Advertisement
ಸರಕಾರಿ ಶಾಲೆಯಲ್ಲಿ ಆಂಗ್ಲ ಶಿಕ್ಷಣ ಪ್ರಾರಂಭಗೊಂಡಿದ್ದು, ಜಿಲ್ಲೆಯ ಸ.ಹಿ.ಪ್ರಾ. ಶಾಲೆಯಲ್ಲಿ ಎಲ್‌ಕೆಜಿ, ಯುಕೆಜಿ, ಒಂದನೇ ತರಗತಿಗೆ ಸೇರ್ಪಡೆಯಾಗುವ ವಿದ್ಯಾರ್ಥಿಗಳ ಸಂಖ್ಯೆ ಏರಿಕೆಯಾಗಿದೆ. ಸರಕಾರದ ನಿಯಮಾನುಸಾರ 30 ವಿದ್ಯಾರ್ಥಿಗಳಿಗೆ ಓರ್ವ ಶಿಕ್ಷಕರ ಅನುಪಾತಕ್ಕೆ ಅನುಗುಣವಾಗಿ ಗರಿಷ್ಠ 30 ಮಕ್ಕಳನ್ನು ಮಾತ್ರ ದಾಖಲಿಸಬಹುದು. ಒಂದನೇ ತರಗತಿಗೆ 30ಕ್ಕಿಂತ ಅಧಿಕ ಅರ್ಜಿಗಳು ಬಂದಿರುವ ಶಾಲೆಯಲ್ಲಿ ಒಂದನೇ ತರಗತಿಯಲ್ಲಿ ವಿಭಾಗ ಪ್ರಾರಂಭಿಸುವ ಕುರಿತು ಚಿಂತನೆ ನಡೆಯುತ್ತಿದೆ. ಶಾಲೆಗಳು ಹೊಸದಾಗಿ ಶಿಕ್ಷಕರನ್ನು ನೇಮಿಸುವ ಕುರಿತು ಎಸ್‌ಡಿಎಂಸಿಗೆ ಪ್ರಸ್ತಾವನೆ ಸಲ್ಲಿಸಿವೆ.
Related Articles
Advertisement
ಕೆಪಿಎಸ್‌ಗಳಲ್ಲಿ ಶಾಲಾ ಹಂತದಲ್ಲಿಯೇ ಮಕ್ಕಳನ್ನು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ, ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಶಿಕ್ಷಕರನ್ನು ನೇಮಕ ಮಾಡಲಾಗುತ್ತದೆ. ಗುಣಮಟ್ಟದ ಶಿಕ್ಷಣಕ್ಕೆ ಒತ್ತು, ವಿದ್ಯಾರ್ಥಿಗಳ ಬೋಧನೆಗೆ ಸುಸಜ್ಜಿತ ಕೊಠಡಿ, ವ್ಯವಸ್ಥಿತ ಪ್ರಯೋಗಾಲಯ, ಪ್ರತ್ಯೇಕ ಕಂಪ್ಯೂಟರ್ ಲ್ಯಾಬ…, ಗುಣಮಟ್ಟದ ಗ್ರಂಥಾಲಯ, ಶುದ್ಧ ಕುಡಿಯುವ ನೀರು, ಆಟದ ಮೈದಾನ, ಬಾಲಕರು ಮತ್ತು ಬಾಲಕಿಯರಿಗೆ ಪ್ರತ್ಯೇಕ ಶೌಚಾಲಯ ವ್ಯವಸ್ಥೆ ಹೊಂದಿರುತ್ತದೆ.
ಜಿಲ್ಲೆಯಲ್ಲಿ ಸರಕಾ ರಿ ಆಂಗ್ಲ ಮಾಧ್ಯ ಮಕ್ಕೆ ದಾಖಲಾತಿ ಪ್ರಮಾಣ:
ಶೈಕ್ಷ ಣಿಕ ವರ್ಷ 2020-21 2021-22
ಶಾಲೆ ಹೆಸರು ಎಲ್‌ಕೆಜಿ ಯುಕೆಜಿ 1ನೇ ತ. ಎಲ್‌ಕೆಜಿ ಯುಕೆಜಿ 1ನೇ ತ.
