Advertisement
ಧರ್ಮಸ್ಥಳ ಸಂಸ್ಥೆ ಕಳೆದ ಎರಡು ವರ್ಷಗಳಿಂದ ರಾಜ್ಯಾದ್ಯಂತ “ನಮ್ಮೂರು ನಮ್ಮ ಕೆರೆ’ ಎಂಬ ಕಾರ್ಯಕ್ರಮದ ಅಡಿಯಲ್ಲಿ ಕೆರೆಗಳ ಪುನಶ್ಚೇತನ ಕಾರ್ಯ ಮಾಡುತ್ತಿದೆ. ಜಲ ಸಂರಕ್ಷಣೆ ಹಾಗೂ ಪರಿಸರ ಕಾಳಜಿಯಿಂದ ಗ್ರಾಮೀಣ ಪ್ರದೇಶದಲ್ಲಿ ಹೂಳು ತುಂಬಿದ ಕೆರೆಗಳನ್ನು ಆಯ್ಕೆ ಮಾಡಿಕೊಂಡು ಪುನಶ್ಚೇತನ ಮಾಡಲಾಗುತ್ತಿದೆ.
ಪಾಲುಗಾರಿಕೆಯಿಂದ ಕೆರೆ ಕಾಮಗಾರಿಯನ್ನು ಕೈಗೊಳ್ಳಲಾಗುತ್ತದೆ. ಕಾಮಗಾರಿ ಕೈಗೊಳ್ಳುವುದಕ್ಕಿಂತ ಪೂರ್ವದಲ್ಲಿ ಕೆರೆ ಅಭಿವೃದ್ಧಿ ಸಮಿತಿ ರಚಿಸಿ ಅದರ ಮುಖಾಂತರ ಮತ್ತು ಧರ್ಮಸ್ಥಳ ಸಂಸ್ಥೆಯವರ ಮಾರ್ಗದರ್ಶನದಲ್ಲಿ ಕೆರೆ ಅಭಿವೃದ್ಧಿ ಕೈಗೆತ್ತಿಕೊಳ್ಳಲಾಗುತ್ತದೆ. ಚಿತ್ರದುರ್ಗ ತಾಲೂಕಿನ ಹುಲ್ಲೂರು ಗ್ರಾಮದ ಕೆರೆಯನ್ನು ಆಯ್ಕೆ ಮಾಡಲಾಗಿತ್ತು. ಕೆರೆಯಂಗಳ, ಕೆರೆ ಏರಿ ದುರಸ್ತಿ, ರಾಚಿ ಕಾಲುವೆ, ಪೋಷಾಕು ಕಾಲುವೆಯಲ್ಲಿ ಹೂಳು ತೆಗೆಯಲಾಗುತ್ತಿದೆ. ಒಟ್ಟು 20 ಲಕ್ಷ ಅಂದಾಜು
ವೆಚ್ಚದಲ್ಲಿ ಈ ಕಾಮಗಾರಿ ನಡೆಯುತ್ತಿದ್ದು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಅನುದಾನ ಮಂಜೂರಾಗಿದ್ದು, ಇನ್ನುಳಿದ ಹಣವನ್ನು ದಾನಿಗಳು ಭರಿಸಲಿದ್ದಾರೆ.
Related Articles
ಹಾಗೂ ಕೃಷಿ ಮೇಲ್ವಿಚಾರಕ ಮೋಹನ್ ಹೊನ್ನಳ್ಳಿ ಅವರ ಉಸ್ತುವಾರಿಯಲ್ಲಿ ನಡೆಯುತ್ತಿದೆ. ಕೆರೆ ಪುನಶ್ಚೇತನ ಕಾಮಗಾರಿಯಿಂದ ಗ್ರಾಮಸ್ಥರು, ಯುವಕರು ಮತ್ತು ರೈತರು ಸಂತಸಗೊಂಡಿದ್ದಾರೆ. ಈ ವರ್ಷ ಮಳೆಯಾದರೆ ಕೆರೆ ಸಂಪೂರ್ಣ ಭರ್ತಿಯಾಗುತ್ತದೆ. ಇದರಿಂದ ದನ ಕರುಗಳಿಗೆ ಕುಡಿಯುವ ನೀರು ಹಾಗೂ ಬತ್ತಿ ಹೋದ ಕೊಳವೆಬಾವಿಗಳಿಗೆ ಮರುಜೀವ ಸಿಗುತ್ತದೆ ಎಂಬ ನಿರೀಕ್ಷೆ ಹೊಂದಿದ್ದಾರೆ.
Advertisement
ಪ್ರಸ್ತುತ ಚಿತ್ರದುರ್ಗ ಜಿಲ್ಲೆಯ 6 ತಾಲೂಕುಗಳಿಗೆ 10 ಲಕ್ಷ ರೂ. ಮಂಜೂರಾಗಿದೆ. ಕೆರೆಗಳ ಪುನಶ್ಚೇತನ ಕಾಮಗಾರಿ ಭರದಿಂದ ಸಾಗುತ್ತಿದೆ. ಧರ್ಮಸ್ಥಳ ಧರ್ಮಾಧಿಕಾರಿ ಡಾ| ವೀರೇಂದ್ರ ಹೆಗ್ಗಡೆಯವರ ಕನಸಿನ ಕೂಸು ಕೆರೆ ಹೂಳೆತ್ತುವ ಯೋಜನೆ. ಕೆರೆ ಕಾಮಗಾರಿಗೆ ಗ್ರಾಮಸ್ಥರು ಉತ್ತಮ ಸಹಕಾರ ನೀಡುತ್ತಿದ್ದಾರೆ.
ಬಿ. ಗಣೇಶ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ
ಧರ್ಮಸ್ಥಳ ಸಂಸ್ಥೆಯವರು ನಮ್ಮ ಊರಿನ ಕೆರೆಯನ್ನು ಆಯ್ಕೆ ಮಾಡಿ ಪುನಶ್ಚೇತನಗೊಳಿಸುತ್ತಿರುವುದು ನಮ್ಮೆಲ್ಲರ ಪುಣ್ಯವೇ ಸರಿ. ಧರ್ಮಸ್ಥಳ ಧರ್ಮಾಧಿಕಾರಿ ಡಾ| ವೀರೇಂದ್ರ ಹೆಗ್ಗಡೆಯವರು “ಆಧುನಿಕ ಭಗೀರಥ’ ಆಗಿದ್ದಾರೆ.ಈ ಕಾಮಗಾರಿಯಿಂದ ಗ್ರಾಮದ ರೈತರಿಗೆ ಅನುಕೂಲವಾಗುತ್ತದೆ. ಹೂಳೆತ್ತಿದ ಮಣ್ಣನ್ನು ತೋಟಗಳಿಗೆಕೊಂಡೊಯ್ಯಲಾಗುತ್ತಿದೆ. ಎಚ್.ಎನ್. ಕಲ್ಲೇಶ್. ಕೆರೆ ಅಭಿವೃದ್ಧಿ ಸಮಿತಿ ಅಧ್ಯಕ್ಷ