Advertisement

ಕೋಲಾರದಲ್ಲಿ ಲಿಮ್ಕಾ ದಾಖಲೆ ಬರೆದ ಬೃಹತ್‌ ರಾಷ್ಟ್ರಧ್ವಜ

03:41 PM Aug 16, 2022 | Team Udayavani |

ಕೋಲಾರ: ಜಿಲ್ಲಾ ವಿಶ್ವೇಶ್ವರಯ್ಯ ಕ್ರೀಡಾಂಗಣ ಈ ಬಾರಿ ವೈಭವದ ಸ್ವಾತಂತ್ರ್ಯೋತ್ಸವಕ್ಕೆ ಸಾಕ್ಷಿಯಾಗಿದ್ದು, 203 ಮೀ. ಅಗಲ ಹಾಗೂ 630 ಮೀ. ಉದ್ದದ ರಾಷ್ಟ್ರಧ್ವಜ ಹಾರಾಟ ಹಾಗೂ ಹೆಲಿಕಾಪ್ಟರ್‌ ಮೂಲಕ ಪುಷ್ಪವೃಷ್ಟಿಯ ಮೂಲಕ ಗಮನ ಸೆಳೆದಿದ್ದು, ಬೃಹತ್‌ ಧ್ವಜ ಹಾರಾಟ ಲಿಮ್ಕಾ ದಾಖಲೆ ಸೇರಿದೆ ಎಂದು ಸಂಸದ ಮುನಿಸ್ವಾಮಿ ತಿಳಿಸಿದರು.

Advertisement

ಭಾರತ ಸ್ವಾತಂತ್ರ್ಯ ಅಮೃತಮಹೋತ್ಸವವನ್ನು ಅತ್ಯಂತ ಅದ್ದೂರಿಯಾಗಿ ನಡೆಸಲು ಪಣತೊಟ್ಟಿದ್ದ ಸಂಸದ ಎಸ್‌.ಮುನಿಸ್ವಾಮಿ ಕಳೆದ ಸುಮಾರು 10 ದಿನಗಳಿಂದ ನಗರದಲ್ಲೇ ಉಳಿದು ಈ ಬೃಹತ್‌ ರಾಷ್ಟ್ರಧ್ವಜ ನಿರ್ಮಾಣಕ್ಕೆ ಕಾರಣರಾದರು.

ಇದರೊಂದಿಗೆ ಒಂದು ಲಕ್ಷಕ್ಕೂ ಹೆಚ್ಚು ಧ್ವಜಗಳ ವಿತರಣೆ ಮೂಲಕ ಪ್ರತಿ ಮನೆಯ ಮೇಲೂ ತ್ರಿವರ್ಣ ಧ್ವಜ ಹಾರಾಡಬೇಕು ಎಂಬ ಸಂಕಲ್ಪದೊಂದಿಗೆ ಸ್ವಾತಂತ್ರ್ಯ ಅಮೃತಮಹೋತ್ಸವವನ್ನು ಅತ್ಯಂತ ವೈಭವದಿಂದ ನಡೆಸಲು ಸಿದ್ಧತೆ ನಡೆಸಿದ್ದರು. ಸ್ವಾತಂತ್ರ್ಯ ಅಮೃತ ಮಹೋತ್ಸವ ಹಿನ್ನಲೆಯಲ್ಲಿ ದೇಶದಲ್ಲೇ ಅತಿ ಹೆಚ್ಚು ಗಾತ್ರದ ರಾಷ್ಟ್ರಧ್ವಜ ನಿರ್ಮಾಣಕ್ಕೆ ಮುಂದಾಗಿದ್ದು, 12,800 ಮೀಟರ್‌ ಬಟ್ಟೆ ಬಳಸಿ ಸುಮಾರು 3,300 ಕೆ.ಜಿ. ತೂಕದ 203 ಅಡಿ ಅಗಲ,630 ಅಡಿ ಉದ್ದದ ಬೃಹತ್‌ ಧ್ವಜವನ್ನು ಹಾರಿಸುವ ಮೂಲಕ ಸುಮಾರು 2 ಸಾವಿರ ವಿದ್ಯಾರ್ಥಿ ಗಳು ಈ ಧ್ವಜವನ್ನು ಹಿಡಿದು ಸಂಭ್ರಮಿಸಿದರು.

ಬೃಹತ್‌ ರಾಷ್ಟ್ರಧ್ವಜಕ್ಕೆ ರಕ್ಷಣಾ ಇಲಾಖೆಯ ಹೆಲಿಕಾಫ್ಟರ್‌ ಮೂಲಕ ಪುಷ್ಪಾರ್ಚನೆ ಮಾಡಿಸಿದ್ದು, ನೆರೆದಿದ್ದ ಸಹಸ್ರಾರು ಮಂದಿಯಲ್ಲಿ ರೋಮಾಂಚನವನ್ನುಂಟು ಮಾಡಿತು.

