿಟ್ಟಿನಲ್ಲಿ ಕಳೆದ ವರ್ಷ ಕೂಡ ಆಯ್ದ ಹತ್ತು ಶಾಲೆಗಳಿಗೆ ಕಂಪ್ಯೂಟರ್‌ಗಳು ಪೂರೈಕೆ ಮಾಡಲಾಗಿದೆ. ಶಿಕ್ಷಕರಿಗೆ ತರಬೇತಿ ನೀಡುವ ಕೆಲಸ ಕೂಡ ಆಗಿದೆ. ಈ ಕುರಿತು ಮಾಹಿತಿ ಪಡೆಯಲಾಗುವುದು.
ಶಿವಕುಮಾರ ಪಾರಶೆಟ್ಟಿ,
ಬಿಆರ್‌ಸಿ ಅಧಿಕಾರಿ ದುರ್ಯೋಧನ ಹೂಗಾರ