Advertisement

ಸುರತ್ಕಲ್‌ ಬೀಚ್‌ನಲ್ಲಿ ಭಾರಿ ಪ್ರಮಾಣದ ತೈಲ ಜಿಡ್ಡು ಪತ್ತೆ

11:59 AM May 13, 2022 | Team Udayavani |

ಸುರತ್ಕಲ್: ಇಲ್ಲಿನ ದೊಡ್ಡಕೊಪ್ಪಲು ಸುರತ್ಕಲ್ ಬೀಚ್ ತೀರದಲ್ಲಿ ಶುಕ್ರವಾರ ಭಾರಿ ಪ್ರಮಾಣದಲ್ಲಿ ತೈಲ ಜಿಡ್ಡು ಕಂಡುಬಂದಿದೆ.

Advertisement

ಬೃಹತ್ ಹಡಗುಗಳು ಬಂದರು ತೀರ ಪ್ರದೇಶದಲ್ಲಿ ಲಂಗರು ಹಾಕಿದ ಸಂದರ್ಭ ತೈಲ ಜಿಡ್ಡಿನ ತ್ಯಾಜ್ಯಗಳನ್ನು ಸಮುದ್ರಕ್ಕೆ ಸುರಿಯುತ್ತಿರುವ ಬಗ್ಗೆ ಈ ಹಿಂದಿನಿಂದಲೂ ಆರೋಪಗಳು ಕೇಳಿ ಬರುತ್ತಿದ್ದವು.

ಬಂದರು ಒಳಭಾಗದಲ್ಲಿ ಅಳಿದುಳಿದ ತ್ಯಾಜ್ಯಗಳನ್ನು ವಿಲೇವಾರಿ ಮಾಡಲು ಶುಲ್ಕವನ್ನು ಪಾವತಿಸಬೇಕೆಂದು ಅಂತರರಾಷ್ಟ್ರೀಯ ಸಮುದ್ರ ಮಾರ್ಗದಲ್ಲಿ ಹಡಗಿನ ತೈಲ ಜಿಡ್ಡು ತ್ಯಾಜ್ಯಗಳನ್ನು ಸುರಿದು ಹೋಗಲಾಗುತ್ತಿದೆ. ಈ ಬಗ್ಗೆ ಡಿಜಿಸಿಎ ಸಮರ್ಪಕವಾದ ಕಾನೂನು ಜಾರಿಗೊಳಿಸಿದ್ದರು ಇದು ನಿಯಂತ್ರಣಕ್ಕೆ ಬರುತ್ತಿಲ್ಲ.

ಇದನ್ನೂ ಓದಿ:ಹೈಕೋರ್ಟ್ ನಲ್ಲಿ ಪಿಐಎಲ್: ಕೆಬಿಜೆಎನ್ಎಲ್ ಎಂ.ಡಿ. ಕಛೇರಿ ಆಲಮಟ್ಟಿಗೆ ಸ್ಥಳಾಂತರಕ್ಕೆ ಸೂಚನೆ

Advertisement

ಇನ್ನು ಈ ಭಾಗದಲ್ಲಿ ಹಲವು ತೈಲ ಉತ್ಪಾದಕ, ಸಂಸ್ಕರಣ ಘಟಕ, ಮುಳುಗಡೆಯಾದ ಡ್ರಜ್ಜರ್,ಹಡಗುಗಳಿದ್ದು ಇದರಿಂದಲೂ ಸಮುದ್ರ ಮಾಲಿನ್ಯ ಆಗುತ್ತಿದೆಯೆ ಎಂಬುದರ ಬಗ್ಗೆ ಪರಿಸರ ಮಾಲಿನ್ಯ ತನಿಖೆ ನಡೆಸಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next