Advertisement

ಕ್ರೀಡಾ ಕ್ಷೇತ್ರಕ್ಕೆ ಭಾರೀ ನಷ್ಟ: ವಿಶ್ವ ಕ್ರೀಡಾ ಉದ್ಯಮಕ್ಕೆ 1.21 ಲಕ್ಷ ಕೋಟಿ ರೂ. ನಷ್ಟ

12:12 PM Jun 15, 2020 | mahesh |

ವಾಷಿಂಗ್ಟ್ ನ್‌: ಕೋವಿಡ್‌ -19 ಪ್ರಪಂಚದ ಎಲ್ಲ ಕೇತ್ರಗಳನ್ನು ಆರ್ಥಿಕ ಸಂಕಷ್ಟಕ್ಕೆ ದೂಡಿದೆ. ಇದರಿಂದ ಕ್ರೀಡಾ ಕ್ಷೇತ್ರವು ಹೊರತಾಗಿಲ್ಲ. ಕಳೆದ ಎರಡೂವರೆ ತಿಂಗಳುಗಳಿಂದ ವಿವಿಧ ಕ್ರೀಡಾ ಚಟುವಟಿಕೆಗಳು ನಡೆಯದೆ ಕ್ರೀಡಾ ಕ್ಷೇತ್ರಕ್ಕೆ ಭಾರೀ ನಷ್ಟ ಉಂಟಾಗಿದೆ. ಕೋವಿಡ್‌ -19 ಹಿನ್ನೆಲೆಯಲ್ಲಿ ವಿಶ್ವಾದ್ಯಂತ ಲಾಕ್‌ಡೌನ್‌ ಹೇರಿರುವ ಕಾರಣ ವಿವಿಧ ಕ್ರೀಡಾಕೂಟಗಳು ಮತ್ತು ಅವುಗಳಿಗೆ ಸಂಬಂಧಿಸಿದ ಚಟುವಟಿಕೆಗಳು ನಡೆಯದೆ ವಿಶ್ವ ಕ್ರೀಡಾ ಉದ್ಯಮವು ಸುಮಾರು 1.21 ಲಕ್ಷ ಕೋಟಿ ರೂ. ನಷ್ಟ ಅನುಭವಿಸಿದೆ.

Advertisement

ಪ್ರಸ್ತುತ ವಿವಿಧ ರಾಷ್ಟ್ರಗಳಲ್ಲಿ ಆರ್ಥಿಕ ಚೇತರಿಕೆ ದೃಷ್ಟಿಯಿಂದ ಕೆಲವೊಂದು ಕ್ರೀಡಾ ಚಟುವಟಿಕೆಗಳನ್ನು ನಿಧಾನವಾಗಿ ಆರಂಭಿಸಲಾಗಿದೆ. ಆದರೆ ಸದ್ಯ ಆರಂಭವಾಗಿರುವ ಎಲ್ಲ ಕ್ರೀಡಾಕೂಟಗಳು ಪ್ರೇಕ್ಷಕರಿಲ್ಲದೆ ನಡೆಯುವುದರಿಂದ ಅವರಿಂದ ಬರುವ ಆದಾಯ ಕುಂಠಿತವಾಗಲಿದೆ. ಕ್ರೀಡಾ ಉದ್ಯಮದ ಆದಾಯದ ಬಹುಪಾಲು ಜಾಹೀರಾತು, ನೇರ ಪ್ರಸಾರ ಮತ್ತು ಕ್ರೀಡೆಗಳಿಗೆ ಸಂಬಂಧಿಸಿದ ವಿವಿಧ ವ್ಯವಹಾರಗಳಿಂದ ಬರುವುದರಿಂದ ಈಗ ಆರಂಭ ಗೊಂಡಿರುವ ಕ್ರೀಡಾ ಚಟುವಟಿಕೆಗಳು ಈ ಕ್ಷೇತ್ರಕ್ಕೆ ಆದಾಯ ತಂದುಕೊಡುವಲ್ಲಿ ಪ್ರಮುಖ ಪಾತ್ರವಹಿಸಲಿವೆ. ಹಾಗಾಗಿ ಪ್ರೇಕ್ಷಕರಿಂದ ಸಂಗ್ರಹವಾಗುವ ಆದಾಯಕ್ಕಿಂತ ಇತರ ಮೂಲಗಳಿಂದ ಹಣ ಜಮೆ ಮಾಡಲು ವಿವಿಧ ದೇಶಗಳ ಕ್ರೀಡಾ ಆಡಳಿತ ಮಂಡಳಿಗಳು ಯೋಜನೆ ರೂಪಿಸುತ್ತಿವೆ. ಕ್ರೀಡಾ ಮಾಧ್ಯಮಗಳ ವರದಿಯ ಪ್ರಕಾರ, ಕೋವಿಡ್‌-19 ಪರಿಣಾಮದಿಂದಾಗಿ ಈ ವರ್ಷ ವಿಶ್ವ ಕ್ರೀಡಾ ಉದ್ಯಮಕ್ಕೆ 1.21 ಲಕ್ಷ ಕೋಟಿ ರೂ.ಗಿಂತಲೂ ಅಧಿಕ ನಷ್ಟ ಉಂಟಾಗಿದೆ. ಅಮೆರಿಕಕ್ಕೆ ಕ್ರೀಡಾ ಕ್ಷೇತ್ರದಲ್ಲಿ ಈ ಬಾರಿ 9 ಸಾವಿರ ಕೋಟಿ ರೂ. ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.

ಭಾರತದಲ್ಲಿ ಕ್ರೀಡೆ ಮತ್ತು ಅದಕ್ಕೆ ಸಂಬಂಧಿಸಿದ ಉದ್ಯಮಗಳಿಗೆ 30 ಸಾವಿರ ಕೋಟಿ ರೂ. ನಷ್ಟವಾಗಿದೆ. ತಜ್ಞರ ಪ್ರಕಾರ, ಭಾರತದಲ್ಲಿ ಕ್ರೀಡಾ ವ್ಯವಹಾರ ಮತ್ತು ಮಾರುಕಟ್ಟೆಗೆ ಸಂಬಂಧಿಸಿದಂತೆ 4,700 ಕೋಟಿ ರೂ. ನಷ್ಟ ಸಂಭವಿಸಲಿದೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next