Advertisement

ಹುಬ್ಬಳ್ಳಿ ಜಯಭೇರಿ; ಕೊನೆ ಹಂತದಲ್ಲಿ ಬಿಜಾಪುರಕ್ಕೆ 4 ವಿಕೆಟ್‌ ಸೋಲು

06:00 AM Aug 17, 2018 | Team Udayavani |

ಬೆಂಗಳೂರು: ಪೂರ್ಣ ಬೌಲರ್‌ಗಳ ಪರವಾಗಿದ್ದ ಕೆಪಿಎಲ್‌ 7ನೇ ಆವೃತ್ತಿಯ 2ನೇ ದಿನದ ಪಂದ್ಯದಲ್ಲಿ ಹುಬ್ಬಳ್ಳಿ ಟೈಗರ್ಸ್‌ ತಂಡ ಬಿಜಾಪುರ ಬುಲ್ಸ್‌ ಎದುರು ರೋಚಕ ಗೆಲುವು ಸಾಧಿಸಿತು. ಕೇವಲ 129 ರನ್‌ಗಳ ಸಣ್ಣ ಮೊತ್ತ ದಾಟಲು ಪರದಾಡಿ
ದರೂ ಕೊನೆಯ ಹಂತದಲ್ಲಿ ಹುಬ್ಬಳ್ಳಿ 4 ವಿಕೆಟ್‌ ಜಯ ಸಾಧಿಸಿತು. 

Advertisement

ಮೊದಲು ಬ್ಯಾಟಿಂಗ್‌ ಮಾಡಿದ ಬಿಜಾಪುರ ಬುಲ್ಸ್‌ 20 ಓವರ್‌ಗಳಲ್ಲಿ 7 ವಿಕೆಟ್‌ ಕಳೆದುಕೊಂಡು 128 ರನ್‌ ಗಳಿಸಿತ್ತು. ಇದನ್ನು ಬೆನ್ನತ್ತಿದ ಹುಬ್ಬಳ್ಳಿ 18.5 ಓವರ್‌ಗಳಲ್ಲಿ 6 ವಿಕೆಟ್‌ ಕಳೆದುಕೊಂಡು 131 ರನ್‌ ಗಳಿಸಿತು.ಹುಬ್ಬಳ್ಳಿ ಪರ ಮೊಹಮ್ಮದ್‌ ತಾಹಾ 62 ರನ್‌ಗಳಿಸಿದರೆ, ನಿತಿನ್‌ ಭಿಲ್ಲೆ ಗೆಲುವಿನ 15 ರನ್‌ಗಳಿಸಿದರು.

ಬಿಜಾಪುರ ಕುಸಿತ: ಟಾಸ್‌ ಗೆದ್ದು ಬ್ಯಾಟಿಂಗ್‌ ನಡೆಸಿದ ಭರತ್‌ ಚಿಪ್ಲಿ ನಾಯಕತ್ವದ ಬಿಜಾಪುರ ಬುಲ್ಸ್‌ ತಂಡ ಹುಬ್ಬಳ್ಳಿ ಟೈಗರ್ಸ್‌
ಬೌಲಿಂಗ್‌ ದಾಳಿಗೆ ಸಿಲುಕಿ ತೀವ್ರ ಕುಸಿತ ಅನುಭವಿಸಿತು. ನಿಗದಿತ 20 ಓವರ್‌ ಮುಗಿದಾಗ ಆ ತಂಡಕ್ಕೆ ಗಳಿಸಲು
ಸಾಧ್ಯವಾಗಿದ್ದು 7 ವಿಕೆಟ್‌ಗೆ ಕೇವಲ 128 ರನ್‌ ಮಾತ್ರ. ಹುಬ್ಬಳ್ಳಿ ನಾಯಕ ವಿನಯ್‌ ಕುಮಾರ್‌ ನೇತೃತ್ವದಲ್ಲಿ ನಡೆದ ಶಿಸ್ತುಬದಟಛಿ ದಾಳಿಯಿಂದಾಗಿ ಒಂದೊಂದು ರನ್‌ಗೂ ಬಿಜಾಪುರ ಬುಲ್ಸ್‌ ಪರದಾಡಿತು.

ಬಿಜಾಪುರ ಪರ ನಾಯಕ ಚಿಪ್ಲಿ ಬ್ಯಾಟಿಂಗ್‌ ಆರಂಭಿಸಿದರು. ಅವರು 25 ಎಸೆತ ಎದುರಿಸಿದರೂ ಗಳಿಸಲು ಸಾಧ್ಯವಾಗಿದ್ದು ಕೇವಲ 29 ರನ್‌ ಮಾತ್ರ.

