Advertisement

ಸ್ಫೋಟಗೊಂಡ ಟೈಟಾನಿಕ್ ಸಬ್ಮರ್ಸಿಬಲ್ ನಿಂದ ಮಾನವ ಅವಶೇಷ ಮೇಲಕ್ಕೆತ್ತಿದ ಯುಎಸ್ ಕೋಸ್ಟ್ ಗಾರ್ಡ್

09:43 AM Jun 29, 2023 | Team Udayavani |

ವಾಷಿಂಗ್ಟನ್: ಟೈಟಾನಿಕ್ ಹಡಗಿನ ಅವಶೇಷ ವೀಕ್ಷಿಸಲು ನೀರೊಳಗೆ ತೆರಳಿದ್ದ ವೇಳೆ ಸ್ಫೋಟಗೊಂಡ ಸಬ್ ಮರ್ಸಿಬಲ್ ಅವಶೇಷಗಳಿಂದ ಮಾನವ ಅವಶೇಷಗಳನ್ನು ತೆರಲಾಗಿದೆ ಎಂದು ಯುಎಸ್ ಕೋಸ್ಟ್ ಗಾರ್ಡ್ ತಿಳಿಸಿದೆ.

Advertisement

ಉತ್ತರ ಅಟ್ಲಾಂಟಿಕ್‌ ನ ಮೇಲ್ಮೈಯಿಂದ 12,000 ಅಡಿ (3,658 ಮೀಟರ್‌ಗಳು) ಗಿಂತ ಹೆಚ್ಚು ಸಮುದ್ರದ ತಳದಿಂದ ಸಂಗ್ರಹಿಸಲಾದ ಟೈಟಾನ್‌ ನ ಅವಶೇಷಗಳು ನ್ಯೂಫೌಂಡ್‌ ಲ್ಯಾಂಡ್‌ ನ ಸೇಂಟ್ ಜಾನ್ಸ್‌ ಗೆ ಬಂದಿವೆ ಎಂದು ಘೋಷಿಸಿದ ಕೆಲ ಸಮಯದ ನಂತರ ಈ ಸುದ್ದಿ ಬಂದಿದೆ. ಕೆನಡಾದ ಕೋಸ್ಟ್ ಗಾರ್ಡ್ ಪಿಯರ್‌ ನಲ್ಲಿ ಸಬ್‌ ಮರ್ಸಿಬಲ್‌ ನ ಅವಶೇಷಗಳನ್ನು ಮೇಲೆ ತರಲಾಯಿತು.

ಐವರು ಸಾವನ್ನಪ್ಪಿದ ಸಬ್ ಮಿರ್ಸಿಬಲ್ ಸ್ಪೋಟದ ತನಿಖೆ ನಡೆಸುತ್ತಿರುವ ತಂಡಕ್ಕೆ ಈ ಅವಶೇಷ ಪತ್ತೆ ದೊಡ್ಡ ಮುನ್ನಡೆಯಾಗಿದೆ. ಆ ಸಬ್ ನ ತುಂಡುಗಳನ್ನು ಈಗ ಯುಎಸ್ ಕೋಸ್ಟ್ ಗಾರ್ಡ್ ಕಟ್ಟರ್‌ ನಲ್ಲಿ ಹೆಚ್ಚಿನ ವಿಶ್ಲೇಷಣೆಗಾಗಿ ಯುಎಸ್ ಬಂದರಿಗೆ ಕೊಂಡೊಯ್ಯಲಾಗುವುದು.

ಇದನ್ನೂ ಓದಿ:Gruha Jyothi ಯೋಜನೆಗೆ ಭರ್ಜರಿ ರೆಸ್ಪಾನ್ಸ್: 76 ಲಕ್ಷಕ್ಕೂ ಅಧಿಕ ಯಶಸ್ವಿ ನೋಂದಣಿ

“ಯುನೈಟೆಡ್ ಸ್ಟೇಟ್ಸ್ ವೃತ್ತಿಪರ ವೈದ್ಯಕೀಯ ತಂಡ ಎಚ್ಚರಿಕೆಯಿಂದ ಮರುಪಡೆಯಲಾದ ಮಾನವ ಅವಶೇಷಗಳ ಔಪಚಾರಿಕ ವಿಶ್ಲೇಷಣೆಯನ್ನು ನಡೆಸುತ್ತಾರೆ” ಎಂದು ಕೋಸ್ಟ್ ಗಾರ್ಡ್ ಹೇಳಿದೆ.

Advertisement

ಹಡಗಿನಲ್ಲಿ ಬ್ರಿಟಿಷ್ ಪರಿಶೋಧಕ ಹ್ಯಾಮಿಶ್ ಹಾರ್ಡಿಂಗ್, ಫ್ರೆಂಚ್ ಜಲಾಂತರ್ಗಾಮಿ ತಜ್ಞ ಪೌಲ್-ಹೆನ್ರಿ ನರ್ಜಿಯೋಲೆಟ್, ಪಾಕಿಸ್ತಾನಿ-ಬ್ರಿಟಿಷ್ ಉದ್ಯಮಿ ಶಹಜಾದಾ ದಾವೂದ್ ಮತ್ತು ಅವರ ಮಗ ಸುಲೇಮಾನ್ ಮತ್ತು ಸಬ್‌ ಮರ್ಸಿಬಲ್ ನ ಆಪರೇಟರ್ ಓಷನ್‌ ಗೇಟ್ ಎಕ್ಸ್‌ ಪೆಡಿಶನ್ಸ್‌ ನ ಸಿಇಒ ಸ್ಟಾಕ್‌ಟನ್ ರಶ್ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next