Advertisement

ವಿಶ್ವಕಪ್ ಫೈನಲ್‌ಗೂ ಮುನ್ನ ಕೇರಳದಲ್ಲಿ ಆರ್ಜೆಂಟೀನಾಗೆ ಭಾರೀ ಬೆಂಬಲ

06:51 PM Dec 18, 2022 | Team Udayavani |

ತಿರುವನಂತಪುರಂ : ಭಾನುವಾರ ರಾತ್ರಿ ನಡೆಯುವ ಫಿಫಾ ಫೈನಲ್‌ ರೋಚಕ ಜಿದ್ದಾಜಿದ್ದಿಯ ಕುರಿತು ಕೇರಳದಲ್ಲಿ ಆರ್ಜೆಂಟೀನಾ ಪರ ಭಾರಿ ಬೆಂಬಲ ವ್ಯಕ್ತವಾಗುತ್ತಿದೆ. ಕೊಲ್ಲಂ ಜಿಲ್ಲೆಯ ಇಬ್ಬರು ಅಭಿಮಾನಿಗಳು, ದಕ್ಷಿಣ ಅಮೆರಿಕಾದ ತಮ್ಮ ನೆಚ್ಚಿನ ತಂಡವನ್ನು ಬೆಂಬಲಿಸಲು ಸಜ್ಜಾಗಿದ್ದು, ಒಬ್ಬರು ಆರ್ಜೆಂಟೀನಾ ಬಣ್ಣಗಳಲ್ಲಿ ಉದ್ದನೆಯ ಗಡ್ಡವನ್ನು ಮತ್ತು ಇನ್ನೊಬ್ಬರು ಅವರ ತಲೆಯ ಹಿಂಭಾಗದಲ್ಲಿ ವಿಶ್ವಕಪ್ ಟ್ರೋಫಿ ವಿನ್ಯಾಸದೊಂದಿಗೆ ಕೇಶವಿನ್ಯಾಸವನ್ನು ಮಾಡಿಸಿಕೊಂಡಿದ್ದಾರೆ.

Advertisement

ನವೆಂಬರ್ 20 ರಿಂದ ಇಂದಿನ ಫೈನಲ್‌ವರೆಗೆ ಕತಾರ್‌ನಲ್ಲಿ ನಡೆದ ಫುಟ್‌ಬಾಲ್ ವಿಶ್ವಕಪ್‌ನಲ್ಲಿ ಕೇರಳದಲ್ಲಿ ಕಂಡುಬಂದ ಅರ್ಜೆಂಟೀನಾ ಮತ್ತು ಬ್ರೆಜಿಲ್‌ನಂತಹ ದಕ್ಷಿಣ ಅಮೆರಿಕಾದ ತಂಡಗಳ ಪರ ಅಭಿಮಾನ ಮತ್ತು ಬೆಂಬಲಕ್ಕೆ ಇದು ಒಂದು ಉದಾಹರಣೆಯಾಗಿದೆ.

ಕೊಲ್ಲಂನ ಕುಂದ್ರಾ ಪ್ರದೇಶದಲ್ಲಿ ಆಟೋರಿಕ್ಷಾ ಚಾಲಕರಾಗಿರುವ ಸನ್ನಿ, ತಮ್ಮ ನೆಚ್ಚಿನ ತಂಡದ ಬಣ್ಣಗಳಲ್ಲಿ ತಮ್ಮ ಉದ್ದನೆಯ ಗಡ್ಡವನ್ನು ವಿನ್ಯಾಸಗೊಳಿಸಿದ್ದಾರೆ ಮತ್ತು ಲಿಯೋನೆಲ್ ಮೆಸ್ಸಿಗೆ ಬೆಂಬಲವನ್ನು ಸೂಚಿಸುವ ಹಿನ್ನೆಲೆಯಲ್ಲಿ ನೀಲಿ ಬಣ್ಣದಲ್ಲಿ ‘M’ ನಿಂದ ಕೂದಲನ್ನು ವಿನ್ಯಾಸಗೊಳಿಸಿದ್ದಾರೆ.

