ಬೆಳಗಾವಿ: ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಮನೆಯಲ್ಲಿ ಈಗ ಅಸಮಾಧಾನದ ಹೊಗೆ ದಟ್ಟವಾಗಿದೆ. ರಾಜ್ಯದ ಬೇರೆ ಜಿಲ್ಲೆಗಳಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿಯಲ್ಲಿ ಟಿಕೆಟ್‌ಗಾಗಿ ಭರ್ಜರಿ ಪೈಪೋಟಿ ನಡೆದಿದ್ದರೆ ಈ ಕ್ಷೇತ್ರದಲ್ಲಿ “ನನಗೆ ಟಿಕೆಟ್ ಬೇಡ’ ಎಂದು ಹಾಲಿ ಸಂಸದ, ಕಾಂಗ್ರೆಸ್‌ನ ಪ್ರಕಾಶ ಹುಕ್ಕೇರಿ ಪಕ್ಷದ ನಾಯಕರ ಮುಂದೆ ಹೇಳಿರುವುದು ಅನೇಕ ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಕಳೆದ ಬಾರಿ ಒಲ್ಲದ ಮನಸ್ಸಿನಿಂದ ಲೋಕಸಭೆಗೆ ಸ್ಪರ್ಧೆ ಮಾಡಿದ್ದ ಪ್ರಕಾಶ ಹುಕ್ಕೇರಿ ಈಗ ಏಕಾಏಕಿ ಸ್ಪರ್ಧೆ ಮಾಡಲು ಹಿಂದೇಟು ಹಾಕುತ್ತಿರುವುದು ಏಕೆ ಎಂಬ ಪ್ರಶ್ನೆ ಕ್ಷೇತ್ರದಲ್ಲಿ ಎದ್ದಿದೆ. ಈ ಹಿಂದೆ ತಾವೇ ಹೇಳಿದಂತೆ ಪ್ರಕಾಶ ಹುಕ್ಕೇರಿ ಕಾಂಗ್ರೆಸ್ ಬಿಡಲು ವೇದಿಕೆ ಸಿದ್ಧ ಮಾಡಿಕೊಂಡಿದ್ದಾರೆಯೇ ಎಂಬ ಚರ್ಚೆಗಳೂ ನಡೆದಿದೆ.
ಚುನಾವಣೆಯ ಸ್ಪರ್ಧೆಯ ಹಿನ್ನೆಲೆಯಲ್ಲಿ ಶನಿವಾರ ಪ್ರಕಾಶ ಹುಕ್ಕೇರಿ ತಮ್ಮ ಕ್ಷೇತ್ರದಲ್ಲಿ ಬೆಂಬಲಿಗರ ಸಭೆ ಕರೆದಿದ್ದು ಈ ಸಭೆ ಮುಂದಿನ ನಡೆಯ ದೃಷ್ಟಿಯಿಂದ ಬಹಳ ಮಹತ್ವ ಪಡೆದುಕೊಂಡಿದೆ. ಬೆಂಗಳೂರಿನಲ್ಲಿ ಗುರುವಾರ ನಡೆದ ಬೆಳಗಾವಿ ಜಿಲ್ಲಾ ಮುಖಂಡರ ಸಭೆಯಲ್ಲಿ ಚಿಕ್ಕೋಡಿ ಲೋಕಸಭಾ ವ್ಯಾಪ್ತಿಯ ವಿಧಾನಸಭಾ ಕ್ಷೇತ್ರಗಳ ಮಾಜಿ ಶಾಸಕರು ಸಿದ್ದರಾಮಯ್ಯ ಅವರ ಮುಂದೆ ನೇರವಾಗಿಯೇ ಪ್ರಕಾಶ ಹುಕ್ಕೇರಿ ವಿರುದಟಛಿ ಹರಿಹಾಯ್ದಿದ್ದಾರೆ. ಇದರಿಂದ ತೀವ್ರಆತಂಕಗೊಂಡಿರುವ ಪ್ರಕಾಶ ಹುಕ್ಕೇರಿ ಸ್ಪರ್ಧೆ ಮಾಡಲು ಹಿಂದೇಟು ಹಾಕಿದ್ದಾರೆ ಎನ್ನಲಾಗುತ್ತಿದೆ.
