Advertisement
ಇದು ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಕಮಲಾಪುರ ಮೂಲದ ಗುಂಡೂರಾವ ದೇಸಾಯಿ ಅವರು ಖಾರವಾದ ಪ್ರತಿಕ್ರಿಯೆ.
Related Articles
Advertisement
ಪ್ರಧಾನಿಗೆ ಪತ್ರ ಬರೆಯುವೆ: ಖಾದಿ, ರಾಷ್ಟ್ರಧ್ವಜಕ್ಕೆ ಕೈ ಹಾಕಿರುವ ಸಂದರ್ಭದಲ್ಲಿ ಹೋರಾಟಗಳು ಅನಿವಾರ್ಯ. ರಾಷ್ಟ್ರದ ವಿಚಾರ ಬಂದಾಗ ವಯಸ್ಸು ನೋಡಲ್ಲ. ಯಾವುದೇ ಹೋರಾಟಗಳಿಗೆ ಕರೆದರೂ ಬರುತ್ತೇನೆ. ಖಾದಿ ಕಾರ್ಯರ್ತರು, ರಾಷ್ಟ್ರಪ್ರೇಮಿಗಳು, ಮಹಾತ್ಮಗಾಂಧಿ ಸಿದ್ಧಾಂತ ಮೇಲೆ ನಂಬಿಕೆಯಿಟ್ಟವರ ಭಾವನೆಗಳಿಗೆ ಧಕ್ಕೆ ತರುವ ಕೆಲಸ ಮಾಡಿರುವುದನ್ನು ಸಹಿಸಿಕೊಳ್ಳಲ್ಲ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆಯುತ್ತೇನೆ. ಸ್ವಾತಂತ್ರ್ಯ ಹೋರಾಟಗಾರ, ಖಾದಿ ಪ್ರಿಯನಾಗಿ ಇಷ್ಟು ಮಾಡದಿದ್ದರೆ ಹೇಗೆ? ಯಾರಾದರೂ ಕರೆದುಕೊಂಡು ಹೋದರೆ ದೆಹಲಿಗೆ ಹೋಗಿ ಪ್ರಧಾನಿಗಳನ್ನು ಭೇಟಿಯಾಗಲು ಸಿದ್ಧನಿದ್ದೇನೆ ಎನ್ನುತ್ತಾರೆ ಗುಂಡೂರಾವ ದೇಸಾಯಿ.
ಕಾಂಗ್ರೆಸ್ ಎಚ್ಚರವಾಗಿಲ್ಲ: ರಾಷ್ಟ್ರ ಸಂಹಿತೆ ತಿದ್ದುಪಡಿ ಖಾದಿ ಬಿಡಿ ಎನ್ನುವ ಮನಸ್ಥಿತಿ ತೋರುತ್ತದೆ. ಇದಕ್ಕೆ ಪ್ರತಿಯಾಗಿ ಯಾವ ಪಾಠ ಕಲಿಸಬೇಕೆನ್ನುವ ಬುದ್ಧಿ ಜನರಲ್ಲಿದೆ. ಖಾದಿ ತೊಡಬೇಕೆಂದು ಅರಿವು ಮೂಡಿಸುವ ಕೆಲಸ ಸರಕಾರ ಮಾಡಬೇಕಿತ್ತು ಆದರೆ ಸರಕಾರ ಮಾಡಿರುವುದು ಘೋರ ಅನ್ಯಾಯ. ಕೇಂದ್ರದ ಈ ನಿರ್ಧಾರ ನನಗೆ ಬಹಳ ನೋವಾಗಿದೆ. ಅವರಿಗೆ ಅಧಿಕಾರ ಇದೆ ಎನ್ನುವ ಕಾರಣಕ್ಕೆ ಇಂತಹ ನಿರ್ಧಾರಗಳು ಸರಿಯಲ್ಲ. ಅಧಿಕಾರ ಶಾಶ್ವತವಲ್ಲ ಎಂಬುದನ್ನು ಎಲ್ಲಾ ರಾಜಕೀಯ ಪಕ್ಷಗಳು ಅರಿತುಕೊಳ್ಳಬೇಕು. ಖಾದಿ ಬಗ್ಗೆ ಇಂದಿನ ಕಾಂಗ್ರೆಸ್‌ನವರಿಗೆ ಇನ್ನೂ ಎಚ್ಚರವಾಗಿಲ್ಲ. ಖಾದಿಯ ಹಾಗೂ ಕಾಂಗ್ರೆಸ್ ನಡುವಿನ ಅವಿನಾಭಾವ ಸಂಬಂಧವನ್ನು ಮರೆಯಬಾರದು. ಹಿಂದಿನ ಕಾಂಗ್ರೆಸ್ ಹೋರಾಟ ತಿಳಿಸಿಕೊಡಬೇಕಾಗಿದೆ. ಇದು ಹೋರಾಟದ ರೂಪ ಪಡೆದುಕೊಳ್ಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.