ಕೊಪ್ಪಳ: ನಾಡಿನ ಪ್ರಸಿದ್ದ ಹುಲಿಗಿಯ ಹುಲಿಗೆಮ್ಮ ದೇವಿ ಜಾತ್ರೆಯ ಮಹಾ ರಥೋತ್ಸವವ ಲಕ್ಷಾಂತರ ಭಕ್ತರ ಮಧ್ಯೆ ಮಂಗಳವಾರ ಸಂಜೆ ಸಾಂಘವಾಗಿ ನೆರವೇರಿತು. ಭಕ್ತರು ಹೂವು, ಉತ್ತುತ್ತಿ, ಬಾಳೆ ಹಣ್ಣು ಸಮರ್ಪಿಸಿ ಭಕ್ತಿಯಿಂದಲೇ ನಮಿಸಿದರು.
ಹುಲಿಗೆಮ್ಮ ದೇವಿಗೆ ನಾಡಿನ ಮೂಲೆ ಮೂಲೆಗಳಲ್ಲೂ ಭಕ್ತರಿದ್ದಾರೆ. ಇದಲ್ಲದೇ ಅಂತರಾಜ್ಯದಿಂದಲೂ ಭಕ್ತರ ದಂಡೇ ಪ್ರತಿ ವರ್ಷ ಹರಿದು ಬರುತ್ತದೆ. ಆದರೆ ಕೋವಿಡ್ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷದಿಂದ ಜನತೆ ಜಾತ್ರೆ ಹಾಗೂ ದೇವಿಯ ದರ್ಶನಕ್ಕೆ ಬರಲು ಸಾಧ್ಯವಾಗಿರಲಿಲ್ಲ. ಜಾತ್ರೆಯನ್ನು ಅತ್ಯಂತ ಸರಳವಾಗಿ ಆಚರಣೆ ಮಾಡಲಾಗಿತ್ತು. ಈಗ ಕೋವಿಡ್ ಸೋಂಕಿನ ಪ್ರಮಾಣವು ಇಳಿಕೆಯಾಗಿದ್ದು, ಹುಲಿಗಿಯಲ್ಲಿ ಹಬ್ಬದ ಸಂಭ್ರಮ ಮನೆ ಮಾಡಿದೆ.
ಪ್ರತಿ ವರ್ಷ ಬಾಳೆ ದಂಡಿಗೆ ದಿನದಂದು ದೇವಿಯ ಜಾತ್ರಾ ಮಹೋತ್ಸವ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಮಹಾ ರಥೋತ್ಸವ ಜರುಗತ್ತದೆ. ಅದರಂತೆ, ಮಂಗಳವಾರ ದೇವಿಗೆ ವಿಶೇಷ ಪುಷ್ಪಾಲಂಕಾರ ಮಾಡಿ ವಿಶೇಷ ಪೂಜೆ ಸಲ್ಲಿಸಲಾಗಿತ್ತು.
ನಾಡಿನ ಮೂಲೆ ಮೂಲೆಗಳಿಂದ ಲಕ್ಷಾಂತರ ಭಕ್ತರ ದಂಡೇ ಹರಿದು ಬಂದಿದೆ. ಡೊಳ್ಳು, ಮಜಲಿನ ಮೆರವಣಿಗೆ ಜೋರಾಗಿಯೇ ನಡೆಯಿತು. ಭಕ್ತರು ದೇವಿಗೆ ಸಂಕಲ್ಪ ಮಾಡಿಕೊಂಡಿದ್ದ ತಮ್ಮ ಇಷ್ಟಾರ್ಥಗಳನ್ನ ಈಡೇರಿಸಿದರು.
ಅಲ್ಲದೇ, ಮಂಗಳವಾರ ಸಂಜೆ ಲಕ್ಷಾಂತರ ಭಕ್ತರ ಮಧ್ಯೆ ಮಹಾ ರಥೋತ್ಸವ ಸಾಂಘವಾಗಿ ನೆರವೇರಿತು. ಭಕ್ತರು ಭಕ್ತಿಯಿಂದಲೇ ಹೂವು, ಬಾಳೆಹಣ್ಣು, ಉತ್ತತ್ತಿ ಅರ್ಪಿಸುವ ಮೂಲಕ ಭಕ್ತಿಯಿಂದಲೇ ನಮಿಸಿದರು.