ಇದು ಬ್ಯಾಟಿಂಗ್‌ ಯಾವ ಮಟ್ಟಿಗೆ ನಿಧಾನವಾಗಿತ್ತು ಎಂಬುದರ ಸಂಕೇತ.ಮತ್ತೂಬ್ಬ ಆರಂಭಿಕ ಶಿಶಿರ್‌ ಭವಾನೆ ಶೂನ್ಯ ಸಂಪಾದನೆ ಮಾಡಿದರು. 2ನೇ ಕ್ರಮಾಂಕದಲ್ಲಿ ಬಂದ ಅನುರಾಗ್ ಬಾಜಪೇಯಿ ಅಂತೂ 23 ಎಸೆತ ಎದುರಿಸಿ ಬರೀ 16 ರನ್‌ ಗಳಿಸಿದರು. ಇದು ಬಿಜಾಪುರ ಬುಲ್ಸ್‌ ರನ್‌ಗತಿ ಪೂರ್ಣವಾಗಿ ನಿಧಾನಗೊಳ್ಳಲು ಕಾರಣವಾಯಿತು.

Advertisement

ಬಿಜಾಪುರ ಪರ ವೇಗವಾಗಿ ಆಡಿದ್ದೆಂದರೆ ಎಂ.ಜಿ.ನವೀನ್‌ ಮಾತ್ರ. ಅವರೊಬ್ಬರು ಸ್ಫೋಟಿಸಿದೆ ಹೋಗಿದ್ದರೆ ಅದರ ಮೊತ್ತ
128ಕ್ಕೂ ಮುಟ್ಟುತ್ತಿರಲಿಲ್ಲ. 25 ಎಸೆತ ಎದುರಿಸಿದ ನವೀನ್‌ 4 ಸಿಕ್ಸರ್‌ ಮತ್ತು 1 ಬೌಂಡರಿ ನೆರವಿನಿಂದ 44 ರನ್‌ ಗಳಿಸಿದರು.ಕೊನೆಕೊನೆಯ ಹಂತದಲ್ಲಿ ಇವರು ಸ್ಫೋಟಿಸಿದ್ದರಿಂದ ಹುಬ್ಬಳ್ಳಿಗೆ ಗುರಿ ಸ್ವಲ್ಪ ದೊಡ್ಡದಾಯಿತು. ಇವರನ್ನು ಬಿಟ್ಟರೆ ರೋನಿತ್‌ ಮೋರೆ 0,ಸುನೀಲ್‌ ರಾಜು 4 ರನ್‌ ಗಳಿಸಿದರು.ಭರವಸೆಯ ಬ್ಯಾಟ್ಸ್‌ಮನ್‌ ಕೌನೈನ್‌ ಅಬ್ಟಾಸ್‌ ಕೂಡ ವಿಫ‌ಲರಾದರು. ಅವರು 6ಎಸೆತ ಎದುರಿಸಿ 4 ರನ್‌ ಗಳಿಸಿದರು. ಒಟ್ಟಾರೆ ಇದು ಹುಬ್ಬಳ್ಳಿ ಬೌಲಿಂಗ್‌ ಸಾಮರ್ಥ್ಯದ ಪೂರ್ಣ ಪರಿಚಯ ಮಾಡಿಕೊಟ್ಟಿತು.

ಹುಬ್ಬಳ್ಳಿ ಪರ ನಾಯಕ ವಿನಯ್‌ ಕುಮಾರ್‌ 1 ವಿಕೆಟ್‌ ಪಡೆದರೂ ಬರೀ 19 ರನ್‌ ನೀಡಿ ನಿಯಂತ್ರಣ ಸಾಧಿಸಿದರು.
ಇನ್ನು ಲೆಗ್‌ಸ್ಪಿನ್ನರ್‌ ಮಹೇಶ್‌ ಪಟೇಲ್‌ 16 ರನ್‌ಗೆ 3 ವಿಕೆಟ್‌ ಪಡೆದರು. ಮತ್ತೂಂದು ಕಡೆ ಐಜಿ ಅನಿಲ್‌ 28 ರನ್‌ ನೀಡಿ 2 ವಿಕೆಟ್‌ ಪಡೆದರು.

Advertisement

Udayavani is now on Telegram. Click here to join our channel and stay updated with the latest news.

Next