ಸ. ಕೊಕ್ಕರ್ಣೆ 40 41 42 40 50 72
ಸ. ವಂಡ್ಸೆ 30 33 27 25 28 16
ಸ. ಮುನಿಯಾಲು 37 48 50 34 58 50
ಸ.ಹೊಸ್ಮಾರು 14 26 15 11 31 19
ಸ. ಕೋಟೇಶ್ವರ 33 30 36 36 33 72
ಸ. ಬಿದ್ಕಲ್‌ಕಟ್ಟೆ 26 34 68 26 60 62
ಸ.ಹಿರಿಯಡ್ಕ 76 60 40 53 90 77
ಸ. ಪಡುಬಿದ್ರಿ 12 12 13 40 41 28
1,055 ವಿದ್ಯಾರ್ಥಿಗಳು ಸೇರ್ಪಡೆ : ಜಿಲ್ಲೆಯಲ್ಲಿ ಕೆಪಿಎಸ್ ದಾಖಲಾತಿಯಲ್ಲಿ ಉಡುಪಿ ವಲಯದಲ್ಲಿ 329, ಕುಂದಾಪುರ ವಲಯದಲ್ಲಿ 289, ಕಾರ್ಕಳ 203, ಬ್ರಹ್ಮಾವರ ವಲಯದಲ್ಲಿ 231 ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 1,055 ವಿದ್ಯಾರ್ಥಿಗಳು ಎಲ್‌ಕೆಜಿ, ಯುಕೆಜಿ ಹಾಗೂ ಒಂದನೇ ತರಗತಿಯಲ್ಲಿ ನೋಂದಾಯಿಸಿಕೊಂಡಿದ್ದಾರೆ. ಪ್ರಸ್ತುತ ಕೆಲವು ಕೆಪಿಎಸ್ ಶಾಲೆಗಳಲ್ಲಿ ನೋಂದಣಿ ಪ್ರಕ್ರಿಯೆ ಇನ್ನೂ ಪ್ರಗತಿಯಲ್ಲಿದ್ದು, ಮುಂದಿನ ದಿನಗಳಲ್ಲಿ ದಾಖಲಾತಿ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ. 2020-21ನೇ ಸಾಲಿನಲ್ಲಿ ಕೆಪಿಎಸ್ ದಾಖಲಾತಿಯಲ್ಲಿ ಉಡುಪಿ ವಲಯದಲ್ಲಿ 213, ಕುಂದಾಪುರ ವಲಯದಲ್ಲಿ 227, ಕಾರ್ಕಳ 190, ಬ್ರಹ್ಮಾವರ ವಲಯದಲ್ಲಿ 213 ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 843 ವಿದ್ಯಾರ್ಥಿಗಳು ಎಲ್‌ಕೆಜಿ ಯುಕೆಜಿ ಹಾಗೂ ಒಂದನೇ ತರಗತಿಯಲ್ಲಿ ನೋಂದಾಯಿಸಿಕೊಂಡಿದ್ದರು.
ಕೊರೊನಾ ಮುನ್ನ ಕೆಲಸ ಮಾಡಿಕೊಂಡು ಮಕ್ಕಳನ್ನು ಆಂಗ್ಲ ಮಾಧ್ಯಮ ಶಾಲೆಗೆ ಕಳುಹಿಸುತ್ತಿದ್ದೆ ವು. ಆದರೆ ಕೊರೊನಾ ಲಾಕ್‌ಡೌನ್‌ನಿಂದ ಉದ್ಯೋಗವಿಲ್ಲದ ಕಾರಣದಿಂದ ಸರಿಯಾದ ಸಮಯಕ್ಕೆ ಮಕ್ಕಳ ಶಾಲಾ ಶುಲ್ಕ ಪಾವತಿಸಲು ಕಷ್ಟವಾಗುತ್ತಿದೆ. ಇದೀಗ ಸರಕಾರಿ ಶಾಲೆಯಲ್ಲಿ ಆಂಗ್ಲ ಮಾಧ್ಯಮ ಆರಂಭಿಸುತ್ತಿರುವುದು ಸಂತೋಷದ ವಿಷಯ.– ಕೃಷ್ಣ , ಉಡುಪಿ ನಿವಾಸಿ
ಜಿಲ್ಲೆಯಲ್ಲಿ ಕೆಪಿಎಸ್ ಶಾಲೆಗಳಲ್ಲಿ ಎಲ್‌ಕೆಜಿ, ಯುಕೆಜಿ ಹಾಗೂ ಒಂದನೇ ತರಗತಿಗೆ 1,055 ವಿದ್ಯಾರ್ಥಿಗಳು ಸೇರ್ಪಡೆಯಾಗಿದ್ದಾರೆ. ಕಳೆದ ಬಾರಿ 843 ಮಕ್ಕಳ ಸೇರ್ಪಡೆಯಾಗಿದ್ದರು. ಸರಕಾರಿ ಆಂಗ್ಲ ಮಾಧ್ಯಮಾ ಶಾಲೆಗಳಿಗೆ ಸೇರ್ಪಡೆಯಾಗುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗುತ್ತಿರುವುದು ಉತ್ತಮ ಬೆಳವಣಿಗೆ.– ಎನ್. ಎಚ್. ನಾಗೂರ, ಡಿಡಿಪಿಐ, ಉಡುಪಿ
-ತೃಪ್ತಿ ಕುಮ್ರಗೋಡು