ಹುಬ್ಬಳ್ಳಿ: ತಾಲೂಕು 6ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಹಿರಿಯ ಸಾಹಿತಿ ಎಂ.ಎಂ. ಕನಕೇರಿ ಅವರು ಆಯ್ಕೆಯಾಗಿದ್ದಾರೆ.
ಮೇ ತಿಂಗಳಲ್ಲಿ ನಡೆಯುವ ಸಮ್ಮೇಳನಕ್ಕೆ ಸರ್ವಾಧ್ಯಕ್ಷರನ್ನಾಗಿ ಕನಕೇರಿ ಅವರನ್ನು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಕಾರ್ಯಕಾರಿ ಮಂಡಳಿ ಸರ್ವಾನುಮತದಿಂದ ಆಯ್ಕೆ ಮಾಡಿದ್ದು, ಶನಿವಾರ ಜಿಲ್ಲಾ ಕಸಾಪ ಅಧ್ಯಕ್ಷ ಡಾ| ಲಿಂಗರಾಜ ಅಂಗಡಿ ನೇತೃತ್ವದಲ್ಲಿ ತಾಲೂಕು ಕಸಾಪ ಪದಾಧಿಕಾರಿಗಳು ಕನಕೇರಿ ಅವರ ನಿವಾಸಕ್ಕೆ ತೆರಳಿ ಸನ್ಮಾನಿಸಿ ಆಮಂತ್ರಣ
ನೀಡಿದರು.
ಪ್ರೊ| ಕೆ.ಎಸ್. ಕೌಜಲಗಿ, ಪ್ರೊ| ಕೆ.ಎ. ದೊಡಮನಿ, ಡಾ| ರಾಮು ಮೂಲಗಿ, ಬಿ.ಎಸ್. ಮಾಳವಾಡ, ವೆಂಕಟೇಶ ಮರೇಗುದ್ದಿ, ಮೃತ್ಯುಂಜಯ ಮಟ್ಟಿ, ಉದಯಚಂದ್ರ ದಿಂಡವಾರ, ಸಂಧ್ಯಾ ದಿಕ್ಷೀತ, ಸುಮಂಗಲಾ ಅಂಗಡಿ ಮೊದಲಾದವರು ಈ ಸಂದರ್ಭದಲ್ಲಿದ್ದರು.
ಎಂ.ಎಂ. ಕನಕೇರಿ ಅವರು 45 ಕೃತಿಗಳನ್ನು ರಚಿಸಿದ್ದಾರೆ. 48 ವರ್ಷಗಳಿಂದ ಸುಶೀಲ ಪತ್ರಿಕೆಯ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಹಲವು ಲೇಖಕರಿಗೆ, ಕವಿಗಳಿಗೆ ಪ್ರಚಾರ ನೀಡಿ ಪ್ರೋತ್ಸಾಹಿಸಿದ್ದಾರೆ. ಸರಳ, ಸಜ್ಜನ ಸುಂಸ್ಕೃತರಾದ ಶ್ರೀಯುತರ ಸಾಹಿತ್ಯ ಸೇವೆ ಪರಿಗಣಿಸಿ ಆಯ್ಕೆ ಮಾಡಲಾಗಿದೆ ಎಂದು ಡಾ| ಲಿಂಗರಾಜ ಅಂಗಡಿ ತಿಳಿಸಿದ್ದಾರೆ.