ತನ್ನ ಗಡ್ಡವನ್ನು ಬ್ಯೂಟಿ ಪಾರ್ಲರ್‌ನ ಮಾಲಕರು ಗಮನಿಸಿ ಅರ್ಜೆಂಟೀನಾದ ಪಟ್ಟೆ ನೀಲಿ ಬಣ್ಣದಲ್ಲಿ ಬಣ್ಣ ಹಾಕಲು ಮುಂದಾದರು ಎಂದು ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಸ್ನೇಹಿತ ರಾವ್ ಜಿ, ಅರ್ಜೆಂಟೀನಾದ ಅಭಿಮಾನಿಯಾಗಿದ್ದು ತಲೆಯ ಹಿಂಭಾಗದಲ್ಲಿ ಹಳದಿ ಬಣ್ಣದಲ್ಲಿ ವಿಶ್ವಕಪ್ ಟ್ರೋಫಿಯೊಂದಿಗೆ ಕೂದಲನ್ನು ವಿನ್ಯಾಸಗೊಳಿಸಿದ್ದಾರೆ. ಹೊಸ ವಿನ್ಯಾಸದ ಗಡ್ಡ ಕಾಲೇಜು ವಿದ್ಯಾರ್ಥಿಗಳು ಸೇರಿ ಎಲ್ಲರೂ ಗಮನಿಸುತ್ತಿದ್ದಾರೆ ಎಂದು ಸನ್ನಿ ಹೇಳಿದರು.

Advertisement

“ಮನೆಯಲ್ಲಿ, ನನ್ನ ಮಕ್ಕಳು ಇದನ್ನು ಇಷ್ಟಪಡುತ್ತಾರೆ. ಆದರೆ, ನನ್ನ ಪತ್ನಿ ಮುಜುಗರಕ್ಕೊಳಗಾಗಿದ್ದಾಳೆ ಎಂದೂ ಹೇಳಿದ್ದಾರೆ. ಫೈನಲ್‌ನ ನಂತರ ಅದನ್ನು ತೆಗೆದುಹಾಕಲು ನನ್ನನ್ನು ಕೇಳಿದ್ದಾಳೆ. ಆದರೆ ನನ್ನ ಮಕ್ಕಳು ನೆಚ್ಚಿಕೊಂಡಿದ್ದಾರೆ ಎಂದು ಅವರು ಹೇಳಿದರು.

ಸಿಪಿಐ(ಎಂ) ಮುಖಂಡರಾದ ಎಂ ಬಿ ರಾಜೇಶ್, ಸ್ಥಳೀಯ ಸ್ವಯಂ ಆಡಳಿತ ಇಲಾಖೆಯ ರಾಜ್ಯ ಸಚಿವರೂ ಆಗಿರುವ ಎಂ.ಎಂ. ಮಣಿ, ಆರ್ಜೆಂಟೀನಾ, ಮೆಸ್ಸಿ ತನ್ನ ತಂಡದೊಂದಿಗೆ  ಈ ವರ್ಷ ಕಪ್ ಗೆಲ್ಲುವ ಭರವಸೆಯಲ್ಲಿದ್ದಾರೆ.

ನಟ, ಕೊಲ್ಲಂ ಶಾಸಕ ಮುಕೇಶ್, ಬ್ರೆಝಿಲ್‌ನ ಅಭಿಮಾನಿಯಾಗಿದ್ದರೂ, ತನ್ನ ನೆಚ್ಚಿನ ತಂಡ ಫೈನಲ್‌ಗೆ ತಲುಪದ ಕಾರಣ, ಮೆಸ್ಸಿಯ ಅಭಿಮಾನಿಯಾಗಿರುವುದರಿಂದ ಆರ್ಜೆಂಟೀನಾ ಗೆಲ್ಲಬೇಕೆಂದು ನಾನು ಬಯಸುತ್ತೇನೆ. ಮೊದಲ ಪಂದ್ಯದ ಸೋಲು ಅವರಿಗೆ ಮುಂದುವರೆಯಲು ಉತ್ತೇಜನ ನೀಡಿದೆ ಎಂದು ಅವರು ಹೇಳಿದರು.

ಫೈನಲ್ ಪಂದ್ಯವನ್ನು ವೀಕ್ಷಿಸಲು ಕತಾರ್‌ನಲ್ಲಿರುವ ಸೂಪರ್‌ಸ್ಟಾರ್ ಮೋಹನ್‌ಲಾಲ್, ನನಗೆ ಅಂತಹ ಯಾವುದೇ ನೆಚ್ಚಿನ ತಂಡವಿಲ್ಲ, ಆದರೆ ಯಾರು ಗೆಲ್ಲುತ್ತಾರೆ ಎಂದು ನೋಡಲು ಉತ್ಸುಕರಾಗಿದ್ದೇನೆ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next