Advertisement

ಮನಸ್ಸು ಒಗ್ಗೂಡಿಸುವಲ್ಲಿ ಮಾನವ ವಿಫ‌ಲ

01:03 PM Jan 06, 2020 | Lakshmi GovindaRaj |

ರಾಮನಗರ: ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಅಳವಡಿಸಿಕೊಂಡ ಮಾನವರು ಬಹು ಬೇಗ ಬೆಳೆದು ನಿಂತಿದ್ದಾರೆ. ಆದರೆ ಒಡೆದ ಮನಸ್ಸನ್ನು  ಒಗ್ಗೂಡಿ ಸುವುದನ್ನು ಕಲಿಯಲಿಲ್ಲ ಎಂದು ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀ ನಿರ್ಮಾಲಾನಂದ ಸ್ವಾಮೀಜಿ ಹೇಳಿದರು.

Advertisement

ಅರ್ಚಕರಹಳ್ಳಿಯ ಬಿಜಿಎಸ್‌ ವರ್ಲ್ಡ್ ಸ್ಕೂಲ್‌, ಪಿಯೂ ಕಾಲೇಜು ಮತ್ತು ಬಿಜಿಎಸ್‌ ಅಂಧರ ಶಾ ವಾರ್ಷಿಕ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಮಾನವ ವಿಜ್ಞಾನ ಮತ್ತು ತಂತ್ರಜ್ಞಾನ ಅಳವಡಿಸಿ ಕೊಂಡು ಜಡ ವಸ್ತುಗಳನ್ನು ಚಲಿಸುವಂತೆ ಮಾಡಿದ. ವಿರುದ್ಧವಾಗಿದ್ದ ವಸ್ತುಗಳನ್ನು ಒಗ್ಗೂಡಿಸಿದ  ಆದರೆ ನಡುವೆ ಮುರಿದ ಮನಸ್ಸುಗಳನ್ನು ಒಗ್ಗೂಡಿ ಸುವಲ್ಲಿ ವಿಫ‌ಲ ಎಂದು ಅಭಿಪ್ರಾಯ ವ್ಯಕ್ತ ಪಡಿಸಿದರು.

ಮಕ್ಕಳಿಗೆ ಜೀವನದಲ್ಲಿ ಎದುರಾಗುವ  ಕಷ್ಟಗಳ ಬಗ್ಗೆ ಮಾಹಿತಿ ಇರಬೇಕು. ಈ ವಿಚಾರದಲ್ಲಿ ಪೋಷಕರು ನೀತಿ ಕಲಿಸಿದರೆ, ಭವಿಷ್ಯದಲ್ಲಿ ತಮ್ಮ ಜೀವನವನ್ನು ತಾವೇ ರೂಪಿಸಿಕೊಳ್ಳಲು  ಸಬಲರಾಗುತ್ತಾರೆ ಎಂದರು. ಜಿಲ್ಲಾಧಿಕಾರಿ ಎಂ.ಎಸ್‌.ಅರ್ಚನಾ ಮಾತನಾಡಿ ಶ್ರೀ ಮಠದ ವತಿಯಿಂದ ನಡೆಯುತ್ತಿರುವ ಶಾಲೆಯಲ್ಲಿ ವಿದ್ಯೆಯ  ಜೊತೆಗೆ ಸಂಸ್ಕಾರವನ್ನು ನೀಡುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಬೆಸ್ಕಾಂ ನ ವ್ಯವಸ್ಥಾಪಕ ನಿರ್ದೇಶಕ ರಾಜೇಶಗೌಡ ಮಾತನಾಡಿದರು.  ವಾರ್ಷಿಕೋತ್ಸವದ ಅಂಗವಾಗಿ ನಡೆದ ಸಾಂಸ್ಕೃತಿಕ ಚಟುವಟೆಗಳು ನೋಡುಗರ ಗಮನ ಸೆಳೆದವು. ಬಿಜಿಎಸ್‌ ಅಂಧರ ಶಾಲೆಯ ವಿದ್ಯಾರ್ಥಿಗಳ  ನೃತ್ಯ ಹಾಗೂ ಸ್ವತ್ಛ ಭಾರತ ಕಿರು ನಾಟಕ ಮೆಚ್ಚುಗೆ ಪಡೆದವು.

ಆರ್‌ಟಿಓ ಅಧಿಕಾರಿ ಕೃಷ್ಣೇಗೌಡ, ಅರ್ಚಕರಹಳ್ಳಿ ಶಾಖಾ ಮಠದ ಕಾರ್ಯದರ್ಶಿ ಅನ್ನದಾನೇಶ್ವರನಾಥ  ಸ್ವಾಮೀಜಿ, ಜಯನಗರ ಶಾಖಾ ಮಠದ ಸೌಮ್ಯನಾಥ ಸ್ವಾಮೀಜಿ, ಹಾಸನ, ಕೊಡಗು ಶಾಖಾ ಮಠದ ಶಂಭೂನಾಥ  ಸ್ವಾಮೀಜಿ, ಶೈಲೇಶನಾಥ ಸ್ವಾಮೀಜಿ, ವರ್ಲ್ಡ್ ಶಾಲೆ ಪ್ರಾಂಶುಪಾಲ ಜೇಸುದಾಸ್‌, ಪಿಯು ಕಾಲೇಜಿನ ಪ್ರಾಂಶುಪಾಲ ಸುರೇಶ್‌ ಮತ್ತು ಮುಖ್ಯೋಪಾಧ್ಯಾಯ ಶಿವರಾಂ ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next