Advertisement

ಮಾನವ ಹಕ್ಕುಗಳ ಆಯೋಗ ಅದಾಲತ್‌ : 22 ದೂರುಗಳ ಪರಿಗಣನೆ

12:23 AM Apr 25, 2023 | Team Udayavani |

ಕಾಸರಗೋಡು: ರಾಜ್ಯ ಮಾನವ ಹಕ್ಕುಗಳ ಆಯೋಗದ ನ್ಯಾಯಾಂಗ ಸದಸ್ಯ ಕೆ.ಬೈಜುನಾಥ್‌ ಅವರು ಕಾಸರಗೋಡು ಸರಕಾರಿ ಅತಿಥಿ ಗೃಹದಲ್ಲಿ ನಡೆಸಿದ ದೂರು ಸ್ವೀಕಾರ ಅದಾಲತ್‌ನಲ್ಲಿ ಒಟ್ಟು 40 ದೂರುಗಳಲ್ಲಿ 22 ದೂರುಗಳನ್ನು ಪರಿಗಣಿಸಿದ್ದಾರೆ. ಉಳಿದವುಗಳನ್ನು ಮುಂದಿನ ಪ್ರಕ್ರಿಯೆಗಳಿಗಾಗಿ ಮತ್ತು ಹೆಚ್ಚಿನ ತನಿಖೆಗಳಿಗಾಗಿ ಕಾಯ್ದಿರಿಸಲಾಯಿತು. ರಾಷ್ಟ್ರೀಯ ವಿಚಾರಣೆ ಮತ್ತು ಮುಂದಿನ ತನಿಖೆಗಾಗಿ ಕಲಾಪವನ್ನು ಮುಂದೂಡಲಾಯಿತು.

Advertisement

ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಅಂಗವಾಗಿ ಭೂ ಸ್ವಾಧೀನಕ್ಕೆ ಸಂಬಂಧಿಸಿದಂತೆ ಏಳು ಕುಟುಂಬಗಳು ಆಯೋಗಕ್ಕೆ ದೂರು ನೀಡಿದ್ದವು. ರಸ್ತೆ ನಿರ್ಮಾಣದ ಅಂಗವಾಗಿ ಅವರ ಜಮೀನು ಇಬ್ಭಾಗವಾಗಿದ್ದು, ಜಮೀನಿಗೆ ತೆರಳುವ ರಸ್ತೆ ಇಲ್ಲದಾಗಿದೆ ಎಂಬ ದೂರಿನ ಮೇರೆಗೆ ಜಮೀನಿಗೆ ತೆರಳಲು ರಸ್ತೆ ನಿರ್ಮಾಣ ಮಾಡಲಾಗುವುದು ಎಂದು ರಾಷ್ಟ್ರೀಯ ಹೆದ್ದಾರಿ ಯೋಜನ ವ್ಯವಸ್ಥಾಪಕರು ಇದೇ ವೇಳೆ ಭರವಸೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next