Advertisement
ಇದರಿಂದ ಹತ್ತಾರೂ ಹಳ್ಳಿಗಳು ನೀರಾವರಿ ಸೌಲಭ್ಯದಿಂದ ವಂಚಿತಗೊಂಡಿದ್ದು, ನದಿಗೆ ಪೋಲಾಗುತ್ತಿರುವ ನೀರು ಜಮೀನುಗಳಿಗೆ ನೀರುಣಿಸುವ ಯೋಜನೆ ಕೈಗೊಳ್ಳುವಲ್ಲಿ ಸಂಬಂಧಪಟ್ಟ ಅಧಿಕಾರಿಗಳು ವಿಫಲವಾಗಿದ್ದಾರೆ. ಬೇಸಿಗೆ ಅವಧಿ ಯಲ್ಲೋ ಹಳ್ಳದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಯುತ್ತವೆ. ಕೆರೆಯಿಂದ ಪೋಲಾಗುತ್ತಿರುವ ನೀರು ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಉದ್ದೇಶಿಸಿ ಯೋಜನೆಯೊಂದು ರೂಪಿಸಿ ರೈತರಿಗೆ ಅನುಕೂಲ ಕಲ್ಪಿಸುವ ಯೋಜನೆ ಕ್ರಮ ವಹಿಸುವಲ್ಲಿ ಎಡವಿದ್ದಾರೆ. ನವೀಲಗುಡ್ಡ, ಜಂಬಲದಿನ್ನಿ ಎರಡು ಗ್ರಾಮದ ಮಧ್ಯ ದೊಡ್ಡ ಪ್ರಮಾಣದ ಹಳ್ಳ ಹರಿಯುತ್ತಿದೆ.
Related Articles
Advertisement
ಕೃಷಿ ಚಟುವಟಿಕೆ: ಹುಲಿಗುಡ್ಡ, ಪರಾಪುರ ಕೆರೆಯಿಂದ ಹಳ್ಳದ ಮೂಲಕ ಕೃಷ್ಣಾನದಿಗೆ ನೀರು ಪೋಲಾಗುತ್ತಿವೆ. ಹಳ್ಳದ ಅನುಪಾಸಿನಲ್ಲಿರುವ ನೂರಾರು ಹೆಕ್ಟೇರ್ ಪ್ರದೇಶದ ಜಮೀನಿನ ರೈತರು ಬಿತ್ತನೆ ಸಂದರ್ಭ ಬೆಳೆಗಳಿಗೆ ಮೋಟರ್‌ನಿಂದ ಹಳ್ಳದ ನೀರು ಸದ್ಬಳಕೆ ಮಾಡಿಕೊಂಡು ಕೃಷಿ ಚಟುವಟಿಕೆ ಆರಂಭಿಸಿದ್ದಾರೆ. ಪೋಲಾಗುವ ನೀರನ್ನು ಬಳಕೆ ಮಾಡಿಕೊಂಡು, ನೀರಾವರಿಸೌಲಭ್ಯ ವಂಚಿತ ಜಮೀನುಗಳಿಗೆ ನೀರುಣಿಸುವ ಯೋಜನೆಗೆ ಅಧಿಕಾರಿಗಳು ಮುಂದಾಗಬೇಕಿತ್ತು. ಕೆಲ ರೈತರು ಬಾಡಿಗೆ ಮೋಟರ್‌ಗಳು ತಂದು ಹಳ್ಳದ ನೀರು ಬೆಳೆಗಳಿಗೆ ಬಳಕೆ ಮಾಡಲಾಗುತ್ತಿದೆ.
ಜಾನುವಾರುಗಳಿಗೆ ಕುಡಿಯಲು ಹಳ್ಳದ ನೀರು ಅನುಕೂಲವಾಗಿದೆ. ಎಸ್‌ಸಿ ಎಸ್‌ಟಿ ಯೋಜನೆ: ರಾಜ್ಯ ಸರಕಾರ ಪರಿಶಿಷ್ಟ ಜಾತಿ ಮತ್ತು ಪಂಗಡ ಸಮುದಾಯದ ಜನರ ಅಭಿವೃದ್ಧಿಗಾಗಿಹರಿಜನ ಗಿರಿಜನ ಕಲ್ಯಾಣ ಯೋಜನೆಅಡಿಯಲ್ಲಿ ನೂರಾರು ಕೋಟಿ ರೂ. ಅನುದಾನ ನೀಡಲಾಗುತ್ತಿದೆ. ಈ ಯೋಜನೆ ಮೂಲಕ ನೀರಾವರಿ ಸೌಲಭ್ಯ ವಂಚಿತ ಪ್ರದೇಶಗಳಿಗೆ ನೀರುಣಿಸುವ ಏತ ನೀರಾವರಿ ಸೌಲಭ್ಯ ಕಲ್ಪಿಸಬೇಕು ಎಂಬುದು ಈ ಭಾಗದ ರೈತರ ಬೇಡಿಕೆಯಾಗಿದೆ. ಹರಿಜನ ಗಿರಿಜನ ಯೋಜನೆಯಲ್ಲಿ ವಂಚಿತ ಸಮುದಾಯದ ಜನರನ್ನು ಆರ್ಥಿಕವಾಗಿ ಬದಲಾವಣೆ ಮಾಡುವ ಚಿಂತನೆ ಅಧಿಕಾರಿಗಳು ಮಾಡಬೇಕು ಎಂದು ರೈತರಾದ ಶಿವಪ್ಪ, ಹನುಮಂತ ಆಗ್ರಹಿಸಿದರು.
ನೂರಾರು ಹೆಕ್ಟೇರ್ ಪ್ರದೇಶದ ಜಮೀನಗಳಿಗೆ ಹಳ್ಳದ ನೀರು ನೀರು ಹಂಚಿಕೆ ಮಾಡುವ ಯೋಜನೆ ವಿಫಲವಾಗಿದೆ. ಹಲವು ಬಾರಿ ಹೋರಾಟ ಕೈಗೊಳ್ಳಲಾಗಿದೆ. ಅಧಿಕಾರಿಗಳ ಹುಸಿ ಭರವಸೆಗೆ ಈ ಭಾಗದ ರೈತರು ಸಂಕಷ್ಟ ಎದುರಿಸುವಂತಾಗಿದೆ. – ಮಲ್ಲಯ್ಯ ಕಟ್ಟಿಮನಿ, ಕೆಆರ್‌ಎಸ್ ತಾಲೂಕು ಅಧ್ಯಕ್ಷ.
–ನಾಗರಾಜ ತೇಲ್ಕರ್