ಪ್ಯಾರಿಸ್: ವಿಮಾನವನ್ನು ನೆಲದಿಂದ ಆರು ಅಡಿ ಎತ್ತರ ಸೆಳೆದು ನಿಲ್ಲಿಸಬಲ್ಲ ವಿಶ್ವದ ಬೃಹತ್ ಆಯಸ್ಕಾಂತ ಸಿದ್ಧಗೊಳ್ಳುತ್ತಿದೆ.
ಫ್ರಾನ್ಸ್‌ನ ದಕ್ಷಿಣ ಭಾಗದ ಸೈಂಟ್ ಪೌಲ್ ಡ್ಯುರಾನ್ಸ್ ಎಂಬಲ್ಲಿ ನಿರ್ಮಾಣವಾಗುತ್ತಿರುವ ಐಟಿಇಆರ್ ಕೇಂದ್ರದಲ್ಲಿ ಅದು ಸಿದ್ಧಗೊಳ್ಳುತ್ತಿದೆ. ಅದಕ್ಕೆ “ಸೆಂಟ್ರಲ್ ಸೊಲೊನಾಯ್ಡ’ (Central Solenoid) ಎಂದು ಹೆಸರು ಇರಿಸಲಾಗಿದೆ. ಜನರಲ್ ಆಟೋಮಿಕ್ಸ್ ಎಂಬ ಸಂಸ್ಥೆ ಅದನ್ನು ವಿನ್ಯಾಸಗೊಳಿಸಿ, ನಿರ್ಮಾಣದ ಹೊಣೆ ಹೊತ್ತುಕೊಂಡಿದೆ.
ಜಗತ್ತಿನ ಬೃಹತ್ ಆಯಸ್ಕಾಂತ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಸೆಂಟ್ರಲ್ ಸೊಲೊನಾಯ್ಡ ಅನ್ನು 6 ವಿಧಗಳಲ್ಲಿ ನಿರ್ಮಿಸಲಾಗುತ್ತದೆ. ಸಮ್ಮಿಳನ ಇಂಧನ (ಫ್ಯೂಷನ್ ಎನರ್ಜಿ) ಸೃಷ್ಟಿಸುವ ನಿಟ್ಟಿನಲ್ಲಿ ಅದನ್ನು ಬಳಕೆ ಮಾಡಲಾಗುತ್ತದೆ.
ಅದನ್ನು ಪೂರ್ತಿಯಾಗಿ ಜೋಡಿಸಿದ ಬಳಿಕ 59 ಅಡಿ ಎತ್ತರ ಮತ್ತು 14 ಅಡಿ ಅಗಲದ ಬೃಹತ್ ಆಕಾರ ತಳೆಯಲಿದೆ. ಅದರಲ್ಲಿ ಕಾಂತೀಯ ಶಕ್ತಿ ತುಂಬಿದ ಬಳಿಕ ನೆಲದಿಂದ ಆರು ಅಡಿ ಎತ್ತರಕ್ಕೆ ಒಂದು ವಿಮಾನವನ್ನು ಸೆಳೆದುಕೊಳ್ಳುವಷ್ಟು ಶಕ್ತಿಯನ್ನು ಅದು ಪಡೆದುಕೊಳ್ಳಲಿದೆ. ಭೂಮಿಯ ಗುರುತ್ವಾಕರ್ಷಣ ಶಕ್ತಿಗಿಂತ 2,80,000 ಪಾಲು ಹೆಚ್ಚಿನ ಶಕ್ತಿಯನ್ನು ಅದು ಹೊಂದಲಿದೆ.
ಐಟಿಆರ್ ಎಂದರೇನು?: ಜಗತ್ತಿನ ಅತ್ಯಂತ ದೊಡ್ಡ ಬದಲಿ ಇಂಧನ ಯೋಜನೆ ಇದಾಗಿದೆ. ಭಾರತ, ಚೀನ, ಐರೋಪ್ಯ ಒಕ್ಕೂಟ, ಚೀನ, ಅಮೆರಿಕ, ಜಪಾನ್, ಕೊರಿಯಾ ಈ ಯೋಜನೆಯಲ್ಲಿ ಪಾಲುದಾರಿಕೆ ಹೊಂದಿವೆ.