Advertisement

ಬೃಹತ್‌ ಸೈಕಲ್‌ ಜಾಥಾಕ್ಕೆ ಚಾಲನೆ

03:34 PM Jan 21, 2020 | Suhan S |

ಶಿಕಾರಿಪುರ: ಯುವ ಜನತೆ ಭಾರತ ಪ್ರಗತಿಗೆ ಕೊಡುಗೆ ನೀಡಬೇಕು ಎಂದು ನಗರ ಪೊಲೀಸ್‌ ಠಾಣೆಯ ಸಹಾಯಕ ಸಬ್‌ ಇನ್ಸಪೆಕ್ಟರ್‌ ಪ್ರಭಾಕರ ಜಿ. ಹೇಳಿದರು.

Advertisement

ಪಟ್ಟಣದ ಕುಮದ್ವತಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಹೊಸದಾಗಿ ಸ್ಥಾಪನೆಯಾಗಿರುವ ರಾಷ್ಟ್ರೀಯ ಸೇವಾ ಯೋಜನೆ ಘಟಕ ಉದ್ಘಾಟನೆ ಮತ್ತು ಫಿಟ್‌ ಇಂಡಿಯ ಸೈಕಲ್‌ ಜಾಥಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ರಾಷ್ಟ್ರೀಯ ಸೇವಾ ಯೋಜನೆ ಶಾಲಾ ಕಾಲೇಜು ಸ್ಥಾಪನೆಯಾಗಿರುವ ಉತ್ತಮ ಘಟಕವಾಗಿದ್ದು, ಇದರ ಅಡಿಯಲ್ಲಿ ಹಲವಾರು ಸಮಾಜಮುಖೀ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಭಾರತದ ಪ್ರಗತಿಗಾಗಿ ಸೇವಾ ಮನೋಭಾವ ರೂಢಿಸಿಕೊಂಡು ತಮ್ಮದೇ ಆದ ಕೊಡುಗೆ ನೀಡಬೇಕು ಎಂದರು.

ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆಯ ಆಡಳಿತ ಸಮನ್ವಯಾಧಿಕಾರಿ ಕುಬೇರಪ್ಪ ಕೆ. ಮಾತನಾಡಿ, ರಾಷ್ಟ್ರೀಯ ಸೇವಾ ಯೋಜನೆಯು ವಿಶಾಲ ಅರ್ಥವನ್ನು ಹೊಂದಿದ್ದು, ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಗ್ರಾಮ ರಾಜ್ಯದ ಕನಸನ್ನು ನನಸಾಗಿಸಲು ಎಲ್ಲರೂ ನಾನಾ ರೀತಿಯ ಕಾರ್ಯಕ್ರಮಗಳಾದ ಪರಿಸರ ಸಂರಕ್ಷಣೆ, ಆರೋಗ್ಯ ಸಂರಕ್ಷಣೆ, ಸಾಕ್ಷರತಾ ಗುಣಮಟ್ಟದ ಜಾಗೃತಿ ಮೂಡಿಸುವುದು, ಜಲಸಂಪನ್ಮೂಲವನ್ನು ಉಳಿಸುವುದರ ಕುರಿತು ಗ್ರಾಮೀಣ ಜನರಿಗೆ ಅರಿವನ್ನು ಮೂಡಿಸುವ ಕೆಲಸ ಮಾಡಬೇಕಾಗಿದೆ.

ಅಲ್ಲದೇ ರೈತರು ಹೆಚ್ಚಿರುವ ಗ್ರಾಮಗಳಲ್ಲಿ ಅವರಿಗೆ ಸರ್ಕಾರಗಳಿಂದ ದೊರೆಯುವಂತಹ ಸೌಲಭ್ಯ ತಿಳಿಸಿಕೊಡುವ ಜವಾಬ್ದಾರಿ ಅಕ್ಷರಸ್ಥರಾದ ನಮಗೆ ಇರುತ್ತದೆ. ಪ್ರತಿಯೊಬ್ಬರಿಗೂ ಇಚ್ಛಾಶಕ್ತಿಯು ಬೇಕಾಗುತ್ತದೆ. ಅನೇಕ ಪದವಿಗಳನ್ನು ಹೊಂದಿರುವ ಗ್ರಾಮೀಣ ಯುವಕ, ಯುವತಿಯರು ತಮ್ಮ ಕೀಳರಿಮೆ ಮನೋಭಾವದಿಂದ ತಮ್ಮ ಗ್ರಾಮಗಳಲ್ಲಿ ಕೆಲಸ ನಿರ್ವಹಿಸದೇ ಸಣ್ಣ ಪುಟ್ಟ ಕೆಲಸಗಳ ಬೆನ್ನ ಹತ್ತಿದ್ದಾರೆ. ಆದರೆ ಗ್ರಾಮಗಳಲ್ಲಿಯೇ ಹಲವಾರು ಸ್ವಉದ್ಯೋಗಗಳನ್ನು ಕೈಗೊಂಡು ತಮ್ಮ ಕುಟುಂಬದ ಆದಾಯದೊಂದಿಗೆ ದೇಶದ ಆದಾಯ ಹೆಚ್ಚಿಸಲು ಅನೇಕ ಮಾರ್ಗಗಳಿವೆ. ಆ ಕಡೆಗೆ ಹೆಚ್ಚು ಗಮನ ಹರಿಸಬೇಕು ಎಂದರು.

ಕುಮದ್ವತಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಜಯಶ್ರೀ ವಿ.ಆರ್‌, ಪ್ರಾಚಾರ್ಯ ವಿದ್ಯಾಶಂಕರ್‌ ಕೆ. ಎಸ್‌., ಡಾ.ಗದಗ್‌, ಬೋಧಕ, ಬೋಧಕೇತರ ಸಿಬ್ಬಂದಿ ಹಾಗೂ ಪ್ರಶಿಕ್ಷಣಾರ್ಥಿಗಳು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next