Advertisement

ಭ್ರಷ್ಟಾಚಾರ ರಹಿತ ಆಡಳಿತಕ್ಕೆ ಕಮಲಕ್ಕೆ ಮತ ನೀಡಿ: ಕಲ್ಲೂರ

04:20 PM May 27, 2019 | Team Udayavani |

ಹುಮನಾಬಾದ: ಭ್ರಷ್ಟಾಚಾರ ರಹಿತ ಆಡಳಿತಕ್ಕಾಗಿ ಮತದಾರ ಪ್ರಭುಗಳು ಕಮಲಕ್ಕೆ ಮತ ನೀಡಬೇಕು ಎಂದು ಮಾಜಿ ಶಾಸಕ ಸುಭಾಷ ಕಲ್ಲೂರ ಹೇಳಿದರು.

Advertisement

ಪಟ್ಟಣದ ವಿವಿಧ ವಾರ್ಡ್‌ಗಳಲ್ಲಿ ಕಾಲ್ನಡಿಗೆ ಮೂಲಕ ಸಂಚರಿಸಿ ಬಿಜೆಪಿ ಅಭ್ಯರ್ಥಿಗಳ ಪರ ಮತಯಾಚಿಸುತ್ತಿದ್ದ ವೇಳೆ ಮಾತನಾಡಿದ ಅವರು, ಹುಮನಾಬಾದ ಪುರಸಭೆ ಅಧಿಕಾರ ಗದ್ದುಗೆ ಹಿಡಿದ ಕಾಂಗ್ರೆಸ್‌ ಪಕ್ಷ ಸರ್ಕಾರದಿಂದ ಅನುದಾನ ತಂದರೂ ಕೈಗೊಂಡಿರುವ ಎಲ್ಲ ಕಾಮಗಾರಿ ಅಪೂರ್ಣ ಸ್ಥಿತಿಯಲ್ಲಿವೆ. 2013ರಲ್ಲಿ ಆರಂಭಗೊಂಡ ಒಳಚರಂಡಿ ಕಾಮಗಾರಿಯನ್ನು 7 ವರ್ಷ ಗತಿಸಿದರೂ ಪೂರ್ಣಗೊಳಿಸಲು ಸಾಧ್ಯವಾಗಿಲ್ಲ. ಜೊತೆಗೆ ಕಾಮಗಾರಿ ಸಂಪೂರ್ಣ ನಿರೂಪಯುಕ್ತವಾಗಿದೆ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ ಎಂದು ಹೇಳಿದರು. ಅತ್ಯಾಕರ್ಷಕ ಹೂ-ಹುಲ್ಲಿನಿಂದ ಅಲಂಕೃತಗೊಂಡು ಪಟ್ಟಣದ ಸೌಂದರ್ಯ ಹೆಚ್ಚಿಸಬೇಕಿದ್ದ ಡಾ| ಅಂಬೇಡ್ಕರ್‌ ವೃತ್ತದಿಂದ ವಾಂಜ್ರಿವರೆಗೆ ಕೈಗೊಂಡ ರಸ್ತೆ ವಿಭಜಕ ತಿಪ್ಪೆಗುಂಡಿಯಾಗಿ ಪರಿವರ್ತನೆಯಾಗಿದ್ದರೂ ಯಾರೊಬ್ಬರೂ ಗಮನ ಹರಿಸುತ್ತಿಲ್ಲ. ಹುಮನಾಬಾದ ಪಟ್ಟಣದಲ್ಲಿ ಇರುವ ಪುರಸಭೆ ಏಕೈಕ ಉದ್ಯಾನ ಕಳೆದ ದಶಕದಿಂದ ಹಸಿರಿಲ್ಲದೇ ಭಣಗೊಡುತ್ತಿದೆ. ಹಸಿರು ಸಿರಿಯಲ್ಲಿ ಸಾರ್ವಜನಿಕರು ಪರಿವಾರ ಸಮೇತ ಬಂದು ನೆಮ್ಮದಿಯಿಂದ ಕುಳಿತುಕೊಳ್ಳಬೇಕಾದ ಉದ್ಯಾನ ಸ್ಥಳದಲ್ಲಿ ನಿಯಮ ಬಾಹಿರ ವಿವಿಧ ಕಟ್ಟಡಗಳನ್ನು ನಿರ್ಮಿಸಲಾಗುತ್ತಿದೆ. ಇದು ಅಭಿವೃದ್ಧಿಯೆ? ಇಂಥ ಪಕ್ಷಕ್ಕೆ ಜನರು ಮತ್ತೂಮ್ಮೆ ಮತ ನೀಡಿ, ಗದ್ದುಗೆ ಗೈಯಲ್ಲಿ ಕೊಡಬೇಕೆ ಎಂದು ಪ್ರಶ್ನಿಸಿದರು.

ಡಾ| ಅಂಬೇಡ್ಕರ್‌ ವೃತ್ತದಿಂದ ಫುಟ್ಪಾತ್‌ ಪಕ್ಕದಲ್ಲಿ ಹರಿಯುವ ಸಾರ್ವಜನಿಕ ತ್ಯಾಜ್ಯ ನೋಡಿದರೆ ವಾಕರಿಕೆ ಬರುತ್ತದೆ. ಇಷ್ಟು ಅವಧಿ ಅಧಿಕಾರದಲ್ಲಿದ್ದರೂ ಆ ಸಮಸ್ಯೆ ಬಗೆಹರಿಸಲು ಸಾಧ್ಯವಾಗದ ಪಕ್ಷಕ್ಕೆ ಮತ್ತೂಮ್ಮೆ ಮತ ನೀಡಬೇಕೆ? ಅಂಥವರನ್ನು ಅಧಿಕಾರದಿಂದ ದೂರ ಇಡಲು ಮತದಾರರು ಈ ಬಾರಿ ಬಿಜೆಪಿಗೆ ಮತ ನೀಡಬೇಕು ಎಂದು ಮನವಿ ಮಾಡಿದರು. ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಶಿವಾನಂದ ಮಂಠಾಳ್ಕರ್‌, ತಾಲೂಕು ಅಧ್ಯಕ್ಷ ವಿಶ್ವನಾಥ ಪಾಟೀಲ ಮಾಡ್ಗುಳ್‌, ನರಸಿಂಗ್‌(ರಾಜು)ಭಂಡಾರಿ, ಬ್ಯಾಂಕ್‌ರೆಡ್ಡಿ, ಗಿರೀಶ ಎಂ.ಪಾಟೀಲ ಮೊದಲಾದವರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next