Advertisement
ನೂರು ವರ್ಷ ಹಳಮೆಯ ಕಾಸರಗೋಡು ಸಬ್‌ರಿಜಿಸ್ಟ್ರಾರ್ ಕಟ್ಟಡ ಇಂದೋ ನಾಳೆಯೋ ಬೀಳುವ ದುಸ್ಥಿತಿಗೆ ತಲುಪಿದೆ. ಕಟ್ಟಡ ಮೇಲೆ ಆವರಿಸಿದ ಬೃಹತ್ ಮರದ ರೆಂಬೆಗಳು ಭಯಾಂತಕವನ್ನು ಹೆಚ್ಚಿಸಿವೆ. ಇನ್ನೊಂದೆಡೆ ಇತ್ತೀಚೆಗೆ ಸುರಿದ ಭಾರಿ ಮಳೆಯಿಂದಾಗಿ ಕಚೇರಿ ಒಳಭಾಗ ನೀರು ಆವರಿಸಿ ಕೃತಕ ಕೊಳದಂತಾಗಿತ್ತು. ಕಾಸರಗೋಡು ತಾಲೂಕು ಆಫೀಸು ಕಚೇರಿ ಪರಿಸರದಲ್ಲಿ ಶತಮಾನದಷ್ಟು ಹಳೆಯದಾದ ಕಟ್ಟಡದಲ್ಲಿ ಸಬ್‌ರಿಜಿಸ್ಟ್ರಾರ್ ಕಚೇರಿ ಇದ್ದು, 11 ಮಂದಿ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ.
Related Articles
Advertisement
ಹೊಸ ಕಟ್ಟಡವೆ ಎಂದು?ಜಿಲ್ಲಾ ಕಚೇರಿ ಸೇರಿದಂತೆ 10 ಉಪ ನೋಂದಣಿ ಕಚೇರಿಗಳು ಜಿಲ್ಲೆಯಲ್ಲಿವೆ. ಇವುಗಳಲ್ಲಿ ಕಾಸರಗೋಡು ಸಬ್‌ರಿಜಿಸ್ಟ್ರಾರ್ ಕಚೇರಿ ಕಟ್ಟಡವು ಬಹಳ ಹಳೆಯದಾಗಿದ್ದು ಚಿಂತಾಜನಕ ಸ್ಥಿತಿಯ ಮೂಲಕ ಭಯದ ವಾತಾವರಣ ಸೃಷ್ಟಿಸಿದೆ. ಉದುಮದಲ್ಲಿ ಸಬ್‌ರಿಜಿಸ್ಟ್ರಾರ್ ಕಚೇರಿಯನ್ನು ಹೊರತುಪಡಿಸಿ ಇತರೆಡೆಗಳಲ್ಲಿ ಹೊಸ ಕಟ್ಟಡಗಳಿವೆ.
ಬೃಹತ್ ಮರದ ರೆಂಬೆಗಳೂ ತಾಲೂಕು ಕಚೇರಿ ಮೇಲ್ಭಾಗಕ್ಕೂ ಚಾಚಿಕೊಂಡಿದ್ದು, ಹೊರಾವರಣಕ್ಕೂ ಹಬ್ಬಿದೆ. ಹೆಚ್ಚಿನ ಗಾಳಿ, ಮಳೆ ಬೀಸಿದಲ್ಲಿ ಮರದ ರೆಂಬೆಗಳು ತುಂಡಾಗಿ ಬೀಳುವ ಸಾಧ್ಯತೆಯೇ ಹೆಚ್ಚಾಗಿದೆ. ಕಚೇರಿಯೊಳಗೆ ಮಳೆ ನೀರು
ಸಾವಿರಾರು ಜನರ ಭೂದಾಖಲೆ ಸಹಿತ ರೇಖಾಚಿತ್ರಗಳನ್ನು ಒಳಗೊಂಡಿರುವ ಕಚೇರಿಯ ಒಳಗೆ ಮಳೆ ನೀರು ಸೋರುತ್ತಿದೆ. ಜನರು ಕಚೇರಿಗೆ ಆಗಮಿಸಿ ಕಾದು ಕುಳಿತುಕೊಳ್ಳುವ ಸ್ಥಳದಲ್ಲಿ ಮಳೆ ನೀರು ತುಂಬಿಕೊಳ್ಳುತ್ತದೆ. ಕಚೇರಿಯ ಹೆಂಚುಗಳು ಅಲ್ಲಲ್ಲಿ ಒಡೆದ ಪರಿಣಾಮ ಮಳೆ ನೀರು ಕಚೇರಿಯೊಳಗೆ ಬೀಳುತ್ತಿದ್ದು, ಕಡತಗಳು ನೀರಿನಲ್ಲಿ ಹಾನಿಗೀಡಾಗುವ ಸಾಧ್ಯತೆಗಳು ಹೆಚ್ಚಾಗಿವೆ. ಸ್ಪಂದನೆ ಸಿಗಲಿಲ್ಲ
ತೃಕ್ಕರಿಪುರ ಮತ್ತು ಮಂಜೇಶ್ವರದಲ್ಲಿನ ಹೊಸ ಸಬ್ ರಿಜಿಸ್ಟ್ರಾರ್ ಕಚೇರಿ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಕಾಸರಗೋಡು ಉಪ ನೋಂದಣಿ ಕಚೇರಿಗೆ ಹೊಸ ಕಟ್ಟಡದ ಆವಶ್ಯಕತೆ ಇದೆ ಎಂದು ಹಲವು ಬಾರಿ ಸರಕಾರಕ್ಕೆ ಮನವಿ ನೀಡಿದ್ದರೂ ಯಾವುದೇಧನಾತ್ಮಕ ಸ್ಪಂದನೆ ಸಿಗಲಿಲ್ಲ
– ಎನ್.ಎ.ನೆಲ್ಲಿಕುನ್ನು
ಶಾಸಕ ರು, ಕಾಸರಗೋಡು