ಸಾಂಸ್ಕೃತಿಕ ವೈಭವ: ಕ್ರೀಡಾಂಗಣದಲ್ಲಿ ಪೊಲೀಸ್‌, ಎನ್‌ಸಿಸಿ, ಗೃಹರಕ್ಷಕದಳ ಸೇರಿದಂತೆ ವಿವಿಧ ಶಾಲೆಗಳ ವಿದ್ಯಾರ್ಥಿಗಳಿಂದ ಪಥ ಸಂಚಲನದ ಜತೆಗೆ ಮಕ್ಕಳು ನಡೆಸಿಕೊಟ್ಟ ವಿವಿಧ ಮನರಂಜನಾ ಕಾರ್ಯಕ್ರಮಗಳು ಮನಸೂರೆಗೊಂಡವು ಎಂದರು.

Advertisement

ಸರ್ಕಾರದ ಮುಖ್ಯ ಸಚೇತಕ ಡಾ.ವೈ.ಎ.ನಾರಾಯಣಸ್ವಾಮಿ, ಶಾಸಕರಾದ ಕೆ.ಶ್ರೀನಿವಾಸಗೌಡ, ವಿಧಾನಪರಿಷತ್‌ ಸದಸ್ಯರಾದ ಗೋವಿಂದರಾಜು, ಎಂ.ಎಲ್‌.ಅನಿಲ್‌ಕುಮಾರ್‌, ಮಾಜಿ ಸಚಿವ ವರ್ತೂರು ಪ್ರಕಾಶ್‌, ಜಿಲ್ಲಾ—ಕಾರಿ ವೆಂಕಟ್‌ರಾಜಾ, ಜಿಪಂ ಸಿಇಒ ಯುಕೇಶ್‌ಕುಮಾರ್‌ ಎಸ್ಪಿ ಡಿ.ದೇವರಾಜ್‌, ಎಎಸ್ಪಿ ಸಚಿನ್‌ ಘೋರ್ಪಡೆ, ಡಿಡಿಪಿಐ ಕೃಷ್ಣಮೂರ್ತಿ, ಡಿಹೆಚ್‌ಒ ಡಾ.ಜಗದೀಶ್‌, ಡಿಎಸ್‌ ವಿಜಯಕುಮಾರ್‌, ಜಿಲ್ಲಾನೌಕರರ ಸಂಘದ ಅಧ್ಯಕ್ಷ ಜಿ.ಸುರೇಶ್‌ಬಾಬು,ದಿಶಾ ಸಮಿತಿ ಸದಸ್ಯ ಅಪ್ಪಿನಾರಾಯಣಸ್ವಾಮಿ ಇತರರಿದ್ದರು.

ವಾರಗಳ ಕಾಲ ಸತತ ಶ್ರಮ : ತಾಲೂಕಿನ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ಧ್ವಜ ಸಿದ್ಧಗೊಂಡಿದ್ದ ಈ ರಾಷ್ಟ್ರಧ್ವಜವನ್ನು ಕಳೆದೊಂದು ವಾರದಿಂದ ತಯಾರಿಸಲಾಗಿತ್ತು. ಹಲವಾರು ದರ್ಜಿಗಳು ರಾತ್ರಿ ಹಗಲು ಕೆಲಸ ಮಾಡಿ ಈ ಧ್ವಜ ನಿರ್ಮಿಸಿದ್ದಾರೆ. ಅವರನ್ನು ಸ್ವಾತಂತ್ರ್ಯದ ಅಮೃತ ಮಹೋತ್ಸವದ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಗಿದೆ. ಈ ಹಿಂದೆ 25 ಸಾವಿರ ಜನರನ್ನು ಸೇರಿಸಿ ಯೋಗ ದಿನ ಆಚರಿಸುವ ಮೂಲಕ ಕೋಲಾರ ಜಿಲ್ಲೆ ದಾಖಲೆ ಬರೆದಿದೆ ಅದೇ ರೀತಿ ಸ್ವಾತಂತ್ರ್ಯ ಅಮೃತ ಮಹೋತ್ಸವವನ್ನು ಅದ್ದೂರಿಯಿಂದ ದಾಖಲೆಯ ರೀತಿ ಆಚರಿಸುವ ಪ್ರಯತ್ನ ಯಶಸ್ವಿಯಾಗಿದೆ ಎಂದು ಸಂಸದ ಮುನಿಸ್ವಾಮಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next