Advertisement
ಜಿಲ್ಲೆಯಲ್ಲಿ ಮೊದಲ ಮತ್ತು 2ನೇ ಡೋಸ್ ಪಡೆಯಲು ಬಾಕಿ ಇರುವವರ ಮನವೊಲಿಸಲು ಪಾಲಿಕೆ, ಆರೋಗ್ಯಇಲಾಖೆ ಮುಂದಾಗಿದೆ. ಅದರಂತೆ ನ. 26 ಮತ್ತು 27ರಂದು ಬೆಳಗ್ಗೆಯಿಂದ ಸಂಜೆಯ ವರೆಗೆ ಪಾಲಿಕೆ ವ್ಯಾಪ್ತಿಯ ಮಾಲ್‌ಗಳು, ಮಾರುಕಟ್ಟೆ, ಅಂಗಡಿಗಳು, ಸೂಪರ್ ಮಾರ್ಕೆಟ್ ಸಹಿತ ಹೆಚ್ಚು ಜನ ಸೇರುವಲ್ಲಿ ಪ್ರತ್ಯೇಕ ತಂಡ ತೆರಳಿ ಲಸಿಕೆ ಪಡೆಯದವರಿಗೆ ಲಸಿಕೆ ನೀಡಲಿದೆ.
Related Articles
Advertisement
ಮನಪಾ ಆಯುಕ್ತ ಅಕ್ಷಯ್ ಶ್ರೀಧರ್ ಅವರು “ಉದಯವಾಣಿ ಸುದಿನ’ಕ್ಕೆ ಪ್ರತಿಕ್ರಿಯಿಸಿ, “ಪಾಲಿಕೆ ವ್ಯಾಪ್ತಿಯ ಎಲ್ಲರೂ ಲಸಿಕೆ ಪಡೆಯಲು ಪ್ರೇರೇಪಿ ಸುವ ಉದ್ದೇಶದಿಂದ ಪಾಲಿಕೆಯಲ್ಲಿ ಈಗ ಪ್ರತ್ಯೇಕ ವಾರ್ ರೂಂ ತೆರೆಯಲಾಗಿದೆ.
ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಮೊದಲ ಡೋಸ್, ಎರಡನೇ ಡೋಸ್ ಲಸಿಕೆಗೆ ಬಾಕಿ ಇರುವವರ ಮಾಹಿತಿಯನ್ನು ಸಂಗ್ರಹಿಸಿ ಅಂತಹವರಿಗೆ ವಾರ್ ರೂಂನಿಂದ ಕರೆ ಮಾಡಿ ಲಸಿಕೆ ಪಡೆಯಲು ಸೂಚಿಸಲಾಗುತ್ತದೆ. ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖೆ ಸಿಬಂದಿ ಜತೆ ಜಿಲ್ಲೆಯ ವಿವಿಧ ಕಾಲೇಜಿನ ಎನ್ನೆಸ್ಸೆಸ್ ವಿದ್ಯಾರ್ಥಿಗಳು ಕೂಡ ಮನೆ ಮನೆಗೆ ಭೇಟಿ ನೀಡಿ ಜಾಗೃತಿ ಮೂಡಿಸ್ತುದ್ದಾರೆ’ ಎನ್ನುತ್ತಾರೆ.
ಇಂದು ಪಾಲಿಕೆ ಕಚೇರಿಯಲ್ಲಿ ಚಾಲನೆ :
ಕೋವಿಡ್ ನಿರೋಧಕ ಲಸಿಕೆ ಮೇಳವು ನ. 26ರಂದು ಬೆಳಗ್ಗೆ 9ಗಂಟೆಗೆ ಪಾಲಿಕೆ ಕಚೇರಿ ಮುಂಭಾಗದಲ್ಲಿ ಚಾಲನೆಗೊಂಡು, 9.30ಕ್ಕೆ ಒಷಿಯನ್ ಪರ್ಲ್ ಬಳಿ ಬರಲಿದೆ. ಈ ವ್ಯಾಪ್ತಿಯಲ್ಲಿ ಬರುವ ಕಾಲೇಜುಗಳ ಎನ್ನೆಸ್ಸೆಸ್ ವಿದ್ಯಾರ್ಥಿಗಳು ಅಲ್ಲಿ ಸೇರಿ ಲಸಿಕೆ ಪಡೆಯಲು ಹುರಿದುಂಬಿಸಲು ಲಸಿಕಾ ಮಿತ್ರ ಗುರುತಿನ ಚೀಟಿ ಜತೆ ವಿವಿಧ ಆಕರ್ಷಕ ಲಸಿಕಾ ಮಿತ್ರನ ವೇಷ ಭೂಷಣದೊಂದಿಗೆ ಕಾಣಿಸಗೊಳ್ಳಲಿದ್ದಾರೆ. ನಗರ ಆರೋಗ್ಯ ಕೇಂದ್ರಗಳಲ್ಲಿ ಬೆಳಗ್ಗೆ 7.30ರಿಂದ ಸಂಜೆ 7.30ರ ವರೆಗೆ ಲಸಿಕೆ ಪಡೆಯಲು ಅವಕಾಶ ಕಲ್ಪಿಸಲಾಗಿದೆ ಡಿಎಚ್‌ಒ ತಿಳಿಸಿದ್ದಾರೆ.
ಗುರಿ/ ಮೊದಲ ಡೋಸ್/ ಶೇ.
ಆರೋಗ್ಯ ಕಾರ್ಯಕರ್ತರು
52,523 50,926 96.96
ಮುಂಚೂಣಿ ಕಾರ್ಯಕರ್ತರು
15,911 15,911 100
18 ರಿಂದ 44 ವರ್ಷದೊಳಗಿನವರು
9,65,554 7,97,734 82.62
45 ರಿಂದ 60 ವರ್ಷದೊಳಗಿನವರು
4,16,123 4,12,138 99.04
60 ವರ್ಷ ಮೇಲ್ಪಟ್ಟವರು
2,69,000 2,50,642 93.18
ಲಸಿಕೆ ಪಡೆದುಕೊಳ್ಳಲು ಮುಂದೆ ಬನ್ನಿ :
ಲಸಿಕೆ ಪಡೆಯಲು ಬಾಕಿ ಇರುವವರನ್ನು ಮನವೊಲಿಸುವ ಕೆಲಸ ಆರೋಗ್ಯ ಇಲಾಖೆಯಿಂದ ಮಾಡಲಾಗುತ್ತಿದೆ. ಮೆಗಾ ಲಸಿಕೆ ಮೇಳದಲ್ಲಿ ಒಂದು ಲಕ್ಷ ಲಸಿಕೆ ನೀಡುವ ಗುರಿ ಇದೆ. 18 ವರ್ಷ ಮೇಲ್ಪಟ್ಟ ಮೊದಲ ಮತ್ತು ಎರಡನೇ ಡೋಸ್ ಪಡೆಯಲು ಬಾಕಿ ಇರುವವರೆಲ್ಲ ಲಸಿಕೆ ಪಡೆದುಕೊಳ್ಳಬೇಕು.-ಡಾ| ಕಿಶೋರ್ ಕುಮಾರ್, ದ.ಕ. ಜಿಲ್ಲಾ ಆರೋಗ್ಯಾಧಿಕಾರಿ