Advertisement

Kundapura ಹುಲ್ಕಡಿಕೆ: ಬೈಂದೂರು ತಾ.ಪಂ. ಇಒ ಭೇಟಿ

11:43 PM Jul 05, 2024 | Team Udayavani |

ಕುಂದಾಪುರ: ಬೈಂದೂರು ತಾಲೂಕಿನ ಗೋಳಿಹೊಳೆ ಗ್ರಾ.ಪಂ. ವ್ಯಾಪ್ತಿಯ ಯಳಜಿತ್‌ ಗ್ರಾಮದ ಹುಲ್ಕಡಿಕೆ ಪ್ರದೇಶಕ್ಕೆ ಬುಧವಾರ ಬೈಂದೂರು ತಾ.ಪಂ. ಕಾರ್ಯ ನಿರ್ವ ಹಣಾಧಿಕಾರಿ ಭಾರತಿ ಎನ್‌. ಭೇಟಿ ನೀಡಿ, ಸಮಸ್ಯೆಯನ್ನು ಆಲಿಸಿದರು.

Advertisement

ಸೇತುವೆಯಿಲ್ಲದೆ ಸ್ಥಳೀಯರು ಅನುಭವಿಸುವ ಸಂಕಷ್ಟದ ಕುರಿತು “ಉದಯವಾಣಿ’ ವರದಿ ಪ್ರಕಟಿಸಿತ್ತು.

ಈ ಸಂದರ್ಭ “ಉದಯವಾಣಿ’ ಜತೆ ಮಾತನಾಡಿದ ಅವರು, ಆ ಹೊಳೆಗೆ ಕನಿಷ್ಠವೆಂದರೂ 4 ಅಡಿ ಉದ್ದದ ಸೇತುವೆ ಬೇಕಿದೆ. ಈಗ ನರೇಗಾದಡಿ ಕಾಲು ಸಂಕ ನಿರ್ಮಿಸಲು ಅವಕಾಶವಿಲ್ಲ. ನರೇಗಾದಡಿ ಸರಕಾರ ಅವಕಾಶ ನೀಡಿದರೆ 4.90 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು. ಸಣ್ಣ ನೀರಾವರಿ ಇಲಾಖೆಯಿಂದ ಸೇತುವೆ ನಿರ್ಮಿಸಬಹುದು. ಈ ಬಗ್ಗೆ ಸರಕಾರಕ್ಕೆ ವರದಿ ಸಲ್ಲಿಸಲಾಗುವುದು. ಹದಗೆಟ್ಟಿರುವ ರಸ್ತೆಯ ಅಭಿವೃದ್ಧಿಗೂ ದೊಡ್ಡ ಮಟ್ಟದ ಅನುದಾನ ಅಗತ್ಯವಿದೆ ಎಂದು ತಿಳಿಸಿದರು.

ನರೇಗಾದ ಬೈಂದೂರು ತಾಲೂಕು ಸಹಾಯಕ ನಿರ್ದೇಶಕ ಸುರೇಶ್‌, ಗೋಳಿಹೊಳೆ ಗ್ರಾ.ಪಂ. ಪಿಡಿಒ ಮಾಧವ ದೇವಾಡಿಗ ಉಪಸ್ಥಿತರಿದ್ದರು.

ಉದಯವಾಣಿ ವರದಿ
ಹುಲ್ಕಡಿಕೆಯಲ್ಲಿ ಸೇತುವೆಯಿಲ್ಲದೆ ಅಲ್ಲಿನ ಸುರೇಶ್‌ ಅವರ ಮರಾಠಿ ನಾಯ್ಕ ಕುಟುಂಬವೊಂದು ವಿಶೇಷ ಚೇತನ ಮಕ್ಕಳಿಬ್ಬರನ್ನು ತುಂಬಿ ಹರಿಯುವ ಹೊಳೆಯಲ್ಲಿ ಹೆಗಲ ಮೇಲೆ ಎತ್ತಿಕೊಂಡೇ ಬರಬೇಕಿದ್ದು, ಅಲ್ಲಿಂದ 7 ಕಿ.ಮೀ. ದೂರದವರೆಗೆ ದ್ವಿಚಕ್ರ ವಾಹನದಲ್ಲಿ ಕಷ್ಟಪಟ್ಟು ಕರೆದೊಯ್ಯಬೇಕು ಅನ್ನುವ ಕುರಿತಾದ ವಿಶೇಷ ವರದಿಯನ್ನು “ಉದಯವಾಣಿ’ಯು ಜು.3ರಂದು ಮುಖಪುಟದಲ್ಲಿ ಪ್ರಕಟಿಸಿತ್ತು.

Advertisement

ಆ ವರದಿಗೆ ಸ್ಪಂದಿಸಿದ ಬೈಂದೂರು ತಾ.ಪಂ. ಕಾರ್ಯನಿರ್ವಾಹಣಾಧಿಕಾರಿಗಳು, ಭೇಟಿ ನೀಡಿ, ಸರಕಾರಕ್ಕೆ ವರದಿ ಸಲ್ಲಿಸುವ ಭರವಸೆ ನೀಡಿದ್ದಾರೆ. ಶಾಸಕ ಗುರುರಾಜ್‌ ಗಂಟಿಹೊಳೆ ಅವರು ಮಂಗಳವಾರವೇ ಅಲ್ಲಿಗೆ ಭೇಟಿ ನೀಡಿ, ಅಗತ್ಯ ನೆರವು ನೀಡುವ ಭರವಸೆ ನೀಡಿದ್ದರು. ಇಲ್ಲಿ ಈ ಕುಟುಂಬ ಮಾತ್ರವಲ್ಲ 10ಕ್ಕೂ ಮಿಕ್ಕಿ ಮನೆಯವರು ಸೇತುವೆಯಿಲ್ಲದೆ ಸಂಕಷ್ಟ ಅನುಭವಿಸುತ್ತಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next