ಪ್ರಕಾಶ ಹುಕ್ಕೇರಿ ಸಂಸದರಾದಾಗಿನಿಂದ ನಮ್ಮ ಯಾರ ಮಾತೂ ಕೇಳುತ್ತಿಲ್ಲ. ನಮಗೆ ಬೆಲೆ ಇಲ್ಲದಂತಾಗಿದೆ. ಎಲ್ಲವೂ ತಾವು ಹೇಳಿದ ಹಾಗೆ ನಡೆಯಬೇಕು ಎಂಬ ಧೋರಣೆಯನ್ನು ಹುಕ್ಕೇರಿ ತಾಳಿದ್ದಾರೆ. ಸಂಸದರ ನಿಧಿಯ ಹಣವನ್ನೆಲ್ಲ ಹಾಗೂಕೇಂದ್ರದ ಯೋಜನೆಗಳನ್ನು ಕೇವಲ ಚಿಕ್ಕೋಡಿ ಸದಲಗಾಕ್ಕೆ ವಿನಿಯೋಗ ಮಾಡಿದ್ದಾರೆ ಎಂಬುದು ಮಾಜಿ ಶಾಸಕರ ಆರೋಪ. ಚಿಕ್ಕೋಡಿ ಭಾಗದ ಕಾಂಗ್ರೆಸ್ ನಾಯಕರುತಮ್ಮ ವಿರುದಟಛಿ ಮುನಿಸಿಕೊಂಡಿರುವದನ್ನು ಗಮನಿಸಿರುವ ಪ್ರಕಾಶ ಹುಕ್ಕೇರಿ ಬೆಳಗಾವಿಗೆ ಲೋಕಸಭೆ ಟಿಕೆಟ್ ಬಲವಾದ ಬೇಡಿಕೆ ಇಡಬೇಕು. ಅದಾಗದಿದ್ದರೆ ಚಿಕ್ಕೋಡಿಯಿಂದಲೇ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಬೇಕು ಎಂಬ ಆಲೋಚನೆಯಲ್ಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಬೆಳಗಾವಿ ಜಿಲ್ಲೆಯಲ್ಲಿ ಲಿಂಗಾಯತ ಸಮಾಜದಿಂದ ಪಕ್ಷದಲ್ಲಿ ಒಬ್ಬ ಪ್ರಭಾವಿ ನಾಯಕರನ್ನು ಬೆಳೆಸಬೇಕು ಎಂಬ ಕಾರಣದಿಂದ ಬಿಜೆಪಿ ಅಧ್ಯಕ್ಷ ಯಡಿಯೂರಪ್ಪ ಇದುವರೆಗೆ ಯಾರ ಹೆಸರನ್ನೂ ಘೋಷಣೆ ಮಾಡಿಲ್ಲ. ಯಾರಿಗೂ ಸ್ಪಷ್ಟ ಭರವಸೆ ನೀಡಿಲ್ಲ. ಹೀಗಾಗಿ ಪ್ರಕಾಶ ಹುಕ್ಕೇರಿ ಅವರ ಹೆಸರೂ ಸಹ ಪಕ್ಷದ ಆಕಾಂಕ್ಷಿಗಳ ಪಟ್ಟಿಯ ರೇಸ್‌ನಲ್ಲಿದೆ ಎನ್ನಲಾಗುತ್ತಿದೆ.
ಪರ್ಯಾಯ ಅಭ್ಯರ್ಥಿಗಳು
ಕಾಂಗ್ರೆಸ್‌ನ ಈಗಿನ ಬೆಳವಣಿಗೆ ಪ್ರಕಾರ ಪ್ರಕಾಶ ಹುಕ್ಕೇರಿ ಚಿಕ್ಕೋಡಿ ಕ್ಷೇತ್ರದಿಂದ ಸ್ಫರ್ಧೆ ಮಾಡುವುದು ಅನುಮಾನ. ಒಂದು ವೇಳೆ ಅಂತಹ ಪ್ರಸಂಗ ಬಂದರೆ ಅವರಿಗೆ ಪರ್ಯಾಯವಾಗಿ ಕಾಂಗ್ರೆಸ್ ಪಕ್ಷದ ಚಿಕ್ಕೋಡಿ ಜಿಲ್ಲಾ ಘಟಕದ ಅಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ ಹಾಗೂ ಮಾಜಿ ಶಾಸಕ ಮತ್ತು ಹಿರಿಯ ಮುಖಂಡ ಎ.ಬಿ. ಪಾಟೀಲ ಆವರನ್ನು ಪಕ್ಷದ ನಾಯಕರು ಅಂತಿಮ ಪಟ್ಟಿಯಲ್ಲಿ ಸೇರ್ಪಡೆ ಮಾಡಿದ್ದಾರೆ. ಪ್ರಕಾಶ ಹುಕ್ಕೇರಿ ಹೊರತುಪಡಿಸಿ ಬೇರೆ ಯಾರನ್ನೇ ಅಭ್ಯರ್ಥಿಯನ್ನಾಗಿ ಮಾಡಿದರೂ ಚುನಾವಣೆಯ ಲ್ಲಿ ಪೂರ್ಣ ಪ್ರಮಾಣದಲ್ಲಿ ಕೆಲಸ ಮಾಡುತ್ತೇವೆ ಎಂದು ಮಾಜಿ ಶಾಸಕರು ಪಕ್ಷದ ವರಿಷ್ಠರಿಗೆಭರವಸೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕೇಶವಆದಿ